ಪರಿಚಯ:
ಪೂಜನೀಯ ಸಸ್ಯವಾಗಿ ಮತ್ತು ಔಷಧೀಯ ದ್ರವ್ಯವಾಗಿ ಬೆಟ್ಟದ ನಲ್ಲಿಕಾಯಿ ಚಿರಪರಿಚಿತ.ಉತ್ತಾನ ದ್ವಾದಶಿ ಯಂದು ಕಾಯಿಗಳಿಂದ ಕೂಡಿದ ಬೆಟ್ಟದ ನೆಲ್ಲಿಕಾಯಿ ಮರದ ರಂಬೆಯನ್ನು ತುಳಸಿಯ ಕಟ್ಟೆಯಲ್ಲಿ ನೆಟ್ಟು ಪೂಜಿಸುವ ಸಂಪ್ರದಾಯವಿದೆ.
ಬೆಟ್ಟ ಗುಡ್ಡಗಳಲ್ಲಿ ಬೆಳೆಯುವ ನೆಲ್ಲಿಕಾಯಿ, ಮರ ವಾದುದರಿಂದ ಬೆಟ್ಟದ ನೆಲ್ಲಿಕಾಯಿ ಮರ ಹಣ್ಣಿಗೆ ಅಮ್ಲೀಯ ಗುಣ ಇರುವುದರಿಂದ ಆಮ್ಲಕ್ಕಿ ಹಣ್ಣಿನ ತಿರುಳು ಅಳಲೇಕಾಯಿಯಿಂತೆ ಒಗರಿನಿಂದ ಕೂಡಿರುವುದರಿಂದ ಇಂಡಿಯನ್ ಮೈರೊಬಾಲನ್ ಮತ್ತು ಹಣ್ಣುಗಳು ಬಾತುಕೋಳಿಯ ಮೊಟ್ಟೆಯನ್ನು ಹೋಲವುದ್ರಿಂದ ಇಂಡಿಯನ್ ಗೂಸ್ ಬೆರಿ ಎಂಬ ಹೆಸರಾಗಗಳಿವೆ.
ಬೆಟ್ಟದ ನೆಲ್ಲಿಕಾಯಿಯ, ಸಂಸ್ಕೃತದ ಹಲವು ಪರ್ಯಯ ಹೆಸರುಗಳ ಉಲ್ಲೇಖನ ಗ್ರಂಥಗಳಲ್ಲಿ ಕಂಡುಬರುತ್ತದೆ. ಅಂತಹ ಹೆಸರುಗಳಲ್ಲಿ ಆಯ್ದು ಕೆಲವು ಹೆಸರುಗಳು ಮತ್ತು ಅವುಗಳ ಅರ್ಥ ವಿವರಣೆಯೊಂದಿಗೆ ಕೊಟ್ಟಿದೆ.
ವಯಸ್ಥ — ಯೌವನವನ್ನು ಕಾಪಾಡುವ ಗುಣ.
ತ್ರಿಫಲ — ಹೊಳಪನ್ನುಂಟು ಮಾಡುವ ಗುಣ.
ಧಾತ್ರಿಕಾ — ತಾಯಿಯಂತೆ ಸಲಹುವ ಗುಣ
ಅಮೃತಾ — ಅಮೃತದಂತೆ ಚಿರ ಯೌವನವನ್ನಂಟು ಮಾಡುತ್ತದೆ.
ಶಿವಾ — ಮಂಗಳಕರವಾದುದನ್ನುಂಟುವಾರ ಮಾಡುತ್ತದೆ.
ಶಾಂತ — ತಾಮಸಗೊಳಿಸುವ ಗುಣವಿದೆ.
ಶೀತ — ಸಂಪನ್ನು ನೀಡುತ್ತದೆ.
ವೀರ್ಯ — ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ.
ಪಂಚರಸ — ಐದು ಬಗೆಯ ರುಚಿಯನ್ನು ಹೊಂದಿದೆ (ಹುಳಿ,ಸಿಹಿ,ಕಹಿ, ಕಾರ ಮತ್ತು ಒಗರು. )
ವೃತ್ತ ಫಲ — ಗೋಳಾಕಾರದ ಹಣ್ಣು.
