ಕಶ್ಯಪ್ ಪ್ರಜಾಪತಿಗೆ ದ್ವಿತೀಯ ಪತ್ನಿಯಾದ ದಿತಿ ಗರ್ಭದಲ್ಲಿ ಹಿರಣ್ಯಕಶ್ಯಪ,ಹಿರಣ್ಯಾಕ್ಷ, ವಜ್ರಾಂಗ, ಸಿಂಹಿಕರು ಜನಿಸಿದರು. ವಜ್ರಾಂಗನಿಗೆ ಅನುಸಾರನ್ವಯದಲ್ಲಿ ಪ್ರಾದುರ್ಭವಿಸಿದ ವಾರಂಗಿಯನ್ನು ಕೊಟ್ಟು ವಿವಾಹ ಮಾಡಿದರು.ಇವರಿಗೆ ತಾರಕಾಸುರನ್ನು ಜನಿಸಿದನು. ಸಿಂಹಿಕಳನ್ನು ದೈತ್ಯರಾಜನಾದ ವಿಪ್ರಚಿತ್ತಿ ಪರಿಗ್ರಹಿಸಿದನು ಇವರಿಗೆ ಮಹಾಕಾಯನೂ, ಮೇಘ ವರ್ಣನೂ ಕ್ರೂಕರ್ಮನೂ ಆದ ರಾಹು, ತಿಕ್ಷ್ಣದಂಷ್ಟ್ರನೂ, ಪಿಂಗಳಾಕ್ಷನೂ ಆದ ಕೇತು ಜನನಿ ಛಾಯಾಗ್ರಹನಾಗಿ ನೆಲೆಸಿದರು.
ದಾನವ ಸರ್ವಭೌಮನಾದ ಹಿರಣ್ಯಕಶ್ಯಪನು ಲೋಕಕ್ಷಯವನ್ನು ಬಯಸಿ ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ, ಆತನನ್ನು ಕಟಾಕ್ಷ ಪಡಿಸಿಕೊಂಡು ಅನೇಕ ದಿವ್ಯ ವರಗಳನ್ನು ಪಡೆದನು. ಆ ವರಬಲದಿಂದ ತನ್ನಂತಹ ಮಹಾಬಲ ಸಂಪನ್ನು ಶಕ್ತಿವಂತನು ಅಥವ ಸಂಪತ್ ಸಂಪನ್ನನ್ನೂ ಶಕ್ತಿವಂತನೂ, ಆತಲ, ವಿತಲ, ಸುತಲ, ತಲಾತಲ,ರಸಾತಲ, ಮಹಾತಲ, ಪಾತಾಳಾದಿ ಅದೋ ಲೋಕಗಳಲ್ಲಿಯೂ ಭೂಲೋಕ,ಭುವಲ್ಲೋಕ, ಸುವರ್ಲೋಕ ಮಹಾ ಲೋಕ ಜನಲೋಕ, ಮಹಾಲೋಕ,ಜನಲೋಕ,ತಪಲೋಕ,ಸತ್ಯಲೋಕಗಳಲ್ಲಿಯೂ ಯಾರೂ ಇಲ್ಲವೆಂಬ ಗರ್ವದಿಂದ ಮದದಿಂದ ಲೋಕಕಂಟಕನಾಗಿ ರಾಜ್ಯಪಾಲನೆಯನ್ನು ಮಾಡಲು ಆರಂಭಿಸಿದನು.