ಮನೆ ರಾಜಕೀಯ ಔಷಧಿ ಸಸ್ಯಗಳ ಸಂಶೋಧನೆ ಮತ್ತು ಗುಣಮಟ್ಟದ ಔಷಧಿಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ: ಎನ್‌ ಎಸ್‌ ಭೋಸರಾಜು

ಔಷಧಿ ಸಸ್ಯಗಳ ಸಂಶೋಧನೆ ಮತ್ತು ಗುಣಮಟ್ಟದ ಔಷಧಿಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ: ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ರಾಜ್ಯದಲ್ಲಿ ಪ್ರಾಕೃತಿಕ ಔಷಧಾಲಯಗಳಾದ ಔಷಧಿ ಸಸ್ಯಗಳ ಲಭ್ಯತೆ ವಿಫುಲವಾಗಿದೆ. ಇದರ ಬಗ್ಗೆ ಸಂಶೋಧನೆ ಹಾಗೂ ಗುಣಮಟ್ಟದ ಔಷಧಿಗಳ ಉತ್ಪಾದನೆಗೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

Join Our Whatsapp Group

ಇಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ರಾಷ್ಟ್ರ ಮಟ್ಟದ ಪ್ರಾಕೃತಿಕ ಔಷಧಾಲಯದ ಅನ್ವೇಷಣೆ – ಔಷಧಿ ಹಾಗೂ ಸುಗಂಧೀಯ ಸಸ್ಯಗಳ ಸಾಮರ್ಥ್ಯ ಮತ್ತು ಸಂರಕ್ಷಣೇ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶತಮಾನಗಳಿಂದಲೂ ಔಷಧೀಯ ಹಾಗೂ ಸುಗಂಧೀಯ ಸಸ್ಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ. ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ಇವುಗಳ ಪಾತ್ರಬಹಳ ಮಹತ್ವದ್ದಾಗಿದ್ದು, ಆಧುನಿಕ ಔಷಧಗಳ ಅನ್ವೇಷಣೆಗೂ ಮುನ್ನ ಮಾನವ ಕುಲದ ರಕ್ಷಕರಾಗಿ ಕಾರ್ಯನಿರ್ವಹಿಸಿವೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರ ಅಗಾಧವಾಗಿ ಬೆಳೆಯುತ್ತಿದ್ದು, 2050 ಸಾಲಿನಲ್ಲಿ ಇದರ ವಹಿವಾಟು 7 ಟ್ರಿಲಿಯನ್‌ ಡಾಲರ್‌ ಗಳಷ್ಟು ಎಂದು ಅಂದಾಜಿಸಲಾಗಿದೆ. ಪಶ್ಚಿಮ ಘಟ್ಟಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಆಯುರ್ವೇದ, ನ್ಯಾಚರೋಪತಿ, ಸಿದ್ದ ದಂತಹ ಆರೋಗ್ಯಪದ್ದತಿಗಳ ಬೆಳವಣಿಗೆಗೂ ಇದು ಸಹಕಾರಿಯಾಗಿದೆ. ಇಷ್ಟೆಲ್ಲಾ ಅವಕಾಶಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸಂಶೋಧನೆಗೆ ವಿಫುಲ ಅವಕಾಶಗಳಿವೆ. ಸಂಶೋಧನೆ ಮೂಲಕ ಗುಣಮಟ್ಟದ ಔಷಧಿಗಳು ಹಾಗೂ ಸೌಂದರ್ಯವರ್ಧಕಗಳ ಉತ್ಪಾದನೆಗೆ, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೇತೃತ್ವದ ಸರಕಾರ ಆದ್ಯತೆ ನೀಡುತ್ತಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರೋಗ್ಯ ಸಚಿವರಾದ ದಿನೇಶ್‌ ಗುಂಡುರಾವ್‌ ಮಾತನಾಡಿ, ನಿಸರ್ಗಕ್ಕೆ ಹತ್ತಿರವಾಗಿ ಬದುಕುವುದರಿಂದ ಹೆಚ್ಚು ಆರೋಗ್ಯಕರವಾಗಿರುತ್ತೇವೆ. ನಿಸರ್ಗದಲ್ಲಿ ದೊರಕುವ ಆಹಾರವನ್ನು ಸೇವಿಸುವುದರಿಂದ ಜೀವನಶೈಲಿ ಕಾಯಿಲೆಗಳಿಂದ ದೂರವಿರಬಹುದಾಗಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಜೀವನಶೈಲಿ ರೋಗಗಳಿಂದ ಬಳಲುವವರ ಸಂಖ್ಯೆ ಅಭಿವೃದ್ದಿ ಹೊಂದದೇ ಇರುವ ರಾಷ್ಟ್ರಗಳಿಗಿಂತಾ ಹೆಚ್ಚು. ಪ್ರೊಸೆಸ್ಡ್‌ ಫುಡ್‌ ಬಳಕೆ ಹೆಚ್ಚಾಗಿರುವುದರ ಪರಿಣಾಮ ಇದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಹೆಚ್ಚು ಆರೋಗ್ಯಕರವಾಗಿರುವುದಕ್ಕೆ ಅವರ ನೈಸರ್ಗಿಕ ಆಹಾರ ಶೈಲಿಯೇ ಪ್ರಮುಖ ಕಾರಣ ಎಂದರು.

ಇದೇ ವೇಳೆ, ಹಲವಾರು ನೈಸರ್ಗಿಕ ಔಷಧಗಳ ಗುಣಮಟ್ಟದ ಬಗ್ಗೆ ಸರಿಯಾದ ಮಾನದಂಡಗಳು ಇಲ್ಲದ ಕಾರಣ ಅವುಗಳಿಂದ ಚಿಕಿತ್ಸೆ ಕೆಲವು ಅನುಮಾನಗಳಿಗೆ ಕಾರಣವಾಗಿವೆ. ಇವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನೈಸರ್ಗಿಕ ಔಷಧಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಅಗತ್ಯವಾಗಿದೆ. ಸರಿಯಾದ ಮಾನದಂಡಗಳನ್ನು ರೂಪಿಸುವ ಮೂಲಕ ಔಷಧಿ ಸಸ್ಯಗಳನ್ನು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೆ ಸಭೆ ನಡೆಸುವುದಾಗಿ ಸಚಿವರು ತಿಳಿಸದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ, ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್‌. ವೆಂಕಟೇಸನ್‌, ಕೆಸ್ಟೆಪ್ಸ್‌ ನಿರ್ದೇಶಕರಾದ ಸಾದಾಶಿವ ಪ್ರಭು, ಭಾರತೀಕ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಯಾದ ಔಷಧಿ ಮತ್ತು ಸುಗಂಧೀಯ ಸಸ್ಯಗಳ ಸಂಶೋಧನಾ ಸಂಸ್ಥೆ ಗುಜರಾತ್‌ನ ನಿರ್ದೇಶಕರಾದ ಡಾ ಮನೀಶ್‌ ದಾಸ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.