ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ

0

  ರಕ್ತದ ಏರೊತ್ತಡವನ್ನು ಕಡಿಮೆ ಮಾಡುವ ಗುಣ :

Join Our Whatsapp Group

        ನೀರು ಮತ್ತು ಮಧ್ಯಸಾರದ ಮಿಶ್ರಣ ಉಪಯೋಗಿಸಿ ಬೆಟ್ಟದ ನೆಲ್ಲಿ ಕಾಯಿಯಿಂದ ತಯಾರಿಸಿದ ಸತ್ವವನ್ನು ಐದು ವಾರಗಳವರೆಗೆ ಸೇವಿಸಲು ಕೊಟ್ಟು, ನಂತರ ವಿವಿಧ ರೀತಿಯ ಪರೀಕ್ಷೆ ನಡೆಸಿದಾಗ ಬೆಟ್ಟದನೆಲ್ಲಿಕಾಯಿಯ ಸತ್ವಕ್ಕೆ ರಕ್ತದ ಏರೊತ್ತಡವನ್ನು ಕಡಿಮೆ ಮಾಡುವ ಗುಣವಿದೆಯೆಂದು ಕಂಡುಬಂದಿದೆ.

 ರೋಗನಿರೋಧಕ ಶಕ್ತಿಯನ್ನುಂಟು ಮಾಡುವ ಗುಣ :

        ನೀರು, ಎಥನಾಲ್ ಮತ್ತು ಮೆಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮತ್ತು ಎಲೆಯಿಂದ ತಯಾರಿಸಿದ ಸತ್ವ,ಕಷಾಯ ಮತ್ತು ಟ್ಯಾನಿನ್ ಘಟಕಗಳಿಗೆ ರೋಗನಿರೋಧಕ ಶಕ್ತಿಯನ್ನುಂಟು ಮಾಡುವ ಗುಣವಿದೆಯೆಂದು ಇಲಿ, ಮೊಲ ಮತ್ತು ಕೋಳಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ ಬೆಟ್ಟದ ನೆಲ್ಲಿಕಾಯಿಯ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ರಾಸಾಯನಿಕ ಘಟಕಗಳು ಕಾರಣವೆಲ್ಲಾಗಿದೆ ಒಟ್ಟಾರೆ ತಿಳಿದು ಬಂದಾಂಶವೆಂದರೆ ನಿಯಮಿತವಾಗಿ ಬೆಟ್ಟದ ನೆಲ್ಲಿಕಾಯಿಯ ಸೇವನೆಯಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯುಂಟಾಗುತ್ತದೆ.

 ವಾಂತಿಯಾಗದಂತೆ ಮಾಡುವ ಗುಣ :

        ನೀರು ಉಪಯೋಗಿಸಿ ಬೆಟ್ಟದ ನಲ್ಲಿಕಾಯಿಂದ ತಯಾರಿಸಿದ ಸತ್ವವನ್ನು ನಾಯಿಗಳಿಗೆ ಸೇವಿಸುವಂತೆ ಮಾಡಿ ಪರೀಕ್ಷಿಸಿದಾಗ ಸತ್ವಕ್ಕೆ ವಾಂತಿಯಾಗದಂತೆ ಮಾಡುವ ಗುಣವಿದೆಯೆಂದು ಕಂಡುಬಂದಿದೆ.

 ವಿಕಿರಣದ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಗುಣ :

         ಕ್ಯಾನ್ಸರ್ ಗೆ, ಚಿಕಿತ್ಸೆ ಕೊಡುವಾಗ ಔಷಧಿಯ ಜೊತೆಯಲ್ಲೇ ಕೆಲವರಿಗೆ ವಿಕಿರಣದ ಚಿಕಿತ್ಸೆಯನ್ನೂ ಕೈಗೊಳ್ಳಬೇಕಾಗುತ್ತದೆ.ವಿಕಿರಣಗಳು, ಕ್ಯಾನ್ಸರ್ ಕೋಶವನ್ನು ನಾಶಪಡಿಸುವುದರ ಜೊತೆಗೆ ದೇಹದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ.ಕ್ಯಾನ್ಸರ್ ವಾಸಿಯಾದರೂ ವಿಕಿರಣದಿಂದ ಉಂಟಾದ ಪ್ರತಿಕೂಲ ಪರಿಣಾಮಗಳ ಫಲ ಹಿಗೆಯೇ ಉಳಿದು ಬಿಡುತ್ತದೆ. ದೇಹದ ಮೇಲೆ ವಿಕಿರಣಗಳಿಂದ ಪ್ರತಿಕೂಲ ಪರಿಣಾಮಗಳು ಉಂಟಾಗದಂತೆ ತಡೆಯುವಂತಹ ಔಷಧಿಗಳನ್ನು ಹುಡುಕುವ ಹಿನ್ನೆಲೆಯಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಸೇವಿಸಲು ಕೊಟ್ಟು ತಯಾರಿ ಮಾಡಿದ ಇಲಿಗಳನ್ನು  ಗ್ಯಾಮ ವಿಕಿರಣಕ್ಕೆ ಒಡ್ಡಿ ನಂತರ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ, ಬೆಟ್ಟದ ನೆಲ್ಲಿಕಾಯಿಯ ಸತ್ವ ಸೇವಿಸುವುದರ ಪರಿಣಾಮ ಗ್ಯಾಮ ವಿಕಿರಣ ಪ್ರತಿಕೂಲ ಪರಿಣಾಮ ದೇಹದ ಮೇಲೆ ಕಂಡು ಬರಲಿಲ್ಲವೆಂದು ವರದಿಯಾಗಿದೆ.

