ಹೃದಯ ಸಂಬಂಧ ಕಾಯಿಲೆಗಳಿಂದ ದೇಹವನ್ನು ಕಾಪಾಡುವ ಗುಣ :
ಎಂಡೊಥೀಲಿಯಂ ಎಂಬುದು ಧಮನಿಗಳ ಒಳಭಾಗದಲ್ಲಿರುವ ಪದರ. ಈ ಪದರ ರಕ್ತದೊಡನೆ ನೇರ ಸಂಪರ್ಕದಲ್ಲಿರುತ್ತದೆ.ಈ ಪದರಕ್ಕೆ ಸ್ಥಿತ ಸ್ಥಾಪಕ ಗುಣವಿದೆ. ಈ ಪದರ ರಕ್ತ ಸಂಚಾರ ವಾಗುವಾಗ ಅವಶ್ಯಕತೆಗೆ ಅನುಗುಣವಾಗಿ ಹಿಗ್ಗುತ್ತ ಮತ್ತು ಕುಗ್ಗುತ್ತ ಸುಗಮವಾಗಿ ರಕ್ತ ಸಂಚಾರವಾಗಲು ಸಹಕರಿಸುತ್ತದೆ.ಈ ಪದರ ಸಮರ್ಪವಾಗಿ ಕೆಲಸ ಮಾಡದೆ ಸ್ಥಗಿತಗೊಳ್ಳುವ ಸ್ಥಿತಿಯನ್ನು ಎಂಡೋಥೀಲಿಯಂ ಡಿಸ್ ಫಂಕ್ಷನ್ಎಂದು ಕರೆಯುತ್ತಾರೆ. ಇದರ ಪರಿಣಾಮವಾಗಿ ಧಮನಿಗಳಲ್ಲಿ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ ಮತ್ತು ಧಮನಿಗಳು ಪೆಡಸಾಗಿ ಹೃದಯಾಘಾತವಾಗುವ ಸಂಭವ ಉಂಟಾಗುತ್ತದೆ. ಎಂಡೊಥೀಲಿಯಂ ಪದರದ ಕಾರ್ಯ ನ್ಯೂನತೆಗೆ ರಕ್ತದಲ್ಲಿ ಶೇಖರಣೆಯಾಗುವ ಅಧಿಕ ಪ್ರಮಾಣದ ಗ್ಲುಕೋಸ್ ಸಹ ಕಾರಣಗಳಲ್ಲಿ ಒಂದು.
ಎಂಡೋಥೀಲಿಯಂ ಪದರದ ನ್ಯೂನತೆಯಿರುವ ರೋಗಿಗಳನ್ನು ಆಯ್ಕೆ ಮಾಡಿ ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು ಒಣಗಿಸಿ 250 ಮತ್ತು 500 ಮಿ. ಗ್ರಾಂ. ಪ್ರಮಾಣವನ್ನು ದಿನಕ್ಕೆ ಎರಡು ಬಾರಿ ಸೇವಿಸುವಂತೆ ಪ್ರತ್ಯೇಕ ಗುಂಪುಗಳಿಗೆ ತಿಳಿಸಲಾಯಿತು. 12 ವಾರ ಚಿಕಿತ್ಸೆ ಮುಗಿಸಿದ ನಂತರ ಎಲ್ಲರನ್ನೂ ಪರೀಕ್ಷಿಸಿದ್ದಾಗ, 500 ಮಿ.ಗ್ರಾಂ ಪ್ರಮಾಣದ ಸತ್ವ ಸೇವಿಸಿ ರೋಗಿಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿತೆಂದು ವರದಿಯಾಗಿದೆ. ಬೆಟ್ಟದ ನೆಲ್ಲಿಕಾಯಿಯ ಸತ್ವ ಎಂಡೊಥೀಲಿಯ ಪದರದ
ಮೇಲೆ ಉಂಟಾಗಬಹುದಾದ ಒತ್ತಡ ಮತ್ತು ಉರಿಯೂತವನ್ನು ತಡೆಯುವುದರ ಮೂಲಕ ಪದರದ ಕಾರ್ಯವನ್ನು ಉತ್ತಮ ಪಡಿಸಿ, ಹೃದಯ ಸಂಬಂಧದ ಕಾಯಿಲೆಗಳು ಉಂಟಾಗದಂತೆ ದೇಹವನ್ನು ಕಾಪಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
ಆರೋಗ್ಯವಂತ ಕಾರ್ಯ ಕರ್ತರಿಗೆ ದಿನಕ್ಕೆ 500 ಮಿ. ಗ್ರಾಂ. ಸತ್ವವನ್ನು, 18 ವಾರ ಸೇವಿಸಲು ಕೊಟ್ಟು ಅವಧಿಯ ನಂತರ ಪರೀಕ್ಷಿಸಿದಾಗ,ಸತ್ವ ದೇಹದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರದೆ ದಮನಿಯಲ್ಲಿರುವ ಎಂಡೋಥೀಲಿಯಂ ಪದರವನ್ನು ಸಮರ್ಪಕವಾಗಿ ಕೆಲಸ ಮಾಡುವಂತೆ ಪ್ರಚೋದಿಸುವ ಸಾಮರ್ಥ್ಯ ಹೊಂದಿದೆಯೆಂದು ಕಂಡುಬಂದಿದೆ.
