ಕೆಲವು ದಶಕಗಳ ಹಿಂದಿಗಿಂತ ಇತ್ತೀಚಿನ ದಿನಗಳಲ್ಲಿ ಹೈಬಿಪಿ ಸಾಮಾನ್ಯವಾಗಿದೆ. ಈ ಯಾಂತ್ರಿಕ ಯುಗದಲ್ಲಿ ನಿತ್ಯ ಜೀವನದಲ್ಲಿ ಎರಾಗುವ ಅನೇಕ ಒತ್ತಡಗಳು,ಗಡಿಬಿಡಿ ಆತುರಗಳು, ವ್ಯಕ್ತಿಗತವಾಗಿ ಹೆಚ್ಚಿನ ಹೊಣೆ, ಚಿಂತೆ ಧೂಮಪಾನ ಚಟ. ರಕ್ತದಲ್ಲಿ ಶೇಖರಗೊಂಡ ಕೊಲೆಸ್ಟರಾಲ್,ಡಯಾಬಿಟಿಸ್ ಮೊದಲಾದವು ಹೈಬೀಪಿಗೆ ಕಾರಣವಾಗುತ್ತವೆ
ಈ ದಿನಗಳಲ್ಲಿ ರಕ್ತದೊತ್ತಡ ನಿಯಂತ್ರಿಸಲು,ಅನೇಕ ಅದ್ಭುತ ಔಷಧಗಳು ಮಾರುಕಟ್ಟೆಯಲ್ಲಿ ದೊರಕುತ್ತಿವೆ ಅಂತಹವುಗಳನ್ನು ಬಳಸದೆ, ಡಾಕ್ಟರನ್ನು ನೋಡದೆ, ಅದಕ್ಕದೆ ಕಡಿಮೆಯಾಗುವುದೆಂದು ನಿಶ್ಚಿತರಾಗಿದ್ದರೆ ಮಾತ್ರ ಪಾರ್ಶ್ವ ವಾಯು, ಹೃದ್ರೋಗಗಳು ಕಿಡ್ನೀ ಫೇಲ್ಯೂರ್ ತರಹದ ಬೇರೆ ಬೇರೆ ಅಪಾಯಗಳಿಗೆ ತುತ್ತಾಗುವ ಸಂಭವವಿದೆ. ಅದ್ದರಿಂದ ರಕ್ತದೋತ್ತಡದ ವಿಷಯದಲ್ಲಿ ಪ್ರತಿಯೊಬ್ಬರು ಜಾಗರೂಕತೆಯಿಂದ ರುವುದು ಅಗತ್ಯ.
ಸಿಸ್ಟಾಲಿಕ್- ಡಯಾಸ್ಟಾಲಿಕ್ ಬ್ಲಡ್ ಪ್ರೆಷರ್
ನಮ್ಮ ಹೃದಯ ಪ್ರತಿಕ್ಷಣವೂ ರಕ್ತನಾಳಗಳೊಳಕ್ಕೆ ರಕ್ತವನ್ನು ಪಂಪ್ ಮಾಡುತ್ತಾ ದೇಹಕ್ಕೆ ರಕ್ತವನ್ನು ಸರಬರಾಜು ಮಾಡುತ್ತಿರುತ್ತದೆ.ಹೀಗೆ ಪಂಪ್ ಮಾಡುವ ಸಲುವಾಗಿ ಹೃದಯ ಸಂಕುಚಿಸಿದಾಗ, ರಕ್ತವು ಹೃದಯದಿಂದ ರಕ್ತನಾಳಗಳೊಳಕ್ಕೆ ವೇಗವಾಗಿ ಹರಿಯುತ್ತದೆ. ಈ ಒತ್ತಡವನ್ನು ಸಿಸ್ಟಾಲಿಕ್ ಬ್ಲಡ್ ಪ್ರೆಷರ್ ಎನ್ನುತ್ತಾರೆ.
ಪುನಃ ಹೃದಯ ತನ್ನ ಸಾಧಾರಣ ಸ್ಥಿತಿಗೆ ಹಿಂಗಿದ್ದಾಗ ಏರ್ಪಡುವ ಒತ್ತ ಡವನ್ನು ಡಯಸ್ಟಾಲಿಕ್ ಬ್ಲಡ್ ಪ್ಲೆಷರ್ ಎನ್ನುತ್ತಾರೆ.
ಬೀಪಿಯನ್ನು ಪಾದರಸದ ಮಿಲಿಮೀಟರ್ ಗಳಲ್ಲಿ ಅಳೆಯುತ್ತಾರೆ
ಉದಾಹರಣೆ
ಸಿಸ್ಟಾಲಿಕ್ ಪ್ರೆಷರ್-120
ಡಾಯಸ್ಟಾಲಿಕ್ ಪ್ರೆಷರ್-80
ರಕ್ತದ ಸಾಧಾರಣ ಸ್ಥಿತಿ
ಯಾವ ವಯಸ್ಸಿನಲ್ಲಾದರೂ ರಕ್ತದ ಸಿಸ್ಟಾಲಿಕ್ ಫ್ರೆಷರ್ 100 – 140ರ ನಡುವೆ ಇರುವುದು ಸಾಧಾರಣ ಸ್ಥಿತಿಯಾಗುತ್ತದೆ ಕೆಲವರು 90 ಇರುವುದು ಸಾಧಾರಣವೆಂದು ಭಾವಿಸುತ್ತಾರೆ ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಈ ಸಿಸ್ಟಾಲಿಕ್ ಪ್ರೆಷರ್ ಸ್ವಲ್ಪ ಹೆಚ್ಚಾಗುವುದು ಸಾಮಾನ್ಯ.
ಡಯಾಸ್ಟಾಲಿಕ್ ಪ್ರೆಷರ್ ಮಾತ್ರ ಯಾವ ವಯಸ್ಸಿನಲ್ಲಾದರೂ 60 -90ರ ನಡುವೆ ಇರುವುದು ಸಾಧಾರಣ ಸ್ಥಿತಿಯಾಗುತ್ತದೆ.
ಸಾಧಾರಣ ವ್ಯಕ್ತಿಯಲ್ಲಿ ರಕ್ತದೊತ್ತಡ ಬೆಳಗಿನಿಂದ ಸಂಜೆಯ ನಡುವೆ ಬದಲಾಗುತ್ತಿರುತ್ತದೆ ಬೆಳಗಿನ ವೇಳೆ ಒತ್ತಡ ಕಡಿಮೆ ಯಿರುತ್ತದೆ.ಹಗಲೆಲ್ಲ ಕೆಲಸಗಳಿಂದ ಆಯಾಸಗೊಳ್ಳುವುದರಿಂದ ಸಾಯಂಕಾಲ ಹೆಚ್ಚು ಒತ್ತಡ ವಿರುತ್ತದೆ.
ಮನುಷ್ಯನ ಕೋಪ ತಾಪಗಳಂತಹ ಭಾವೋದ್ವೇಗದ ಸ್ಥಿತಿಗತಿಗಳು ಬೀಪಿಯ ಮೇಲೆ ಪ್ರಭಾವ ಬೀರುತ್ತವೆ.ಮಾನಸಿಕ ಒತ್ತಡ ಉದ್ರೇಕ, ಮಾನಸಿಕ ಹೊ ಯ್ದಾಟ ಭಯಗಳಂತಹವು ಬೀಪಿಯನ್ನು ಹೆಚ್ಚಿಸುತ್ತವೆ.ಭಾವೋದ್ವೇಗ ಸಾಮಾನ್ಯ ಸ್ಥಿತಿಗೆ ಬಂದ ಕೂಡಲೇ ಬೀಪಿ ಸಹ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ.
ಒಂದು ಮುಖ್ಯವಾದ ವಿಷಯವೇನೆಂದರೆ ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ ಬೀಪಿ ಹೆಚ್ಚಾಗಿ ತೋರಿಸಿದ ಮಾತ್ರಕ್ಕೆ ಅದು ಹೈಬೀಪಿಯಾಗುವುದಿಲ್ಲ ನಾಲ್ಕೈದು ಬಾರಿ ಬೇರೆ ಬೇರೆ ದಿನಗಳಲ್ಲಿ ಬೀಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು.ಪ್ರತಿಬಾರಿಯ ಹೆಚ್ಚಾಗಿಯೇ ಬರುತ್ತಿದ್ದರೆ ಮಾತ್ರ ಅದನ್ನು ಹೈಬೀಪಿಯೆಂದು ಪರಿಗಣಿಸಬಹುದು .