ಮನೆ ಕಾನೂನು ಹಿಜಾಬ್ ವಿವಾದ: ವಾರದೊಳಗೆ ವಾದ ಪೂರ್ಣಗೊಳಿಸಲು ವಕೀಲರಿಗೆ ಸಿಜೆ ಸೂಚನೆ

ಹಿಜಾಬ್ ವಿವಾದ: ವಾರದೊಳಗೆ ವಾದ ಪೂರ್ಣಗೊಳಿಸಲು ವಕೀಲರಿಗೆ ಸಿಜೆ ಸೂಚನೆ

0

ಬೆಂಗಳೂರು:  ಹಿಜಾಬ್  ಕುರಿತು ಪ್ರಕರಣದ ವಿಚಾರಣೆಯನ್ನು ಈ ವಾರದೊಳಗೆ ತಮ್ಮ ವಾದವನ್ನು ಪೂರ್ಣಗೊಳಿಸುವಂತೆ ವಕೀಲರಿಗೆ  ಮುಖ್ಯ ನ್ಯಾಯಮೂರ್ತಿ (ಸಿಜೆ) ರಿತು ರಾಜ್ ಅವಸ್ತಿ ಸೂಚಿಸಿದರು.

ಹೈ ಕೋರ್ಟ್ನ ತ್ರಿ ಸದಸ್ಯ ಪೀಠ ಸತತ ಎಂಟನೇ ದಿನವೂ ಅರ್ಜಿ ವಿಚಾರಣೆ ನಡೆಸಿದ್ದು, ನಾಳೆಗೆ ವಿಚಾರಣೆ ಮುಂದೂಡಿಸಿದ್ದು, ಇಂದು 2. 30ಕ್ಕೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಪೀಠದ ಮುಂದೆ ವಾದ-ಪ್ರತಿವಾದಗಳು ನಡೆದವು. ವಾದಗಳನ್ನು ಸಂಕ್ಷಿಪ್ತವಾಗಿ ಇರಿಸಿ ಈ ವಾರದೊಳಗೆ ಮುಗಿಸಲು ಪ್ರಯತ್ನಿಸಿ ಎಂದು ಸೂಚಿಸಿದರು.

 ಇದೇ ವೇಳೆ ಹಿಜಾಬ್, ಅಗತ್ಯ ಧಾರ್ಮಿಕ ಆಚರಣೆ ಎಂದು ನ್ಯಾಯಾಲಯ ಹೇಳಿದರೆ ಅದನ್ನು ಧರಿಸದ ಮುಸ್ಲಿಮ್ ಮಹಿಳೆಯರ ಘನತೆ ಕುಗ್ಗಿಸಿದ್ದಕ್ಕೆ ಸಮನಾಗುತ್ತದೆ ಎಂದು ಸಿಜೆ ತಿಳಿಸಿದರು.

ಹಿಜಾಬ್ ನಿಷೇಧಿಸಲಾಗಿಲ್ಲ. ಆದರೆ ಅದು ಕಡ್ಡಾಯವಲ್ಲ. ಇದನ್ನು ಸಂಬಂಧಿತ ಮಹಿಳೆಯರಿಗೆ ಬಿಡಬೇಕು. ನ್ಯಾಯಾಂಗ ಘೋಷಣೆಯ ಮೂಲಕ ಧರ್ಮಗಳ ಅನುಮೋದನೆ ಸಾಧ್ಯವಿಲ್ಲ ಎಂದು ಶಾಲಾ-ಕಾಲೇಜಿನ ಕ್ಯಾಂಪಸ್ಸಿನಲ್ಲಿ ಹಿಜಾಬ್ ಧರಿಸಲು ಅನುಮತಿ ಇದೆ. ಆದರೆ, ಕ್ಲಾಸ್ ರೂಮಿನಲ್ಲಿ ಮಾತ್ರ ಇದಕ್ಕೆ ನಿಯಮ ಇದೆ. ಜೊತೆಗೆ ನಾವು ಖಾಸಗಿ ಅಲ್ಪ ಸಂಖ್ಯಾತ ಸಂಸ್ಥೆಗಳಲ್ಲಿ ನಾವು ಏನನ್ನೂ ಜಾರಿ ಮಾಡಿಲ್ಲ. ನಾವು ಅವರಿಗೆ ಮತ್ತು ಅವರ ಆಯ್ಕೆಗೆ ಬಿಟ್ಟಿದ್ದೇವೆ ಎಂದು ಅಡ್ವೋಕೆಟ್ ಜನರಲ್ ಅವರು ತಿಳಿಸಿದ್ದಾರೆ.