ಈ ಪರ್ಯಾಯ ಹೆಸರುಗಳಲ್ಲಿ ವೃತ್ತಫಲ ಒಂದನ್ನು ಬಿಟ್ಟು ಉಳಿದ ಹೆಸರುಗಳು ಬೆಟ್ಟದನೆಲ್ಲಿಕಾಯಿಯ ಗುಣಗಳನ್ನು ತಿಳಿಸುವ ಹೆಸರುಗಳಾಗಿವೆ.
ಬೆಟ್ಟದ ನೆಲ್ಲಿಕಾಯಿ ಮರದ, ಪೀಲ್ಲಾಂಥಸ್ ಎಂಬ ಜಾತಿ ಸೂಚಕ ಹೆಸರು ಪದಗಳಿಂದ ಫಿಲ್ಲಾನ್ ಮತ್ತು ಆೄಂಥೋಸ್ ಎಂಬ ಎರಡು ಗ್ರಿಕ್ ಪದಗಳಿಂದ ಉತ್ಪತ್ತಿಯಾಗಿದೆ.ಈ ಮರದಲ್ಲಿ ಹೂಗಳು ಎಲೆಯ ಕಂಕುಳಿನಲ್ಲಿರುವುದರಿಂದ ಮೇಲಿನ ಜಾತಿಸೂಚಕ ಹೆಸರನ್ನು ನಾಮಕರಣ ಮಾಡಿದೆ.ಈ ಮರದ ಸಂಸ್ಕೃತದ ಹೆಸರು ಆಮ್ಲಕ್ಕಿ ಎಂಬ ಹೆಸರನ್ನು ಲ್ಯಾಟಿನೀಕರಿಸಿ ಎಂಬ್ಲಿಕ, ಎಂಬ ಪ್ರಭೇದ ಸೂಚಕ ಹೆಸರನ್ನು ಕಾರ್ಲ್ ವಾನ್ ಲಿನ್ನೆಯಸ್ ರವರು ನಾಮಕರಣ ಮಾಡಿದ್ದಾರೆ ಈ ಮರದ ಪರ್ಯಾಯ ಸಸ್ಯಶಾಸ್ತ್ರಯ ಹೆಸರಿನ ಅಫಿಲಿನಾಲಿಸ್ ಎಂಬ ಪ್ರಭೇದ ಸೂಚಕ ಹೆಸರನ್ನು.ಮರದ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಾರೆಂಬ ಕಾರಣಕ್ಕೆ ಇಟ್ಟಿದೆ.
ಬೆಟ್ಟದ ನಲ್ಲಿಕಾಯಿ ಮರದ ಕರ್ನಾಟಕದ ಎಲ್ಲಾ ಬಗೆಯ ಸಸ್ಯಾವರಣದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ ಇತ್ತೀಚಿಗೆ ಬೆಟ್ಟದ ನೆಲ್ಲಿಕಾಯಿ ಕಸಿ ಮಾಡಿದ್ದ ತಳಿಗಳನ್ನು ಹಣ್ಣುಗಳಿಗಾಗಿ ಬೇಸಾಯ ಮಾಡಲಾಗುತ್ತಿದೆ ಬೇಸಾಯ ಮಾಡಲಾಗುತ್ತದೆ.
ಈ ಮರದ ಐದರಿಂದ 15 ಮೀ ಎತ್ತರ ಬೆಳೆಯುತ್ತದೆ..ಕಾಂಡದ ಮತ್ತು ರಂಬೆಗಳ ಬೆಳವಣಿಗೆಯಲ್ಲಿ ವಕ್ರತೆ ಕಂಡುಬರುತ್ತದೆ ಕವಲು ರಂಬೆಗಳು ಚಾಚಿದಂತೆ ಇರುತ್ತವೆ ಸರಳವಾದ ಹಾಗೂ ಅತ್ಯಂತ ಚಿಕ್ಕದಾದ ಎಲೆಗಳು ಕಿರು ರೆಂಬೆಗಳ ಮೇಲೆ ದ್ವಿಪಾರ್ಶ್ವದಲ್ಲಿ ಜೋಡಣೆಯಾಗಿವೆ. ಎಲ್ಲಯುಕ್ತ ಕಿರು ರಂಬೆಗಳು ಸಂಯುಕ್ತ ಪತ್ರದ ಪ್ರಭೇಯನ್ನುಂಟು ಮಾಡುತ್ತವೆ ಚಿಗುರಲೆಗಳ ಬಣ್ಣ ಕೆಂಪು ಮಿಶ್ರಿತ ಹಸಿರು,ಬಲಿತಂತೆ ಹಸಿರು ಬಣ್ಣಕ್ಕೆ ತಿರುಗುತ್ತದೆ ಹಸಿ ಮಿಶ್ರಿತ ಹಳದಿ ಬಣ್ಣದ ಅತ್ಯಂತ ಕಿರಿದಾದ ಹೂಗಳು ಎಲೆಯ ಕಂಕುಳಲ್ಲಿ ಗುಂಪಾಗಿವೆ ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕವಾಗಿ ಜೋಡಣೆಯಾಗಿದೆ ಗಂಡು ಹೂವಿನಲ್ಲಿ ಮೂರು ಕೇಸರಿಗಳಿವೆ. ಹೆಣ್ಣು ಊರಿನಲ್ಲಿ ಅಂಡಾಶಯ ಉಇದ್ದ ಹೂವಿನ ಭಾಗಕ್ಕಿಂತ ಉನ್ನತ ಸ್ಥಾನದ ಮೇಲೆ ಸ್ಥಾಪಿತವಾಗಿದೆ.ಅಂಡಾಶಯದಲ್ಲಿ ಮೂರು ಕೋಣೆಗಳಿವೆ. ಪ್ರತಿ ಕೋಣೆಯಲ್ಲಿ ಒಂದು ಅಥವಾ ಎರಡು ಅಂಡಕಗಳಿರುತ್ತವೆ. ಕಾಯಿ ಗೋಳಾಕಾರವಾಗಿದೆ,ಬಣ್ಣ ಹಸಿರು ಮಿಶ್ರಿತ ಹಳದಿ,ಮೆಐ ಹೊಳಪಾಗಿದೆ.ಕಾಯಿಯ ಮೇಲೆ ಆರು ನೀಳವಾದ ಗೆರೆಗಳಿವೆ.
ಹೂವು ಮತ್ತು ಕಾಯಿಗಳ ಕಾಲ ಮಾರ್ಚ್ ನವೆಂಬರ್ :
ಅತ್ಯಂತ ಕಿರಿದಾದ ಎಲೆಗಳು ಕಿರು ರಂಭೆಗಳ ಮೇಲೆ ದ್ವಿಪಾರ್ಶ್ವದಲ್ಲಿ ಜೋಡಣೆಯಾಗಿರುವುದರಿಂದ,ಇಂತಹ ರಂಬೆಗಳು ಸಂಯುಕ್ತ ಪತ್ರದ ಭ್ರಮೆಯನ್ನುಂಟು ಮಾಡುವುದರಿಂದ, ಕಿರಿದಾದ ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಗುಂಪುಗಳಲ್ಲಿ ಎಲೆಯ ಕಂಕುಳಲ್ಲಿ ಇರುವುದರಿಂದ, ಗೋಳಾಕಾರದ ಹಸಿರು ಮಿಶ್ರಿತ ಹಳದಿ ಬಣ್ಣದ ಕಾಯಿಗಳಿಂದ ಮತ್ತು ಕಾಯಿಯನ್ನು ಆಗಿದು ತಿಂದು ನಂತರ ನೀರು ಕುಡಿದರೆ ಸಿಹಿ ರುಚಿಯ ಅನುಭವವಾಗುವುದರಿಂದ ಸುಲಭವಾಗಿ ಗುರುತಿಸಬಹುದು.
ಇತ್ತೀಚಿಗೆ ಬೆಟ್ಟದ ನೆಲ್ಲಿಕಾಯಿಯ ಹಲವಾರು ತಳಿಗಳನ್ನು ಭಾರತಾದ್ಯಂತ ಬೇಸಾಯ ಮಾಡಲಾಗುತ್ತಿದೆ. ಅಂತಹ ತಳಿಗಳಲ್ಲಿ ಬನಾರಸಿ, ಕಾಂಚನ, ಕೃಷ್ಣ ಮುಖ್ಯವಾದವುಗಳು,ಈ ತಳಿಯ ಬೆಟ್ಟದ ನೆಲ್ಲಿಕಾಯಿಯನ್ನು ಔಷಧಿ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತಿದೆ.
100 ಗ್ರಾಂ ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಆಹಾರಾಂಶಗಳು ಪೋಷಕಾಂಶಗಳು ಮತ್ತು ಅವುಗಳ ಪ್ರಮಾಣವನ್ನು ಕೋಷ್ಟಕದಲ್ಲಿ ಕೊಟ್ಟಿದೆ.