ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಗುಣ :
ರಕ್ತದಲ್ಲಿ ಅಧಿಕ ಪ್ರಮಾಣದ ಲಿಪಿಡ್ ಸಂಗ್ರಹವಾಗುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡಿಪ್ ಲಿಪಿಡೇಮಿಯ ಎಂದು ಕರೆಯುತ್ತಾರೆ. ರಕ್ತದಲ್ಲಿ 4 ಬಗೆಯ ಕೊಬ್ಬಿನಾಂಶಗಳು ಶೇಖರಣೆಯಾಗುತ್ತವೆ. ಅವುಗಳೆಂದರೆ
1. ಹೈ ಡೆನ್ಸಿಟಿ ಲಿಪೊ ಪ್ರೋಟೀನ್ HDL
2. ಲೊ ಡೆನ್ಸಿಟಿ ಲಿಪೊ ಪ್ರೋಟೀನ್ LDL
3. ವೆರಿ ಲೊ ಡೆನ್ಸಿಟಿ ಲಿಪೊ ಪ್ರೋಟೀನ್
4. ಟ್ರೈ ಗ್ಲಿಸರೈಡ್ಸ್
ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾಗಿದೆಯೆಂದರೆ, LDL, VLDL ಟ್ರೈಗ್ಲಿಸರೈಡ್ ನ ಪ್ರಮಾಣ ಹೆಚ್ಚಾಗಿದೆಯೆಂದು, ಜೊತೆಗೆ HDLನ ಪ್ರಮಾಣ ಕಡಿಮೆಯಾಗಿದೆಯೆಂದರ್ಥ. LDL ಮತ್ತು VLDL ಗಳನ್ನು ಕೆಟ್ಟ ಕೊಲೆಸ್ಟಿರಾಲ್ ಎಂದು ಮತ್ತು HDLಅನ್ನು ಒಳ್ಳೆಯ ಕೊಲೆಸ್ಟಿರಾಲ್ ಎಂದು ಕರೆಯುತ್ತಾರೆ LDLಧಮನಿಗಳ ಒಳಭಾಗದಲ್ಲಿ ಸಂಗ್ರಹವಾಗಿ ರಕ್ತದ ಸುಗಮ ಸಂಚಾರಕ್ಕೆ ತಡೆಯುಂಟು ಮಾಡುವುದರ, ಮೂಲಕ ಹೃದಯ ಘಾತಕ್ಕೆ ಕಾರಣವಾಗುತ್ತದೆ. VLDL ಟ್ರೈಪ್ರಕ್ರಿಯೆಯಲ್ಲಿಗ್ಸಿಸರೈಡ್ ಅನ್ನು ರಕ್ತದ ಮೂಲಕ ತಾಗಿಸುವ ಪ್ರಕ್ರಿಯೆಯಲ್ಲಿ ಮಹತ್ಪದ ಪಾತ್ರವಹಿಸುತ್ತದೆ. ಟ್ರೈಗ್ಲಿಸರೈಡ್ ನ ಪ್ರಮಾಣ ಅವಶ್ಯಕತೆ ಗಿಂತ ಹೆಚ್ಚಾದರೆ ಹೃದಯ ಸಂಬಂಧ ಕಾಯಿಲೆಗಳಿಗೆ ನಾಂದಿಯಾಗುತ್ತದೆ. HDL ನ ಪ್ರಮಾಣ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಒಳ್ಳೆಯದು,ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟಿರಾಲ್ LDL, VLDL,
ಗಳನ್ನು ನಿರ್ಮೂಲ ಮಾಡುತ್ತದೆ
ರಕ್ತ ಪರೀಕ್ಷೆಯಲ್ಲಿ ಮಾಡಿಸಿದಾಗ ರಕ್ತದಲ್ಲಿ ಅಧಿಕ ಪ್ರಮಾಣ LDL, VLDL ಮತ್ತು ಟ್ರೈಗ್ಲಿಸರೈಡ್ ಇದೆಯೆಂದು ಮತ್ತು HDL ಪ್ರಮಾಣ ಕಡಿಮೆ ಯಿರುವುದು ಕಂಡು ಬಂದರೆ ಹೃದಯ ಸಂಬಂಧದ ಕಾಯಿಲೆ ಯುಂಟಾಗುವ ಸಾಧ್ಯತೆಯ ಬಗ್ಗೆ ಗಮನ ಹರಿಸಬೇಕಾಗುತ್ತದೆ.ಆದುದರಿಂದ ಆರೋಗ್ಯವಂತರಾಗಿರಲು ಅಧಿಕ ಪ್ರಮಾಣದ ಕೊಬ್ಬಿನಾಂಶವಿರುವ ಆಹಾರ ಪದ್ಧತಿಯನ್ನು ಆಚರಣೆಗೆ ತಂದು ನಿಯಮಿತ ವ್ಯಾಯಾಮ ಮಾಡುವುದನ್ನು ಮೈಗೂಡಿಸಿ ಕೊಳ್ಳಬೇಕು.
