ಮನೆ ರಾಜ್ಯ ಪಾರಂಪರಿಕ ವಿಚಾರಗಳ ರವಾನೆಗೆ ಪಾರಂಪರಿಕ ನಡಿಗೆ ಸಹಕಾರಿ : ಶಾಸಕ ಎಲ್.ನಾಗೇಂದ್ರ

ಪಾರಂಪರಿಕ ವಿಚಾರಗಳ ರವಾನೆಗೆ ಪಾರಂಪರಿಕ ನಡಿಗೆ ಸಹಕಾರಿ : ಶಾಸಕ ಎಲ್.ನಾಗೇಂದ್ರ

0

ಮೈಸೂರು(Mysuyru): ಐತಿಹಾಸಿಕವಾದ ವಿಚಾರಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಿಳಿಸುವುದಕ್ಕೆ ಪಾರಂಪರಿಕ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರಾದ ಎಲ್.ನಾಗೇಂದ್ರ ಅವರು ಅಭಿಪ್ರಾಯವ್ಯಕ್ತಪಡಿಸಿದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆÀ ಇಲಾಖೆ ವತಿಯಿಂದ ಪುರಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಪಾರಂಪರಿಕ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾರಂಪರಿಕ ನಡಿಗೆ ಅದ್ಭುತವಾಗಿ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಸೇರಿ ಮೈಸೂರು ನಗರದ ಪಾರಂಪರಿಕ ಮಾಹಿತಿಯನ್ನು ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವುದಾಗಿದೆ ಎಂದರು.

ಕೆ.ಆರ್.ವೃತ್ತ,ಕೆ.ಆರ್.ಮಾರ್ಕೆಟ್, ಚಿಕ್ಕ ಗಡಿಯಾರ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳನ್ನು ಪರಿಚಯಿಸುವ ಕೆಲಸವನ್ನು ಸರ್ಕಾರ ಪ್ರತಿ ವರ್ಷದಂತೆ ಈ ವರ್ಷ ಕೂಡ ಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್, ಸಮಿತಿ ಅಧ್ಯಕ್ಷರಾದ ಗೋಪಾಲ್‌ರಾಯರು, ರಂಗರಾಜು, ವಸುಂಧರ ದೊರೆಸ್ವಾಮಿ, ಪ್ರೊಫೆಸರ್ ರಂಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿಂದಿನ ಲೇಖನರೈತ ದಸರಾ ಕ್ರೀಡಾಕೂಟ: ಪ್ರೇಕ್ಷಕರ ಮನರಂಜಿಸಿದ ಕ್ರೀಡೆಗಳು
ಮುಂದಿನ ಲೇಖನಕವಿತೆ ಆಲಿಸುವುದೊಂದು ಅದೃಷ್ಟ: ಸಚಿವ ಎಸ್.ಟಿ.ಸೋಮಶೇಖರ್