ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ: ಖಿನ್ನತೆಯನ್ನು ಕಡಿಮೆ ಮಾಡುವ ಗುಣ

ಬೆಟ್ಟದ ನೆಲ್ಲಿಕಾಯಿ: ಖಿನ್ನತೆಯನ್ನು ಕಡಿಮೆ ಮಾಡುವ ಗುಣ

0

       ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು, ಕೆಲವು ದಿನಗಳವರೆಗೆ 10 – 14 ಆಹಾರದೊಡನೆ  ಸೇವಿಸಲು ಕೊಡಲಾಯಿತು. ಅವಧಿಯ ನಂತರ ಇಲಿಗಳನ್ನು,ಖಿನ್ನತೆ ಅಳೆಯುವ ಪರೀಕ್ಷೆಗೆ ಒಳಪಡಿಸಿದಾಗ 200 m ಪ್ರಮಾಣದ ಸತ್ವ ಸೇವಿಸಿದ ಇಲಿಗಳಲ್ಲಿ ಖಿನ್ನತೆಯ ಪ್ರಮಾಣ ಕಡಿಮೆಯಾಗಿತ್ತೆಂದು ವರದಿಯಾಗಿದೆ.ಬೆಟ್ಟದ ನೆಲ್ಲಿಕಾಯಿಯ ಸತ್ವ, ಖಿನ್ನತೆಯ ಚಿಕಿತ್ಸೆಗೆ ಉಪಯೋಗಿಸುವ ಔಷಧಿಗಳಷ್ಟೇ ಪರಿಣಾಮಕಾರಿ ಎಂದು ಕಂಡು ಬಂದಿದೆ ಮತ್ತು ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಆಸ್ಕಾರ್ಬಕ್ ಆಮ್ಲ,ಫ್ಲೆವೊನಾಯ್ಡ್ಸ್, ಟ್ಯಾನಾಯ್ಡ್ಸ್,ಮತ್ತು ಪಾಲಿಫಿನಾಲ್ಸ್ ಕಾರಣ ವೆನ್ನಲಾಗಿದೆ.

Join Our Whatsapp Group

 ಗಾಯವಾಸಿ ಮಾಡುವ ಗುಣ:

        ಪ್ರಯೋಗಶಾಲೆಯಲ್ಲಿ ಗಾಯ ಮಾಡಿದ ಇಲಿಗಳಿಗೆ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಕೆಲವು ದಿನಗಳವರೆಗೆ ಆಯಿಂಟ್ ಮೆಂಟ್ ನಂತೆ ಹೊರ ಲೇಪನವಾಗಿ ಹಚ್ಚಿ ಪರೀಕ್ಷಿಸಿದಾಗ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಗಾಯ ವಾಸಿಮಾಡುವ ಗುಣವಿದೆಯೆಂದು ದೃಡಪಟ್ಟಿದೆ. ಸದತ್ವ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಆಸ್ಕಾರ್ಬಿ ಆಮ್ಲ ಮತ್ತು  ಟ್ಯಾನಿನ್ ಸತ್ವಗಳಾದ ಎಂಎಬ್ಲಿಕನಿನ್ ಎ ಮತ್ತು ಎಂಬ್ಲಿಕನಿನ್  ಬಿ. ಕಾರಣವೆನ್ನಲಾಗಿದೆ.

      ನೀರು ಮತ್ತು ಎಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನಲ್ಲಿಕಾಯಿ ಮರದ ತೊಗಟೆಯಿಂದ ತಯಾರಿಸಿದ ಸತ್ವವನ್ನು ಮುಲಾಮಿನಂತೆ  15 ದಿನಗಳವರೆಗೆ ವಿಸ್ಟಾರ್ ಇಲಿಗಳ ಗಾಯಕ್ಕೆ ಲೇಪಿಸಿ ಪರೀಕ್ಷಿಸಿದಾಗ ತೊಗಟೆಯ ಸತ್ವಕ್ಕೆ ಗಾಯವಾಸಿ ಮಾಡುವ ಗುಣವಿದೆಯೆಂದು ಕಂಡುಬಂದಿದೆ.

 ಕಾಯಿಲೆ ಉಂಟಾಗದಂತೆ ಮಾಡುವ ಗುಣ :

      ಗೌಟ್, ಕಿಲ್ವಾಯುವಿಗೆ ಸಂಬಂಧಿಸಿದ ಕಾಯಿಲೆಯಲ್ಲಿ ಒಂದು.ಈ ಕಾಯಿಲೆಯನ್ನು ಗೌಟ್ ಅರ್ಥ್ರೈಟೀಸ್ ಎಂದು ಕರೆಯುತ್ತಾರೆ.ಈ ಕಾಯಿಲೆ ಕಂಡು ಬಂದಾಗ ಪ್ರಮುಖವಾಗಿ ಕಾಲಿನ ಹೆಬ್ಬೆರಳಿನ ಗೆಣ್ಣಿನಲ್ಲಿ ಉರಿಯೂತ ಉಂಟಾಗುತ್ತದೆ ಮತ್ತು ಆ ಭಾಗ ಕೆಂಪಗಾಗುತ್ತದೆ,ಅಸಾಧ್ಯ ನೋವಿರುತ್ತದೆ. ಈ ರೀತಿ ಉರಿಯೂತ ಉಂಟಾಗಲು ಆ ಭಾಗದಲ್ಲಿ ಯೂರಿಕ್ ಆಮ್ಲದ ಹರಳುಗಳು ಶೇಖರಣೆ ಯಾಗಿರುವುದು ಒಂದು ಮುಖ್ಯ ಕಾರಣ. ಈ ಕಾಯಿಲೆಯಿಂದ ನಡೆಸಲು ಕಷ್ಟವಾಗುತ್ತದೆ ವಾಗುತ್ತದೆ ಮತ್ತು ಕೈ ಬೆರಳುಗಳನ್ನು ಮಡಿಸಿದಾಗ ಅಸಾಧ್ಯ ನೋವುಂಟಾಗುತ್ತದೆ. ಇಂತಹ ಕಾಯಿಲೆ ಉಂಟಾಗದಂತೆ  ತಡೆಯುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆಯೆಂದು ತಿಳಿದುಬಂದಿದೆ. ನೀರು ಮತ್ತು ಮಧ್ಯಸಾರ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು 21 ದಿನಗಳವರೆಗೆ ಇಲಿಗಳಿಗೆ ಸೇವಿಸಲು ಕೊಟ್ಟು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದಾಗ, ಸತ್ವಕ್ಕೆ ಗೌಟ್ ಕಾಯಿಲೆ ಉಂಟಾಗದಂತೆ ತಡೆಯುವ ಸಾಮರ್ಥ್ಯವಿದೆಯೆಂದು ತಿಳಿದುಬಂದಿದೆ.

 ಜ್ವರ ಕಡಿಮೆ ಮಾಡುವ ಗುಣ :

      ಬ್ರೀವರ್ಸ ಈಸ್ಟ್  ದ್ರಾವಣವನ್ನು ಕೊಟ್ಟು ಜ್ವರ ಉಂಟಾಗುವಂತೆ ಮಾಡಿದ ಇಲಿಗಳಿಗೆ, ಎಥನಾಲ್ ಮತ್ತು ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ಎರಡೂ ಬಗೆಯ ಸತ್ವಗಳಿಗೆ ಜ್ವರ ಕಡಿಮೆ ಮಾಡುವ ಮತ್ತು ನೋವು ನಿವಾರಕ ಗುಣವಿದೆಯೆಂದು ಕಂಡುಬಂದಿದೆ. ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಆಲ್ಕಲಾಯ್ಡ್ ಗಳು, ಟ್ಯಾನಿನ್ಸ್ ಮತ್ತು ಫೀನಾಲ್ಸ್ ಕಾರಣವೆನ್ನಲಾಗಿದೆ.

 ತಿಳಿವಳಿಕೆಯನ್ನು ಉತ್ತಮಪಡಿಸುವ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ :

       ನರಕೋಶಗಳು ನಶಿಸುವಿಕೆಯಿಂದ ತಿಳುವಳಿಕೆಯ ಮಟ್ಟ ಕುಸಿಯುತ್ತದೆ.ಕ್ರಮೇಣ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತದೆ.ವೃದ್ಧಾಪ್ಯ  ಹೆಚ್ಚಾದಂತೆ ಮರೆವಿನ ಕಾಯಿಲೆ ಉಂಟಾಗುತ್ತದೆ.ನೀರು ಮತ್ತು ಮಧ್ಯಸಾರ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯ ಸತ್ವವನ್ನು ಇಳಿಗಳಿಗೆ ಕೊಟ್ಟು ಕೆಲವು ದಿನಗಳ ನಂತರ ಅವುಗಳ ವಿವಿಧ ಆಯಾಮಗಳಿಂದ ಪರೀಕ್ಷೆ ನಡೆಸಿದಾಗ,ಸತ್ವಕ್ಕೆ ತಿಳುವಳಿಕೆಯನ್ನು ಉತ್ತಮಪಡಿಸುವ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುವ ಗುಣವಿದೆಯೆಂದು ದೃಢಪಟ್ಟಿದೆ. ಬೆಟ್ಟದ ನೆಲ್ಲಿಕಾಯಿಯ ಸತ್ವ ಬುದ್ಧಿ ಮಾಂದ್ಯತೆ ಮತ್ತು ಮರೆವಿನ  ಕಾಯಿಲೆಯ ಚಿಕಿತ್ಸೆಗೆ ಉಪಯುಕ್ತ ಔಷಧಿಯಾಗುವ ಸಾಧ್ಯತೆಯ ಬಗ್ಗೆ ಆಶಾಭಾವನೆ ವ್ಯಕ್ತವಾಗಿದೆ.

 ಥೈರಾಯ್ಡ್ ಗ್ರಂಥಿ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಗುಣ :

        ಥೆರಾಯ್ಡ್ ಒಂದು ನಿರ್ನಾಳ ಗ್ರಂಥಿ,ಚಿಟ್ಟೆಯ ಆಕಾರವಾಗಿದ್ದು ಎರಡು ಹಾಲೆಗಳನ್ನು ಹೊಂದಿದೆ. ಈ ಗ್ರಂಥಿ ಗಂಟಲಿನ ಹತ್ತಿರ ಉಸಿರು ನಾಳದ ಮೇಲ್ಭಾಗದಲ್ಲಿ ಸ್ಥಾಪಿತವಾಗಿದೆ. ಈ ಗ್ರಂಥಿ  ಆಹಾರದಿಂದ ದೊರೆಯುವ ಅಯೋಡಿನ್ ಅನ್ನು ಬಳಸಿಕೊಂಡು ಎರಡು ಬಗೆಯ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಟ್ರೈಐಯಡೊಥೈರಾಕ್ಸಿನ್  ಮತ್ತು ಥೈರಾಕ್ಷಿನ್ ಈ ಎರಡು ಹಾರ್ಮೋನ್ ಗಳನ್ನು ದೇಹದ ವಿವಿಧ ಜೈವಿಕ ಕ್ರಿಯೆಗಳ ಮೇಲೆ ಹಿಡಿತ ಹೊಂದಿವೆ. ಈ ಎರಡು ಹಾರ್ಮೋನ್ ಗಳನ್ನು ಸಾಮಾನ್ಯವಾಗಿ ಥೈರಾಕ್ಸಿನ್ ಎಂದು ಕರೆಯುತ್ತಾರೆ.ಬೆಳವಣಿಗೆಯ ವಯಸ್ಸಿನಲ್ಲಿ ಥೆರಾಯ್ಡ್ ಗ್ರಂಥಿ ಹೆಚ್ಚು ಸಕ್ರಿಯವಾಗಿತ್ತದೆ. ಥೈರಾಯ್ಡ್ ಗ್ರಂಥಿ, ಹೆಚ್ಚಿನ ಪ್ರಮಾಣದಲ್ಲಿ ಥೈರಾಕ್ಸಿನ್ ಹಾರ್ಮೋನ್ ಅನ್ನು ಉತ್ಪಾದನೆ ಮಾಡಿದರೆ ಅಂತಹ ಸ್ಥಿತಿಯನ್ನು ಹೈಪರ್ ಥೆರಸಂಯ್ಡಿಸಂ ಎಂದು ಕರೆಯುತ್ತಾರೆ ಇದೇ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಅಂತಹ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯುತ್ತಾರೆ.