ತಪೋದನರ, ತಾಪಸಿಗಳ ಆಶ್ರಮ ಧರ್ಮಗಳಿಗೆ ವಿಘ್ನವನ್ನುಂಟುಮಾಡಿ, ಯಜ್ಞ ಯಾಗಗಳಲ್ಲಿ ಋಷಿಗಳು ದೇವತೆಗಳಿಗಾಗಿ ಸಮರ್ಪಿಸಿದ ಆಹುತಿಗಳನ್ನು ತಾನೇ ಸ್ವೀಕರಿಸಿತೊಡಗಿದನು ಯಜ್ಞ ಹವಿಸ್ಸುಗಳಿಲ್ಲದೇ ದೇವತೆಗಳ ಶಕ್ತಿಯು ಕ್ಷೀಣಿಸಿ, ಹಸಿವಿನಿಂದ ಮಾನವ ರೂಪದಲ್ಲಿ ಭೂಲೋಕದಲ್ಲಿ ಹುಟ್ಟಿ ನೆಲೆಸೊಪ್ಪು ಗೆಡ್ಡೆಗೆಣಸುಗಳನ್ನು ಹುಡುಕಿಕೊಂಡು ತಿಂದು ಜೀವಿಸಬೇಕಾಯಿತು. ಪ್ರಾಣಭಯದಿಂದ ಮುನಿಗಳು ತಪೋವನಗಳನ್ನು ತೊರೆದು ಗಿರಿ ಕಂದಗಳಿಗೆ ಹೋಗಿ ಅಡಗಿಕೊಂಡರು. ಧರ್ಮದ ಆದರಣೆಯು ಕ್ಷೀಣಿಸಿ ಪ್ರಜೆಗಳು ಸ್ವೇಚ್ಛಾ ಪ್ರವೃತ್ತಿಗೂ, ವಿಶೃಂಖಗಳ ವಿಹಾರಕ್ಕೂ ವ್ಯಸನಿಗಳಾದರು.
ಹಿರಣ್ಯಕಷ್ಪನಿಗೆ ಪ್ರಹಲ್ಲಾದ,ಅನುಹ್ಲಾದ,ಸಂಹ್ಲಾದ,ಹ್ಲಾದರೆಂಬ ನಾಲ್ವರು ಗಂಡು ಮಕ್ಕಳು. ಒಮ್ಮೆ ಹಿರಣ್ಯಕಶ್ಯಪನು ಅಮೂಲ್ಯವಾದ ರತ್ನ ಖಚಿತ ಸಿಂಹಾಸನದಲ್ಲಿ ಕುಳಿತು ಮಣಿ ರತ್ನಗಳನ್ನು ಅಳವಡಿಸಿದ ಚಿನ್ನದ ಸೌಧದಲ್ಲಿನ ಆಸ್ಥಾನ ಸಭೆಯಲ್ಲಿ ಮಧುಪಾನಮದ್ದನಾಗಿದ್ದ ಸಮಯದಲ್ಲಿ ತನ್ನ ಹಿರಿಯ ಮಗನಾದ ಪ್ರಹ್ಲಾದನನ್ನು ಸಭೆಯೊಳಗೆ ಕರೆದು ಕುಳ್ಳಿರಿಸಿರಿಸಿಕೊಂಡು ಹೀಗೆಂದನು; “ ಮಗೂ ನೀನು ವಿದ್ಯಾಭ್ಯಾಸವನ್ನು ಆರಂಭಿಸಿದ ಮೇಲೆ ಯಾವ ರೀತಿಯಾಗಿ ಸುಭಾಷಿತಗಳನ್ನು ಕಲಿತಿದ್ದೀಯಾ?ಇಷ್ಟು ಕಾಲವೂ ಗುರುಗಳು ನಿನಗೆ ಬೋಧಿಸಿದ ರಾಜನೀತಿಯ ಸಾರವೇನು? ನಿನ್ನ