        ಕ್ಯಾನ್ಸರ್ ರೋಗಿಗಳಿಗೆ, ವಿಕಿರಣದ ಚಿಕಿತ್ಸೆಗೆ  ಒಳಪಡಿಸುವ ಹಲವು ದಿನಗಳ ಮೊದಲಿನಿಂದಲೂ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಸೇವಿಸಲು ಕೊಟ್ಟರೆ, ವಿಕಿರಣದ ಪ್ರಭಾವ ದೇಹದ ಮೇಲಾಗುವುದಿಲ್ಲ. ಇದಕ್ಕೆ ಉನ್ನತ ಮಟ್ಟದ ಸಂಶೋಧನೆ ಅಗತ್ಯವಿದೆ.

 ಹಾನಿಕಾರಕ ವಸ್ತುಗಳು, ರಾಸಾಯನಿಕಗಳು ಮತ್ತು ಔಷಧಿಗಳು ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಗುಣ

 7, *12 ಡೈಮಿಥೈಲ್ ಬೆಂಜ ಆಂಥ್ರಸಿನೆ, ಆರ್ಸೆನಿಕ್, ಕೆಸಿಯಂ ಕ್ಲೊರೈಡ್ ಮತ್ತು ಕ್ರೊಮಿಯಂ ನಂತಹ ನಂಜುರಕಾರಕಗಳು ಉಂಟು ಮಾಡುವ ಪ್ರತಿಕೂಲ ಪರಿಣಾಮಗಳನ್ನು ತಡೆಯುವ ಗುಣ

ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ,ವಿವಿಧ ರಾಸಾಯನಿಕಗಳು ಉಂಟು ಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಸಾಮರ್ಥ್ಯವಿದೆಯೆಂದು ಸತ್ವವನ್ನು ಬಿಳಿ ಇಲಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ.

  ಬೆಟ್ಟದ ನೆಲ್ಲಿಕಾಯಿಯ ಮರದ ಎಲೆಯಿಂದ ತಯಾರಿಸಿದ ಸತ್ವಕ್ಕೂ, ಆರ್ಸೆನಿಕ್ ರಾಸಾಯನಿಕ ಉಂಟು ಮಾಡುವ ಹಾನಿಯಿಂದ ದೇಹವನ್ನು ಕಾಪಾಡುವ ಗುಣವಿದೆಯೆಂದು ಇಲಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ.

 ಒಕ್ರಟಾಕ್ಸಿನ್ ಉಂಟುಮಾಡುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಗುಣ 

       ಒಕ್ರಟಾಕ್ಸಿನ್ ಎಂಬುದು ಒಂದು ನಂಜುಕಾರದ ರಾಸಾಯನಿಕ ವಸ್ತು. ಆೄಸ್ಪರ್ಜಿಲಸ್ ಒಕ್ರೇಸಿಯಸ್  ಎಂಬ ಶಿಲೀಂಧ್ರದ ಮೈಸೀಲಿಯಂನಲ್ಲಿ ಉತ್ಪತ್ತಿಯಾಗುತ್ತದೆ. ಈಶಿಲೀಂಧ್ರ ಆಹಾರ ಪದಾರ್ಥಗಳನ್ನು ಆಶ್ರಯಿಸಿ ಬೆಳೆದಾಗ ಶಿಲೀಂಧ್ರದ ದೇಹದಿಂದ ಉತ್ಪತ್ತಿಯಾದ ಒಕ್ರಟಾಕ್ಸಿನ್ ಆಹಾರ ಪದಾರ್ಥಗಳೊಂದಿಗೆ ಸಮ್ಮಿಲನವಾಗಿ ಪ್ರಾಣಿಗಳ ಮನುಷ್ಯರ ದೇಹವನ್ನು ಸೇರಿ ಮೂತ್ರಪಿಂಡ, ಪಿತ್ತಜನಾಂಗ ಮತ್ತು ವೀರ್ಯಾಣುಗಳ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಒಕ್ರಟಾಕ್ಸಿನ್ ನ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಸಾಮರ್ಥ್ಯವಿದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.

 ಕಬ್ಬಿಣ ಉಂಟು ಮಾಡುವ ಹಾನಿಯಿಂದ  ಪಿತ್ತ ಜನಾಂಗವನ್ನು ಕಾಪಾಡುವ ಗುಣ

        ಕಬ್ಬಿಣದ ಅಂಶದ ಶೇಖರಣೆ ಮುಖ್ಯವಾಗಿ ಪಿತ್ತ ಜನಾಂಗದಲ್ಲಿ ಆಗುತ್ತದೆ. ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾದರೆ ಕಬ್ಬಿಣದ ಅಂಶವೇ ಪಿತ್ತಜನಾಂಗದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿ ಪಿತ್ತಜನಾಂಗದ ಕೋಶಗಳನ್ನು ನಾಶಪಡಿಸುತ್ತದೆ. ಈ ರೀತಿ ಅಧಿಕ ಕಬ್ಬಿಣದ ಅಂಶದಿಂದ ಉಂಟಾಗುವ ಹಾನಿಯಿಂದ ಪಿತ್ತಜನಾಂಗವನ್ನು ಕಾಪಾಡುವ ಗುಣ ಮೆಥನಾಲ್ ದ್ರಾವಣ ಉಪಯೋಗಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಸ್ವಿಸ್ ಬಿಳಿ ಇಲಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ.