ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಏಡಿಗಂತಿ ಎಂದು ಕರೆಯುತ್ತಾರೆ.ಮಾರಕ ಕ್ಯಾನ್ಸರ್ ರೋಗವನ್ನು ರೋಗದ ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ರೋಗವನ್ನು ಗುಣಪಡಿಸಬಹುದು. ಆರೋಗ್ಯವಂತ ದೇಹದಲ್ಲಿನ ಜೀವಕೋಶಗಳು ವ್ಯವಸ್ಥಿತವಾಗಿ ವಿಭಜನೆಗೊಂಡು ವೃದ್ಧಿಯಾಗುತ್ತದೆ.
ಕ್ರಮೇಣ ಅವು ನಶಿಸಿ ಹೋಗುತ್ತವೆ ನಶಿಸಿ ಹೋದ ಮತ್ತು ಗಾಯಗೊಂಡ ಜಾಗವನ್ನು ಹೊಸದಾಗಿ ವಿಭಜನೆಗೊಂಡ ಜೀವಕೋಶಗಳು ಆಕ್ರಮಿಸಿ ನಶಿಸಿದ ಜಾಗವನ್ನು ಸರಿಪಡಿಸುತ್ತವೆ.ಇದ್ದು ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಈ ಪ್ರತಿಕ್ರಿಯೆಯಲ್ಲಿ ಜೀವಕೋಶಗಳು ನಿರ್ಬಂಧ ವಿಲ್ಲದೆ ಮಿತಿಮೀರಿ ವಿಭಜನೆಯಾಗಿ ಕ್ಯಾನ್ಸರ್ ಗಂತಿಯ ಉತ್ಪತ್ತಿಗೆ ಕಾರಣವಾಗುತ್ತದೆ.ಕ್ಯಾನ್ಸರ್ ಗಂತಿಗಳು ಸಾಮಾನ್ಯವಾಗಿ ಚರ್ಮ, ಬಾಯಿ ಸ್ಥನ,ಮೂಳೆ,ಮಾಂಸ ಖಂಡ ಮುಂತಾದವುಗಳಲ್ಲಿ ಬೆಳವಣಿಗೆ ಯಾಗುತ್ತವೆ. ಈ ರೋಗಕ್ಕೆ ನಿರ್ದಿಷ್ಟವಾದ ಕಾರಣ ತಿಳಿದು ಬಂದಿಲ್ಲ ಆದರೂ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗಿದೆ.
ವಿವಿಧ ಬಗೆಯ ದ್ರಾವಣ ಉಪಯೋಗಿಸಿ ಬೆಟ್ಟದನಲ್ಲಿಕಾಯಿಂದ ತಯಾರಿಸಿದ ಸತ್ವವನ್ನು ಪ್ರಯೋಗ ಶಾಲೆಯಲ್ಲಿ ಬೆಳೆಸಿದ ಕ್ಯಾನ್ಸರ್ ಕೋಶಗಳ ಮೇಲ ,ಮೇಲೆ ಮತ್ತು ಕೆಲವು ಬಗೆಯ ಕ್ಯಾನ್ಸರ್ ಕೋಶಗಳನ್ನು ಇಲಿಗಳಲ್ಲಿ ಸ್ಥಾಪಿಸಿ ಅವುಗಳ ಮೇಲೆ ನಡೆಸಿದ ಪ್ರಯೋಗದಿಂದ ಬೆಟ್ಟದ ನೆಲ್ಲಿಕಾಯಿಯ ಸತ್ವೃಕ್ಕೆ ಕ್ಯಾನ್ಸರ್ ಕೋಶಗಳನ್ನು ಬೆಳೆಯದಂತೆ ಮಾಡುವುದರ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ಉಪಯುಕ್ತವೆಂದು ಕಂಡುಬಂದಿದೆ.
ಕೀಯವನ್ನು ವಾಸಿ ಮಾಡುವ ಗುಣ :
ಕೀಲುಗಳ ಭಾಗದಲ್ಲಿರುವ ಗಟ್ಟಿಯಾದ ಮೂಳೆಗಳ ತುದಿ ಭಾಗದಲ್ಲಿ ಲೋಳೆಯಂತೆ ಇರುವ ಮೃದ್ವಸ್ಥಿ ಇದೆ.ಇದು ಮೂಳೆಗಳ ಸುಗಮ ಚಲನೆಗೆ ಸಹಕಾರಿ.ಇದರಿಂದ ಕಾಲು,ಮತ್ತು ಬೆರಳುಗಳು ಸುಗಮವಾಗಿ ಚಲಿಸುತ್ತವೆ ಮೃದಸ್ಥಿತಿಯಲ್ಲಿ ಕಾಂಡ್ರೊ ಸೈಟ್ ಗಳೆಂಬ ಕೋಶಗಳಿರುತ್ತವೆ. ಇವು ಮೃದ್ಧಿಸ್ಥಿಯನ್ನು ಸುಸ್ಥಿಷ್ಟಿಯಲ್ಲಿಡುತ್ತವೆ. ಮೃದ್ವಸ್ಥಿ ಸವೆಯುದರಿಂದ ನಶಿಸುವುದರಿಂದ ಮೂಳೆಗಳ ಚಲನೆಗೆ ಅಡಚಣೆಯುಂಟಾಗಿ ಆ ಭಾಗದಲ್ಲಿ ಉರಿಯೂತ ಉಂಟಾಗುತ್ತದೆ.ಈ ಲಕ್ಷಣವನ್ನು ಕೀಲ್ವಾಯು ಎಂದು ಕರೆಯುತ್ತಾರೆ. ಮೃದ್ವಸ್ಥಿ ನಸಿತದಂತೆ ತಡೆಯುಂಟು ಮಾಡಿದರೆ ಕೀಲ್ವಾಯು ಉಂಟಾಗುವ ಸಂಭವ ಕಡಿಮೆ. ಉಂಟು ಮಾಡುತ್ತವೆ. ಪ್ರತಿಕೂಲ ಪರಿಣಾಮಗಳಿಲ್ಲದ ಔಷಧಿಯನ್ನು ಹುಡುಕುವ ಹಿನ್ನೆಲೆಯಿಂದ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ.
