ಮಧುಮೇಹ ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ಹೃದಯವನ್ನು ಕಾಪಾಡುವ ಗುಣ :
ರಾಸಾಯನಿಕವನ್ನು ಕೊಟ್ಟು ಮಧುಮೇಹ ಉಂಟು ಮಾಡಿದ ಇಲಿಗಳಿಗೆ 8 ವಾರ ಬೆಟ್ಟ ನಲ್ಲಿಕಾಯಿಯ ರಸವನ್ನು ಕುಡಿಸಿ, ನಂತರ ವಿವಿಧ ಬಗೆಯ ಪರೀಕ್ಷೆ ನಡೆಸಿದಾಗ ಮಧುಮೇಹದಿಂದಾಗಿ ಹೃದಯಕ್ಕೆ ಯಾವುದೇ ಬಗೆಯ ಹಾನಿಯಾಗಿರುವ ಲಕ್ಷಣಗಳಿರಲಿಲ್ಲ. ಮಧುಮೇಹಿಗಳು ನಿಯಮಿತವಾಗಿ ಬೆಟ್ಟದ ನೆಲ್ಲಿಕಾಯಿಯ ರಸ ಚೂರ್ಣ ಸೇವಿಸುವುದರಿಂದ ಹೃದಯ ಸಂಬಂಧದ ಕಾಯಿಲೆಗಳು ಉಂಟಾಗುವ ಸಂಭವ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬೆಟ್ಟದ ನೆಲ್ಲಿಕಾಯಿಯ ರಸದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಪಾಲಿಫೀನಾಲ್ಸ್ ಕಾರಣ ವೆನ್ನಲಾಗಿದೆ.
ಮಧುಮೇಹದಿಂದಾಗಿ ಕಣ್ಣಿನ ಪೊರೆ ಉಂಟಾಗುವುದನ್ನು ನಿಧಾನಗೊಳಿಸಲು ಗುಣ :
ಮಧುಮೇಹ ಇರುವ ರೋಗಿಗಳಲ್ಲಿ ಇತರರಿಗಿಂತ ಅತಿ ಶೀಘ್ರವಾಗಿ ಕಣ್ಣಿನಲ್ಲಿ ಪೊರೆಯ ಬೆಳವಣಿಗೆಯಾಗುತ್ತದೆ. ಈ ರೀತಿ ಪೊರೆ ಬೆಳೆಯಲು ಆಲ್ಡೋಸ್ ರಿಡಕ್ಟೇಸ್ ಎಂಬ ಕಿಣ್ವ ಮುಖ್ಯ ಪಾತ್ರವಹಿಸುತ್ತದೆ. ಈ ಕಿಣ್ವದ ಉತ್ಪತ್ತಿಯನ್ನು ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಟ್ಯಾನಿಂಗ್ ಗಳು ಸಮರ್ಪಕವಾಗಿ ತಡೆಯುತ್ತದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ ಸ್ಪ್ರೆಪ್ಟೊಜೊಟೊಸಿನ್ ರಾಸಾಯನವನ್ನು ಇಂಜೆಕ್ಷನ್ ಮೂಲಕ ಕೊಟ್ಟು ಮಧುಮೇಹ ಉಂಟುಮಾಡಿದ ಇಲಿಗಳಿಗೆ ಬೆಟ್ಟದ ನೆಲ್ಲಿಕಾಯಿಯ ಸತ್ವ ಮತ್ತು ಅದರಲ್ಲಿ ಅಡಕವಾಗಿದ್ದ ಟ್ಯಾನಿನ್ ಸತ್ವವನ್ನು ಪ್ರತ್ಯೇಕವಾಗಿ ಕೊಟ್ಟು ಪರೀಕ್ಷಿಸಿದಾಗ ಎರಡು ಸತ್ವಗಳಿಗೆ ಕಣ್ಣಿನ ಪೊರೆ ಬೆಳವಣಿಗೆಯಾಗುವುದನ್ನು ನಿಧಾನಗೊಳಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
ಮಧುಮೇಹಿಗಳ ನರಗಳ ನೋವನ್ನು ಕಡಿಮೆ ಮಾಡುವ ಗುಣ :
ದೀರ್ಘ ಕಾಲದಿಂದ ಮಧುಮೇಹ ಇರುವ ರೋಗಿಗಳಲ್ಲಿ ರೋಗದ ಪ್ರತಿಕೂಲ ಪರಿಣಾಮವಾಗಿ ನರಗಳ ನೋವು ಕಂಡುಬರುತ್ತದೆ. ಈ ರೀತಿ ನೋವು ಉಂಟಾಗುವ ದೇಹದಲ್ಲಿ ಉತ್ಪತ್ತಿಯಾಗುವ ಕ್ರಿಯಾತ್ಮಕ ಆಮ್ಲಜನಕ ಕಣಗಳು ಮತ್ತು ಹಲವಾರು ಜೈವಿಕ ಕ್ರಿಯೆಗಳಲ್ಲಿ ಉಂಟಾಗುವ ಬದಲಾವಣೆ ಹಾಗೂ ಇತರ ಹಲವು ಕಾರಣಗಳಿಂದ ನರಗಳಲ್ಲಿ ನೋವು ಉಂಟಾಗುತ್ತದೆ. ಮಧುಮೇಹಿಗಳ ಈ ನರಗಳ ನೋವನ್ನು ಸಾಮಾನ್ಯ ನೋವು ನಿವಾರಕ ಔಷಧಿಗಳಿಂದ ಗುಣಪಡಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಪ್ಲೇವೊನಾಯ್ಡ್ಸ್ ಉಪಯೋಗಿಸಿ ಚಿಕಿತ್ಸೆ ಕೈಗೊಂಡ ಉದಾಹರಣೆಗಳಿವೆ ಕ್ಟರ್ಸೆಟಿನ್ ಒಂದು ಬಗೆಯ ಫ್ಲೇವೊನಾಯ್ಡ್ಸ್.