ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ 

ಬೆಟ್ಟದ ನೆಲ್ಲಿಕಾಯಿ 

0

 ಆ ಪ್ರಾಣಿಗಳ ಮೇಲೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗಗಳ ಫಲ :

Join Our Whatsapp Group

 ಆೄಂಟಿ ಆಕ್ಸಿಡೆಂಟ್ ಗುಣ :

           ಜೀವಕೋಶಗಳಲ್ಲಿ ನಡೆಯುವ ಜೈವಿಕ ಕ್ರಿಯೆಯಿಂದಾಗಿ ಕ್ರಿಯಾತ್ಮಕ ಆಮ್ಲಜನಕದ ಅಣುಗಳು ಉತ್ಪತ್ತಿಯಾಗುತ್ತವೆ.ಈ ಕ್ರಿಯಾತ್ಮಕ ಆಮ್ಲಜನಕದ ಕಣಗಳು ದೇಹವನ್ನು ಮುಪ್ಪಾಗುವಂತೆ ಮಾಡುವುದರ ಜೊತೆಗೆ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಇಂತಹ ಕಣಗಳನ್ನು ತೊಡೆದು ಹಾಕುವ ನಿರ್ಮೂಲನ ಮಾಡುವ ಸತ್ವಗಳನ್ನು ಆೄಂಟಿಆಕ್ಸಿಡೆಂಟ್ ಗಳೆಂದು ಕರೆಯುತ್ತಾರೆ. ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಆೄಂಟಿ ಆಕ್ಸಿಡೆಂಟ್ ಗುಣವಿದೆಯೆಂದು ಹಲವು ಪ್ರಯೋಗಗಳಿಂದ ದೃಢಪಟ್ಟಿದೆ.

 ಹೆಕ್ಷನ್, ಈಥೈಲ್  ಅಸಿಟೇಟ್, ಮೇಥನಾಲ್ ಮತ್ತು ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಗಳನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಮಿಥುನಾಲ್ ದ್ರಾವಣ ಉಪಯೋಗಿಸಿ ತಯಾರಿಸಿದ ಸತ್ವಕ್ಕೆ ಗರಿಷ್ಠ ಪ್ರಮಾಣದ ಆೄಂಟಿ ಆಕ್ಸಿಡೆಂಟ್ ಗುಣವಿದೆಯೆಂದು   ತಿಳಿದುಬಂದಿದೆ.

 ಬೆಟ್ಟದ ನೆಲ್ಲಿಕಾಯಿಯಲ್ಲಿ ಆಸ್ಕಾರ್ಬಿಕ್   ಆಮ್ಲ ಇದೆ. ಈ ಆಮ್ಲಕ್ಕೆ ಆೄಂಟಿ ಆಕ್ಸಿಡೆಂಟ್ ಗುಣವಿದೆಯೆಂದು ಈಗಾಗಲೇ ದೃಡಪಟ್ಟಿದೆ ಶುದ್ಧ ಆಸ್ಕಾರ್ಬಿ ಕ್ ಆಮ್ಲ ವ್ಯಕ್ತಪಡಿಸುವ ಆೄಂಟಿ ಆಕ್ಸಿಡೆಂಟ್ ಗುಣಕ್ಕಿಂತ ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಆಸ್ಕಾರ್ಬಿ ಆಮ್ಲ ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟ್ ಗುಣ ಹೊಂದಿದೆಯೆಂದು ವರದಿಯಾಗಿದೆ. ಈ ಆಮ್ಲದ ಜೊತೆಗೆ ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಪಾಲಿಫಿನಾಲ್ಸ್ ಗಳಿಗೂ ಈ ಗುಣವಿದೆಯೆಂದು ವರದಿಯಾಗಿದೆ ಪಾಲಿಫಿನಾಲ್ಸ್ ಗಳ ಈ ಗುಣಕ್ಕೆ ಅವುಗಳಲ್ಲಿ ಅಡಕವಾಗಿರುವ ಜೀರಾನಿನ್  ಮತ್ತು ಗ್ಯಲಿಕ್ ಆಮ್ಲ ಕಾರಣವೆನ್ನಲಾಗಿದೆ

 ಎಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮರದ ರಂಬೆಯಿಂದ ತಯಾರಿಸಿದ ಸತ್ವಕ್ಕೂ ಆೄಂಟಿಆಕ್ಸಿಡೆಂಟ್ ಗುಣ ಇದೆಯೆಂದು ವರದಿಯಾಗಿದೆ.