ನೀರು ಉಪಯೋಗಿಸಿ ಬೆಟ್ಟದ ನಲ್ಲಿಕಾಯಿಯ ಚೂರ್ಣದಿಂದ ತಯಾರಿಸಿದ ಸತ್ವಕ್ಕೆ, ಕಂಡ್ರೋಸೈಟ್ ಗಳನ್ನು ಕಾಪಾಡುವುದರ ಮೂಲಕ ಮೃದ್ವಸ್ಥಿ ಸೇವೆಯದಂತೆ ತಡೆದು ಕೀಲ್ಟಾಯು ಉಂಟಾಗದಂತೆ ಮಾಡುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗಗಳಿಂದ ದೃಢಪಟ್ಟಿದೆ ಬಿಟ್ಟದ ನಲ್ಲಿಕಾಯಿಯ ಚೂರ್ಣದ ಸೇವೆಯಿಂದ ಕೀಲ್ವಾಯು ಉಂಟಾಗುವುದನ್ನು ತಡೆಯಬಹುದು ಮತ್ತು ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಬಹುದು.
ಕೆಮ್ಮನ್ನು ಕಡಿಮೆ ಮಾಡುವ ಗುಣ :
ಎಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯ ಚೂರ್ಣದಿಂದ ತಯಾರಿಸಿದ ಸತ್ವವನ್ನು ಬೆಕ್ಕುಗಳಿಗೆ ಕೊಟ್ಟು ಪರೀಕ್ಷಿಸಿದಾಗ ಕಡಿಮೆ ಪ್ರಮಾಣದ ಸತ್ವ ಸೇವಿಸಿದ ಬೆಕ್ಕುಗಳಲ್ಲಿ ಪೂರಕ ಫಲಿತಾಂಶ ಕಂಡುಬರಲಿಲ್ಲವೆಂದು ವರದಿಯಾಗಿದೆ. ಆದರೆ, ಹೆಚ್ಚಿನ ಪ್ರಮಾಣದ ಸೇವಿಸಿದ ಬೆಕ್ಕುಗಳಲ್ಲಿ ಕೆಮ್ಮಿನ ಪ್ರಮಾಣ ಕಡಿಮೆಯಾಗಿತ್ತೆಂದು ಮತ್ತು ಪ್ರತಿಭಾರಿಯ ಕೆಮ್ಮಿನ ಅಂತರ ಹೆಚ್ಚಾಗುತ್ತೆಂದು ವರದಿಯಾಗಿದೆ. ಹೆಚ್ಚಿನ ಪ್ರಮಾಣದ ಬೆಟ್ಟದ ನೆಲ್ಲಿಯ ಸತ್ವ ಕೆಮ್ಮನ್ನು ಕಡಿಮೆ ಮಾಡಲು ಉಪಯುಕ್ತ.
ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಗುಣ :
ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಗುಣವಿದೆಯೆಂದು ಇಲಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದು ಬಂದಿದೆ. ಸತ್ಯಕ್ಕೆ ಕೆಟ್ಟ ಕೊಲೆಸ್ಟಿರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಿರಾಲ್ ಪ್ರಮಾಣವನ್ನು ಹೆಚ್ಚು ಮಾಡುವ ಗುಣವೂ ಇದೆ ಯೆಂದು ತಿಳಿದುಬಂದಿದೆ.ಮುಂದಿತನದ ಕಾರಣದಿಂದ ಅಧಿಕವಾಗುವ ಕೊಬ್ಬಿನಾಂಶವನ್ನೂ ಕಡಿಮೆ ಮಾಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
ಬೆಟ್ಟದ ನೆಲ್ಲಿಕಾಯಿಯಲ್ಲಿ ಅಧಿಕ ಪ್ರಮಾಣದ ಗ್ಯಾಲಿಕ್ ಆಮ್ಲ ಇದೆ ಯೆಂದು ತಿಳಿದಿರುವ ವಿಷಯ. ಬೆಟ್ಟದ ನೆಲ್ಲಿಕಾಯಿಯ ಔಷಧಿಯ ಗುಣಕ್ಕೆ ಈ ಆಮ್ಲ ಕಾರಣ.ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ. ಬೆಟ್ಟದ ನೆಲ್ಲಿಕಾಯಿಯ ರಸ ಮತ್ತು ಗ್ಯಾಲಿಕ್ ಆಮ್ಲವನ್ನು ಪ್ರತ್ಯೇಕವಾಗಿ ಇಳಿಗಳಿಗೆ ಕೊಟ್ಟು ಪರೀಕ್ಷಿಸಿದಾಗ ಎರಡೂ ಸತ್ವಗಳಿಗೆ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಗುಣವಿದೆಯೆಂದು ತಿಳಿದುಬಂದಿದೆ.ಇವೆರಡರಲ್ಲಿ ಗ್ಯಾಲಿಕ್ ಆಮ್ಲ ಹೆಚ್ಚು ಪರಿಣಾಮಕಾರಿಯನ್ನಲಾಗಿದೆ ಮತ್ತು ಕೊಬ್ಬನ್ನು ಕಡಿಮೆ ಮಾಡುವ ಔಷಧಿಯಾಗುವ ಎಲ್ಲಾ ಗುಣ ಲಕ್ಷಣವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.