ಕೈಯಲ್ಲಿರುವ ಪುಸ್ತಕದಲ್ಲಿ ಏನನ್ನು ಬರೆದು ತಂದಿದ್ದೀಯಾ? ನೀನು ಕಲಿತ ವಿದ್ಯೆಗಳನ್ನು ಇಲ್ಲಿ ಪ್ರದರ್ಶಿಸಿ ಹೆತ್ತವರಿಗೂ, ಗುರುಗಳಿಗೂ, ಸಂತೃಪ್ತಿಯನ್ನುಂಟುಮಾಡು. ಇಲ್ಲಿ ಕುಳಿತಿರುವವರೆಲ್ಲರೂ ಸಂತೋಷಪಡುವ ರೀತಿಯಲ್ಲಿ ಒಂದು ಒಳ್ಳೆಯ ಪದ್ಯವನ್ನು ಹೇಳು ಎಂದನು. ತಂದೆಯ ಮಾತುಗಳನ್ನು ಕೇಳಿದ ಪ್ರಹಲ್ಲಾದನು ವಿನಯದಿಂದ ಮೃದು ವಾಕ್ಯಗಳಿಂದ ದಾನವೇಶ್ವರಾ ಕರ್ಮವಾಶತ್ತು ಮಾನವರಾಗಿ ಜನಿಸಿದವರಿಗೆ ವಿಷ್ಣು ನಾಮ ಸಂಕೀರ್ತನೆಗಿಂತಲೂ ಬೇರೆ ಪುಣ್ಯ ಕಾರ್ಯವಿಲ್ಲ. ಇದನ್ನೇ ನಾನು ಗ್ರಹಿಸಿರುವುದು ಇದೇ ಸಮಸ್ತ ವಿದ್ಯೆಗಳಿಗೂ ಸಾರಭೂತವಾದ ಸುಭಾಷಿತ.ವಿಷ್ಣು ಭಕ್ತಿಗಿಂತಲೂ ಅನ್ಯ ರಾಜ್ಯ ಧರ್ಮವಿಲ್ಲ. ವಿಷ್ಣು ನಾಮ ಜಪಕ್ಕಿಂತಲೂ ಬೇರೆ ಉತ್ತಮ ಸಂಗೀತವಿಲ್ಲ ”ಎಂದು ಉತ್ತರಿಸಿದನು. ಪ್ರಹ್ಲಾದರ ಮಾತುಗಳನ್ನು ಹಿರಣ್ಣ ಕಶ್ಯಪನ ಕಿವಿಗಳಿಗೆ ಚುಚ್ಚಿದಂತಾಗಿ ಕ್ರೋಧಾಗ್ನಿ ಜ್ವಾಲೆಯಂತಾದನು. ಅವನ ಕಣ್ಣುಗಳು ಕೆಂಡದಂತಾದವು.ಕೂಡಲೇ ಅವನು ಗುರುಗಳನ್ನು ನೋಡಿ ಇದನ್ನೆಲ್ಲಾ ನೀವು ಬೋಧಿಸಿರುವುದು?ಎಳೆ ಮಗುವಿಗೆ ವಿದ್ಯೆಯನ್ನು ಕಲಿಸಲು ನಿಯೋಜಿಸಿದರೆ ನಮ್ಮ ವಂಶದ ಶತ್ರುವಾದ ಆ ವಿಷ್ಣುವಿನ ಬಗ್ಗೆ ಬೋಧಿಸಿದ್ದೀರಾ ಗುರುಗಳೆಂದು ಗೌರವಿಸಿದರೆ ಕುಲದ್ರೋಹ ಕೃತ್ಯ ವ್ಯಸಗುತ್ತೀರಾ? ಎಂದು ಕೋಪಿಸಿಕೊಂಡನು.