ಇದು ಬೆಟ್ಟದ ನೆಲ್ಲಿಕಾಯಿಯಲ್ಲಿದೆ. ಈ ಕಾರಣದಿಂದ ಬೆಟ್ಟದ ನೆಲ್ಲಿಕಾಯಿಯನ್ನು ಪ್ರಸ್ತುತ ಸಂಶೋಧನೆಗೆ ಆಯ್ಕೆ ಮಾಡಿದೆ. ವಿವಿಧ ದ್ರಾವಣ ಉಪಯೋಗಿಸಿ ತಯಾರಿಸಿದ ಸತ್ವವನ್ನು ರಾಸಾಯನಿಕ ಮತ್ತು ಆಧಿಕ ಪ್ರಮಾಣದ ಕೊಬ್ಬಿನಾಂಶವನ್ನು ಕೊಟ್ಟು ಮಧುಮೇಹ ಮತ್ತು ನರಗಳ ನೋವು ಉಂಟಾಗುವಂತೆ ಮಾಡಿದ ಇಲಿಗಳಿಗೆ 8 ವಾರ ಸೇವಿಸಲು ಕೊಟ್ಟು ಅವಧಿಯ ನಂತರ ವಿವಿಧ ಆಯಾಮಗಳಿಂದ ಪರೀಕ್ಷೆ ನಡೆಸಿದಾಗ ಬೆಟ್ಟದ ನಲ್ಲಿ ಕಾಯಿಯ ಸತ್ವಕ್ಕೆ ನರಗಳ ನೋವನ್ನು ಕಡಿಮೆ ಮಾಡುವ ಗುಣವಿದೆಯೆಂದು ದೃಢಪಟ್ಟಿದೆ.
ಮರವಿನ ರೋಗವನ್ನು ವಾಸಿ ಮಾಡುವ ಗುಣ :
ಬೆಟ್ಟದ ನೆಲ್ಲಿಕಾಯಿ ಚೂರ್ಣಕ್ಕೆ ಮೆರವಿನ ರೋಗವನ್ನು ಗುಣಪಡಿಸುವ ಸಾಮರ್ಥ್ಯವಿದೆ ಎಂದು ವಿಧಿಗಳ ಮೇಲೆ ಕೈಗೊಂಡ ಪ್ರಯೋಗದಿಂದ ತಿಳಿದುಬಂದಿದೆ. ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ದಿನಕ್ಕೆ ಮೂರು ಬಾರಿಯಂತೆ 15 ದಿನಗಳವರೆಗೆ ಇಲಿಗಳಿಗೆ ಸೇವಿಸಲು ಕೊಡಲಾಯಿತು.ಅವಧಿಯ ನಂತರ ಪರೀಕ್ಷಿಸಿದಾಗ ಚೂರ್ಣದ ಪ್ರಮಾಣಕ್ಕೆ ತಕ್ಕಂತೆ ಜ್ಞಾಪಕ ಶಕ್ತಿ ಹೆಚ್ಚಾಗಿತ್ತೆಂದೆ ತಿಳಿದು ಬಂದಿದೆ. ಚೂರ್ಣ ಮೆರವಿನ ಕಾಯಿಲೆಯ ಚಿಕಿತ್ಸೆಗೆ ಉಪಯುಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ
ಅಲ್ಯೂಮಿನಿಯಂ ಕ್ಲೋರೈಡ್ ಉಂಟು ಮಾಡಿದ ಮೆರವೀನ ರೋಗವನ್ನು ವಾಸಿ ಮಾಡುವ ಗುಣ, ಟ್ಯಾನಿನ್ ಅಂಶ ಹೆಚ್ಚಾಗಿರುವಂತೆ ಸಿದ್ಧಪಡಿಸಿದ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಇದೆಯೆಂದು ಗಂಡು ಮಿಸ್ಟಾರ್ ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ. ಸತ್ವಕ್ಕೆ ನರಗಳಿಗೆ ಉಂಟಾಗುವ ನಂಜನ್ನು ನಿವಾರಣೆ ಮಾಡುವ ಗುಣ ಕಾರಣಗಳಲ್ಲಿ ಒಂದು ಎಂದು ಭಾವಿಸಲಾಗಿದೆ.ಆದರೂ, ಅಂತಿಮ ನಿರ್ಣಯಕ್ಕೆ ಬರಲು,ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆಯೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಲವಾರು ಸಂಶೋಧನಾ ಪ್ರಬಂಧಗಳನ್ನು ಪಾರಮರ್ಶಿಸಿ ತಯಾರಿಸಿದ ವಿಮರ್ಷಾ ಲೇಖನದ ಅಭಿಪ್ರಾಯದ ಪ್ರಕಾರ ಬೆಟ್ಟದ ನೆಲ್ಲಿಕಾಯಿ ಮತ್ತು ಸತ್ವಕ್ಕೆ ಮೆರವಿನ ರೋಗ ಬರದಂತೆ ತಡೆಯುವ ಮತ್ತು ರೋಗವನ್ನು ವಾಸಿ ಮಾಡುವ ಗುಣವಿದೆಯೆಂದು ವರದಿಯಾಗಿದೆ.