ಕೊಬ್ಬಿನಾಂಶ ಹೆಚ್ಚಾಗಿರುವುದಾಗಿ ದೃಢಪಟ್ಟ 98 ರೋಗಿಗಳನ್ನು ಆಯ್ಕೆ ಮಾಡಿ ಎರಡು ಗುಂಪು ಮಾಡಲಾಯಿತು. ಒಂದು ಗುಂಪಿನ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ದಿನಕ್ಕೆ ಎರಡು ಬಾರಿಯಂತೆ 12 ವಾರ ಸೇವಿಸಲು ಕೊಡಲಾಯಿತು. ಎರಡನೆಯ ಗುಂಪಿಗೆ ಇದೇ ಪ್ರಮಾಣದಲ್ಲಿ ಔಷಧೀತರ ವಸ್ತುವನ್ನು ಮೇಲೆ ತಿಳಿಸಲಾದ ರೀತಿಯಲ್ಲಿ 12 ವಾರ ಸೇವಿಸಲು ಸೂಚಿಸಲಾಯಿತು. ಅವಧಿಯ ನಂತರ ಪರೀಕ್ಷಿಸಿದಾಗ,ಬೆಟ್ಟದ ನೆಲ್ಲಿಕಾಯಿ ಸೇವಿಸಿದ ರೋಗಿಗಳಲ್ಲಿ ರಕ್ತದಲ್ಲಿನ LDL, VLDL, ಮತ್ತು ಟ್ರೈಗ್ರಿಸರೈಡ್ ಪ್ರಮಾಣ ಕಡಿಮೆಯಾಗಿರುವುದು ದೊಡ್ಡಪಟ್ಟಿದೆ.
ಮೆಥನಾಲ್ ರಾವಣ ಉಪಯೋಗಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವದಲ್ಲಿ 30ರಷ್ಟು ಎಲ್ಲಾ ಜಿ ಟ್ಯಾನಿನ್ಸ್ ಇರುವಂತೆ ನೋಡಿಕೊಳ್ಳಲಾಗಿದೆ.ಈ ಸತ್ವದ ಪುಡಿಯನ್ನು 500 ಮಿನಿ ಗ್ರಾಂ ಪ್ರಮಾಣದ ಕ್ಯಾಪೊಲ್ ಗಳಲ್ಲಿ ತುಂಬಿ ಸಿದ್ದಪಡಿಸಲಾಯಿತು. ಕೊಬ್ಬಿನಾಂಶ ಹೆಚ್ಚಾಗಿರುವ 30 ಮಂದಿ ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಪ್ರತಿ ಬಾರಿಗೆ ಒಂದುಕ್ಯಾಪ್ಸೂಲ್ ನಂತೆ 4 ತಿಂಗಳು ಸೇವಿಸಲು ಕೊಡಲಾಯಿತು. ಅವಧಿಯ ನಂತರ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ ಬೆಟ್ಟದ ನೆಲ್ಲಿಕಾಯಿಯ ಸತ್ವ ಸೇವಿಸಿದವರಲ್ಲಿ ಕೊಬ್ಬಿನಾಂಶ ಕಡಿಮೆಯಾಗಿರುವುದು ಕಂಡುಬಂದಿದೆ.ಇದರ ಜೊತೆಗೆ ರೋಗಿಗಳಲ್ಲಿ ಒಳ್ಳೆಯ ಕೊಲಸ್ಟಿರಾಲ್ ಪ್ರಮಾಣ ಹೆಚ್ಚಾಗಿರುವುದು ವರದಿಯಾಗಿದೆ.