ಆಗ ರಾಕ್ಷಸರ ಗುರುಗಳ ಮಹಾರಾಜನಿಗೆ ನಮಸ್ಕರಿಸಿ, “ದೈತ್ಯಶ್ವರಾ!ಈ ವಿಷಯದಲ್ಲಿ ನಮ್ಮ ತಪ್ಪೇನೂ ಇಲ್ಲ ಇತರೇ ವಿದ್ಯಾರ್ಥಿಗಳಿಗೆ ಕಲಿಸಿದಂತೆಯೇ ನಾವೂ ಈತನಿಗೆ ಬೋಧಿಸಬೇಕೆಂದು ಪ್ರಯತ್ನಿಸಿದ್ದೆವು. ಆದರೆ ರಾಜಕುಮಾರನು ನಾವು ಹೇಳಿದ ಮಾತುಗಳನ್ನು ಲೆಕ್ಕಿಸಲಿಲ್ಲ. ನಾವು ಹೇಳುವ ಪಾಠಗಳನ್ನು ಕೇಳಿಸಿಕೊಳ್ಳದೆ ಸರ್ವಕಾಲದಲ್ಲಿ ಯೂ ವಿಷ್ಣುನಾಮವನ್ನೇ ಜಪಿಸುತ್ತಾ ಮೈಮರೆಯುತ್ತಿರುತ್ತಾನೆ ” ಎಂದು ಮುರಿಟ್ಟಿಕೊಂಡರು ಅಸುರ ಗುರುಗಳ ಮಾತುಗಳಿಗೆ ಹಿರಣ್ಯ ಕಶ್ಯಪನು ಶಾಂತಿಯಾಗಿ ತನ್ನ ಪ್ರಿಯಕುಮಾರನನ್ನು ಲಾಲನೆ ಮಾಡಿ “ಮಗೂ! ಆ ವಿಷ್ಣು ನಮ್ಮ ವಂಶಕ್ಕೆ ಆಗರ್ಭಶತ್ರು. ಅವನಿಂದ ಕೆಟ್ಟದ್ದನ್ನು ಅನುಭವಿಸದೇಯಿರುವವನೇ ಇಲ್ಲ ನೀನು ಗುರುಗಳ ರಾಜ ಮಾತಿಗೆ ಅನುಗುಣವಾಗಿ ಅವರು ಹೇಳಿದಂತೆ ನಡೆದುಕೊಳ್ಳಬೇಕು.ಆನಂತರ ನನ್ನ ರಾಕ್ಷಸ ರಾಜ್ಯವು ನಿನ್ನದೇ ಅಲ್ಲವೇ? ”ಎಂದು ಬುದ್ಧಿ ಮಾತನ್ನು ಹೇಳಿ ಮತ್ತೆ ವಿದ್ಯಾರ್ಜನೆಗೆಂದು ಆಶ್ರಮಕ್ಕೆ ಕಳುಹಿಸಿದನು. ಆಶ್ರಮಕ್ಕೆ ಮರಳಿದ್ದ ಬಳಿಕ ದಿತಿಜಾಚಾರ್ಯರು ಪ್ರಹ್ಲಾದನಿಗೆ ಅನೇಕ ವಿಧವಾಗಿ ಲೋಕ ತಂತ್ರವನ್ನು ವಿವರಿಸುತ್ತಾ ಈ ರೀತಿ ಹೇಳಿದರು.
ಮಗೂ! ನಿಮ್ಮ ತಂದೆ ವಿಷ್ಣು ನಿಂದನೆ ಮಾಡಿದನೆಂದು ಆತನನ್ನು ಸಾಮಾನ್ಯನೆಂದು ಭಾವಿಸಬೇಡ.ಆತನು ಪಿತಾಮಹನಿಗಾಗಿ ಘೋರ ತಪ್ಪತನ್ನಾಚರಿಸಿ ದಿವ್ಯ ವರಗಳನ್ನು ಪಡೆದ ಮಹಾನ್ ಶಕ್ತಿಶಾಲಿ, ನನ್ನ ಮಾತನ್ನು ಕೇಳಿ ರಾಕ್ಷಸರ ವಿಧಿ ವಿಧಾನಗಳನ್ನು ಶ್ರದ್ದೆಯಿಂದ ಅಧ್ಯಯನ ಮಾಡಿ ಪಿತೃ ದೇವತೆಗಳಿಗೆ ಸಂತೋಷವನ್ನುಂಟು ಮಾಡು ಎಂದು ಬುದ್ಧಿ ಮಾತನ್ನು ಹೇಳಿದನು.
