ಬೆಂಗಳೂರು(Bengaluru): ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ (ಡಿಮ್ಹಾನ್ಸ್) ಎಂಆರ್ಐ (MRI) ಮೆಷಿನ್(machine) ಅಳವಡಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿದ್ದಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರ ವೇತನವನ್ನು ತಡೆ ಹಿಡಿಯುವಂತೆ ಹೈಕೋರ್ಟ್(Highcourt) ಆದೇಶ(Order) ನೀಡಿದೆ.
“ಡಿಮ್ಹಾನ್ಸ್”ಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ” ಎಂದು ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ(judge) ಋತುರಾಜ್ ಅವಸ್ಥಿ(Ruturaj Avasti) ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
“ಎಂಆರ್ಐ ಮಷಿನ್ ಅಳವಡಿಕೆಯಾಗಿ, ಕಾರ್ಯಾರಂಭ ಮಾಡುವ ತನಕ ವೇತನ ಬಿಡುಗಡೆ ಮಾಡಬಾರದು” ಎಂದು ಸರ್ಕಾರಕ್ಕೆ ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದೆ.
“ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಎಂಆರ್ಐ ಯಂತ್ರವನ್ನು ಶೀಘ್ರ ಅಳವಡಿಸಬೇಕು ಹಾಗೂ ಉನ್ನತೀಕರಿಸಿದ ಮನೋ ವೈದ್ಯಕೀಯ ಆಸ್ಪತ್ರೆಯು ಏಪ್ರಿಲ್ 2ರಿಂದ ಕಾರ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು” ಎಂದು ಇದೇ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಕಳೆದ ವಿಚಾರಣೆ ವೇಳೆ ನಿರ್ದೇಶಿಸಿತ್ತು.”