 ಉರಿಯೂತ ಕಡಿಮೆ ಮಾಡುವ ಮತ್ತು ನೋವು ನಿವಾರಕ ಗುಣ :

  ನೀರು, ಈಥೈಲ್ ಈಥರ್, ಮೆಥನಾಲ್ ಮುಂತಾದ ಹಲವು ದ್ರಾವಣಗಳನ್ನು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯ ಮರದ ಎಲೆ ಮತ್ತು ನೆಲ್ಲಿಕಾಯಿಯನ್ನು ಉಪಯೋಗಿಸಿ ತಯಾರಿಸಿದ ಸತ್ವವನ್ನು, ಪ್ರಯೋಗ ಶಾಲೆಯಲ್ಲಿ ಉರಿಯುತ ಉಂಟುಮಾಡಿದ ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷೆಗೆ ಒಳಪಡಿಸಿದಾಗ ಎಲೆ ಮತ್ತು ನೆಲ್ಲಿಕಾಯಿಯ ಸತ್ವಕ್ಕೆ ಉರಿಯೂತವನ್ನು ಕಡಿಮೆ ಮಾಡುವ ಮತ್ತು ನೋವನ್ನು ನಿವಾರಣೆ ಮಾಡುವ ಗುಣವಿದೆ ಯೆಂದು ದೃಢಪಟ್ಟಿದೆ.

 ಒತ್ತಡದಿಂದ ವೃಷಣವನ್ನು ಕಾಪಾಡುವ ಗುಣ :

     ದೀರ್ಘಕಾಲದ ಒತ್ತಡ ವೃಷಣದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿ ಬಂಜೆತನಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ, ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವವನ್ನು ಇಲಿಗಳಿಗೆ 42 ದಿನಗಳವರೆಗೆ ಆಹಾರದೊಡನೆ ಕೊಡಲಾಯಿತು. ಅವಧಿಯ ನಂತರ, ಒತ್ತಡವನ್ನುಂಟು ಮಾಡಿ ಪರಿಣಾಮವನ್ನು ಪರೀಕ್ಷಿಸಿದಾಗ, ಒತ್ತಡದಿಂದ ವೃಷಣದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟಾಗದೆ ಸುಸ್ಥಿತಿಯಲ್ಲಿತ್ತೆಂದು ಜೊತೆಗೆ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಉತ್ತಮವಾಗಿದತ್ತೆಂದು ವರದಿಯಾಗಿದೆ.ಎಲೆಯ ಸತ್ವಕ್ಕೆ, ಪರಿಣಾಮಕಾರಿಯಾದ ರೀತಿಯಲ್ಲಿ ಒತ್ತಡ ಉಂಟು ಮಾಡುವ ಹಾನಿಯಿಂದ ವೃಷಣವನ್ನು ಕಾಪಾಡುವ ಗುಣವಿದೆಯೆಂದು ತಿಳಿದುಬಂದಿದೆ.

ಕಣ್ಣಿನ ಮಸೂರವನ್ನು ಮರು ಉತ್ಪತ್ತಿ ಮಾಡುವ ಗುಣ :

ಪ್ರಾಥಮಿಕ ಸಂಶೋಧನಾ ವರದಿಯ ಪ್ರಕಾರ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಕಣ್ಣಿನ ಮಸೂರವನ್ನು ಮರು ಉತ್ಪತ್ತಿ ಮಾಡುವ ಮತ್ತು ಸುರಕ್ಷಿಸುವ ಗುಣವಿದೆಯೆಂದು ತಿಳಿದು ಬಂದಿದೆ. ಪ್ರಯೋಗಶಾಲೆಯಲ್ಲಿ ಕಪ್ಪೆಯ ಗೋದ ಮೊಟ್ಟೆಯ ಮೇಲೆ ನಡೆಸಿದ ಪ್ರಯೋಗದ ಪ್ರಕಾರ ಬೆಟ್ಟದ ನೆಲ್ಲಿಕಾಯಿವ ಸತ್ವಕ್ಕೆ ಮೇಲಿನ ಗುಣವಿದೆಯೆಂದು ದೃಢಪಟ್ಟಿದೆ.