ಹಿಜಾಬ್ ಧರಿಸುವುದು ಅಥವಾ ಧರಿಸದಿರುವ ಅವರ ಸ್ವಾತಂತ್ರ್ಯದ ಆಯ್ಕೆಯನ್ನು ಒಳಗೊಂಡಿರುತ್ತದೆ. ಇದನ್ನು ಕಡ್ಡಾಯ ಮಾಡುವುದು ಅರ್ಜಿದಾರರ ಸಂಪೂರ್ಣ ಹಕ್ಕು ಬಲವಂತ ಮಾಡುವುದಾಗಿದೆ, ಇದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ. ಇದನ್ನು ಕಡ್ಡಾಯ ಮಾಡಲು ಸಾಧ್ಯವಿಲ್ಲ,ಈ ಹಿನ್ನಲೆ ಸಂಬಂಧಪಟ್ಟ ಮಹಿಳೆಯರ ಆಯ್ಕೆಗೆ ಬಿಡಬೇಕು. ಮಹಿಳೆಯ ಘನತೆ ಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ವಾದ ಪೂರ್ಣ ಗೊಳಿಸಿದರು.

ಪ್ರತಿವಾದಿ ಶಿಕ್ಷಕರೊಬ್ಬರ ಪರವಾಗಿ ವಾದ ಮಾಡಿದ ಹಿರಿಯ ವಕೀಲ ಆರ್ ವೆಂಕಟರಮಣಿ, ಧರ್ಮದಲ್ಲಿ ಏನೇನು ಸೇರಿದೆ, ಯಾವುದು ಅಗತ್ಯ ಮತ್ತು ಯಾವುದು ಅಗತ್ಯವಲ್ಲ ಎಂಬ ವಿಚಾರದಲ್ಲಿ ರಾಜ್ಯ ಮೂಗು ತೂರಿಸಬಾರದು. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದಲ್ಲಿ ಏರುಪೇರಾದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದರು.

ಅಲ್ಲದೇ, ನಮ್ಮ ದೇಶದಲ್ಲಿ ವಿಭಿನ್ನ ನಂಬಿಕೆ ತನ್ನದೇ ಆದ ಕ್ಷೇತ್ರ ಮತ್ತು ಆಯಾಮ ಹೊಂದಿವೆ. ಶಾಂತಿಯುತವಾಗಿ ಬದುಕುತ್ತಿದ್ದೇವೆ. ವಿದೇಶದ ತೀರ್ಪುಗಳಿಗೆ ನಾವು ವಿಮುಖರಲ್ಲ. ಆದರೆ, ಹೋಲಿಕೆಗಳ ಅನುಪಸ್ಥಿತಿಯಲ್ಲಿ ವಿದೇಶಿ ತೀರ್ಪನ್ನು ತಂದರೆ, ಕಾನೂನಿನ ತಪ್ಪು ಗ್ರಹಿಕೆ ಅನ್ವಯವಾಗಬಹುದು ಎಂದು ವಾದ ಮಂಡಿಸಿದರು.

ಇನ್ನು ಮೂರನೇ ಪ್ರತಿವಾದಿ ಪರವಾಗಿ ಮಾತನಾಡಿದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು, ಈ ಹಿಂದೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರಲಿಲ್ಲ. ಸಾಂದರ್ಭಿಕವಾಗಿ, ಹುಡುಗಿಯರ ಪೋಷಕರು ಈ ಬಗ್ಗೆ ಕೇಳಿದ್ದಾರೆ. ಧರ್ಮ ಮತ್ತು ಸಂಸ್ಕೃತಿಯ ನಡುವೆ ಅತ್ಯುತ್ತಮ ವಾದ ರೇಖೆ ಇದೆ. ಕೆಲವು ಆಚರಣೆಗಳು ಧರ್ಮಕ್ಕೆ ಅತ್ಯಗತ್ಯ ಆಚರಣೆಗಳಾಗಿವೆ. ಅಂಥವೂ ನಿಸ್ಸಂಶಯವಾಗಿ ಅಗತ್ಯ ಎಂದು ಪರಿಗಣಿಸ ಬಹುದು. ನಿಮ್ಮ ಧರ್ಮ ಆಚರಣೆಗಾಗಿ ನೀವು ಮತ್ತೊಬ್ಬರ ಶಾಂತಿಗೆ ಭಂಗ ಉಂಟು ಮಾಡಿದರೆ ಎಲ್ಲಿ ಎಲ್ಲೆ ಎಲ್ಲಿರುತ್ತದೆ ಎಂದು ಪ್ರಶ್ನಿಸಿದ ಅವರು ಈ ಪ್ರಕರಣದಲ್ಲಿ ಆಗಿರುವುದು ಇದೇ ಎಂದು ತಿಳಿಸಿದರು.