ಸ್ಥೂಲ ದೇಹ ಉಳ್ಳವರಲ್ಲಿ ಹೃದಯ ಸಂಬಂಧ ಕಾಯಿಲೆ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ.ಇಂತಹ ಸ್ಥೂಲ ದೇಹದ ಉಳ್ಳವರಿಗೆ 12 ವಾರ, ದಿನಕ್ಕೆ 500 ಮಿ. ಗ್ರಾಂ ಪ್ರಮಾಣದ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಸೇವಿಸಲು ಕೊಡಲಾಯಿತು. ನಂತರ ಪರೀಕ್ಷಿಸಿದಾಗ ಹೃದಯದ ಸಂಬಂಧ ಕಾಯಿಲೆಗಳು ಕಂಡುಬರುವ ಸಾಧ್ಯತೆ ಕಡಿಮೆಯಾಗಿತ್ತೆಂದು ತಿಳಿದುಬಂದಿದೆ.
12 ಮಂದಿ ಸ್ವಯಂ ಸೇವಕರ ಮೇಲೆ ನಡೆಸಿದ ಪ್ರಯೋಗದ ಪ್ರಕಾರ, ಬೆಟ್ಟದ ನೆಲ್ಲಿಕಾಯಿ ಸತ್ವವನ್ನು 14 ದಿನಗಳವರೆಗೆ ಸೇವಿಸಲು ಕೊಟ್ಟು, ಪ್ರಯೋಗಕ್ಕೆ ಒಳಪಡಿಸಿ ಪರೀಕ್ಷಿಸಿದಾಗ ಸತ್ವ, ಹೃದಯ ಸಂಬಂಧದ ಕಾಯಿಲೆಗಳಿಂದ ದೇಹವನ್ನು ಕಾಡುತ್ತದೆಯೆಂದು ವರದಿಯಾಗಿದೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಕೃತಕವಾಗಿ ಬೆಳೆಸಿದ ಹೊಕ್ಕುಳಿನ ಅಭಿದಮನಿಯ ಮೇಲೆ ಬೆಟ್ಟದ ನೆಲ್ಲಿಕಾಯಿಯ ಸತ್ವ ಉಂಟು ಮಾಡಬಹುದಾದ ಪರಿಣಾಮದ ಬಗ್ಗೆ ಪರೀಕ್ಷೆ ನಡೆಸಿದಾಗ ಸತ್ವಕ್ಕೆ ಎಂಡೊಥೀಲಿಯಂ ಪದರವನ್ನು ರಕ್ಷಿಸುವ ಗುಣವಿದೆಯೆಂದು ವರದಿಯಾಗಿದೆ.
ಈ ಪ್ರಯೋಗಗಳಿಂದ ತಿಳಿದು ಬಂದ ಅಂಶವೆಂದರೆ, ಬೆಟ್ಟದ ನೆಲ್ಲಿಕಾಯಿಗೆ ಧಮನಿಗಳು ಪೆಡಸಾಗದಂತೆ ತಡೆಯುಂಟು ಮಾಡಿ ಹೃದಯ ಸಂಬಂಧ ಕಾಯಿಲೆಗಳು ದೇಹದಲ್ಲಿ ಉಂಟಾಗದಂತೆ ತಡೆದು ದೇಹವನ್ನು ಕಾಪಾಡುವ ಸಾಮರ್ಥ್ಯವಿದೆಯೆನ್ನಲಾಗಿದೆ.