1. ಬಾಳೆ ಎಲೆಯನ್ನು ಸುಟ್ಟು ಅದರ ಬಸ್ವವನ್ನು ಜೇನುತುಪ್ಪದಲ್ಲಿ ನೆಕ್ಕುತ್ತಾ ಇರಲು ಬಿಕ್ಕಳಿಕೆ ಗುಣವಾಗುವುದು.
2. ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ನೀರು ನುಂಗುತ್ತಾ ಇರಬೇಕು. ಆಗಾಗ ಅಗಿದು ಚಪ್ಪರಿಸುತ್ತಾ ಇದ್ದರೆ ಬಿಕ್ಕಳಿಕೆ ನಿವಾರಣೆಯಾಗುತ್ತದೆ.
3. ಕುಂಬಳಕಾಯಿ ತೊಟ್ಟನ್ನು ನೀರಿನಲ್ಲಿ ಅರೆದು, ಜೇನುತುಪ್ಪದಲ್ಲಿ ನೆಕ್ಕಿಸುತ್ತಾ ಇರಲು ಗುಣವಾಗುವುದು.
ಬೆವರು ಗುಳ್ಳೆ :-
1. ಪ್ರತಿದಿನವೂ ತಣ್ಣಿರು ಸ್ನಾನ ಮಾಡುವುದರಿಂದ ಬೆವರು ಗುಳ್ಳೆ ನಿವಾರಣೆ ಆಗುವುದು.
2. ಪ್ರತಿದಿನವೂ ಶಾರೀರಾದ್ಯಂತ ಅಳಲೆಕಾಯಿ ಪುಡಿಯನ್ನು ನೀರಿನಲ್ಲಿ ನೆನೆಸಿ ಮೈಗೆ ಚೆನ್ನಾಗಿ ಮಸಾಜು ಮಾಡಿ, ತಣ್ಣೀರಾಗಲಿ ಬಿಸಿ ನೀರಾಗಲಿ ಸ್ನಾನ ಮಾಡಿದರೆ ಬೆವರು ಗುಳ್ಳೆ ಏಳುವುದಿಲ್ಲ
3. ಪ್ರತಿದಿನವೂ ನೆಲ್ಲಿಕಾಯಿಯ ಚೂರ್ಣವನ್ನು ಹಾಲಿನಲ್ಲಿ ಕಲಸಿ ಮೈಗೆ ಸವರಿಕೊಂಡು ಸ್ಥಾನ ಮಾಡಿದರೆ ಗುಳ್ಳೆಗಳು ಏಳುವುದಿಲ್ಲ
4. ಸ್ನಾನ ಮಾಡುವಾಗ ಸಾಬೂನನ್ನು ಉಪಯೋಗಿಸದೆ ಸೀಗೆ ಕಾಯಿ ಪುಡಿ,ಚಿಗರೆ ಪುಡಿ, ಕಡಲೆ ಹಿಟ್ಟಿನಲ್ಲಿ ಮೈ ಉಜ್ಜಿ ಸ್ನಾನ ಮಾಡುವುದರಿಂದ ಬೆವರು ಗುಳ್ಳೆ ಏಳುವುದಿಲ್ಲ
5. ಎಳ್ಳೆಣ್ಣೆಯನ್ನು ಮೈಗೆಲ್ಲಾ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಬೆವರು ಗುಳ್ಳೆ ಏಳುವುದಿಲ್ಲ.
6. ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಅದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ರುಬ್ಬಿ,ಕುದಿಸಿ,ಮೈಗೆ,ತಲೆಗೆ ಚೆನ್ನಾಗಿ ಉಜ್ಜಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಬೆವರು ಗುಳ್ಳೆ ಏಳುವುದಿಲ್ಲ