ಪ್ರಹ್ಲದನು ಗುರುಗಳ ಮಾತುಗಳಿಗೆ ಸ್ಪಂದಿಸಲಿಲ್ಲ. ನನ್ನ ಹೃದಯವನ್ನು ಗಟ್ಟಿ ಮಾಡಿಕೊಂಡು ಬೆಟ್ಟದಷ್ಟು ಧೈರ್ಯವನ್ನು ತಂದುಕೊಟ್ಟ ತನ್ನ ಅಭಿಪ್ರಾಯವನ್ನು ನಿಸ್ಸಂಕೋಚವಿಲ್ಲದಂತೆ ವಿವರಿಸಿ ಹೇಳಿದನು. “ಗುರುಗಳೇ! ನನ್ನ ತಂದೆಗೆ ಹಿಡಿದ ಹುಚ್ಚು ನಿಮಗೂ ಹಿಡಿದಂತಿದೆ ಘೋರವದ ಕರ್ಮ ಪಾಶದಲ್ಲಿ ಸಿಕ್ಕಿಕೊಂಡ ವಿಮುಕ್ತಿಯನ್ನು ಬೇಡಿದ ಮುಮುಕ್ಷುವರು ಶ್ರೀಮನ್ನಾ ನಾರಾಯಣ ಪಾದ ಪದ್ಮಗಳನ್ನು ಶರಣು ಬೇಡುತ್ತಿರಲು ಆತನನು ಅರ್ಚಿಸುವುದು ಸರಿಯಲ್ಲವೆಂದು ಹೇಳುವುದಕ್ಕೆ ನೀವ್ಯಾರು? ಈ ಸಮಸ್ತ ಜಗತ್ತು ಸೃಷ್ಟಿ ಸ್ಥಿತಿ ಲಯಗಳಿಗೆ ಆ ಪರಂಧಾಮನೇ ಮೂಲಕಾರಣ.ಅವ್ಯಕ್ತವಾದ ಪ್ರಕೃತಿಯನ್ನು,ಜೀವಾಖ್ಯ ಪುರುಷನನ್ನು ಮಹತ್ವವನ್ನು ಆತನ ಕಾಲರೂಪದಲ್ಲಿ ತಾನೇ ನಿಮಿಸುತ್ತಿದ್ದಾನೆ.ಆತನನ್ನು ಮನಸಾರೆ ಸೇವಿಸುತ್ತಾ ಅನೇಕರು ಧನ್ಯಜೀವಿಗಳಾಗಿದ್ದಾರೆ. ಪ್ರತಿನಿತ್ಯವೂ ದುರಿತ ಕೃತ್ಯಗಳಿಗೆ ಒಳಗಾಗಿ ಪಾಪಕರ್ಮರಾದ ರಾಕ್ಷಸರಿಗೆ ಪಾಠ ಪ್ರವಚನವನ್ನು ಬೋಧಿಸಿ ನಿಮ್ಮ ಬುದ್ಧಿಯು ಕ್ಷಿಣಿಸಿದೆ. ಸರ್ವಲೋಕಗಳಿಗೂ ನಾಯಕನಾದ ಜನಾರ್ಧನ ಸ್ವರೂಪ ಜ್ಞಾನವಿಲ್ಲದ ನಿಮ್ಮಂತಹ ವಿವೇಕಹೀನರ ಬಳಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುವುದು ತೃಣಕ್ಕೆ ಸಮಾನ. ನನಗೆ ಶ್ರೀಹರಿಯ ಪಾದಧ್ಯಾನವೇ ಸರ್ವಸ್ಟವಾದುದು” ಎಂದನು.ಪ್ರಹಲ್ಲಾದನ ಭಕ್ತಿ ತತ್ಪರತೆಯನ್ನು ವಿಮರ್ಶಿಸುವ ಶಕ್ತಿ ಇಯಿಲ್ಲದೇ ಅವನಿಗೆ ಪಾಠಗಳನ್ನು ಕಲಿಸಲಾಗದೇ ಅಸುರ ಗುರುಗಳ ಮರು ಮಾತನಾಡದೇ ಸುಮ್ಮನಾದನು.