ಮನೆ ಪೌರಾಣಿಕ ವೇನುವಿನ ಚರಿತ

ವೇನುವಿನ ಚರಿತ

0

ಅಂಗ ಮಹಾರಾಜನು ಮೃತ್ಯುವಿನ ಮಗಳಾದ ಸುನೀಥಳನ್ನು ವಿವಾಹವಾಗಿ ಚಿರಕಾಲ ಧರ್ಮ ಪಥದಲ್ಲಿ ಜನರಂಜಕವಾಗಿ ರಾಜ್ಯವನ್ನು ಪರಿ ಪಾಲಿಸಿ ತನ್ನ ವಂಶದ ಕೀರ್ತಿ ಪ್ರತಿಷ್ಠೆಗಳನ್ನು ಭೂಮಿಯ ಮೇಲೆ ಶಾಶ್ವತವಾಗಿರುವಂತೆ ಮಾಡಿದನು.

ಆ ದಂಪತಿಗಳಿಗೆ ವೇನುಎಂಬುವನು ಜನಿಸಿ, ಅವನು ಯುಕ್ತ ವಯಸ್ಸಿಗೆ ಬರುವಷ್ಟರಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಲೋಕಾನುಭವವನ್ನು ಗಳಿಸಿ ತಂದೆಗೆ ತಕ್ಕ ಮಗನೆಂದು ಕೀರ್ತಿಯನ್ನು ಪಡೆದೆನು. ತನ್ನ ಕೈಲಾಗುವಂತಹ ಲೌಕಿಕ ಜವಾಬ್ದಾರಿಗಳನ್ನು ನಿರ್ವಹಿಸಿ, ಅಂಗ ಮಹಾರಾಜನು ತನ್ನ ಮಗನಾದ ವೇನುವಿಗೆ  ಸಾಮ್ರಾಜ್ಯವನ್ನು ಕೊಟ್ಟು ಪಟ್ಟಾಭಿಷಕ್ತನನ್ನಾಗಿ ಮಾಡಿ ತಾನು ವಾನಪ್ರಸ್ಥವನ್ನು ಸ್ವೀಕರಿಸಿ ಸತೀ ಸಮೇತವಾಗಿ ಅರಣ್ಯಕ್ಕೆ ಹೋದನು  ವೇನುವಿಗೆ ರಾಜಾಧಿಕಾರಿಗಳು ಸಂಪ್ರಾಪ್ತಿಸುತ್ತಲೇ ಏಕ ಚಕ್ರಾಧಿಪತ್ಯವಾದಂತಹ ಅಧಿಕಾರಿಗಳು ಕೈಗೆ ಸಿಕ್ಕುತ್ತಲೆ ಗರ್ವವು ಹೆಚ್ಚಿತು ಐಶ್ವರ್ಯ ಮರದಿಂದ ಅವನು ಸ್ಥೃತಿ  ಶಾಸ್ತ್ರವಿಧಿಗಳನ್ನು ಕಾಲಲ್ಲಿ ಒದ್ದು ಇಷ್ಟ ರಾಜ್ಯವಾಗಿ ವರ್ತಿಸುವುದಕ್ಕೆ ಆರಂಭಿಸಿದರು.

 ನನ್ನ ತಂದೆ ತಾತಂದಿರು ಆದರಿಸಿ ದಾನ ಮಾಡಿದ ಅಗ್ರಹಾರಗಳನ್ನು ಕಿತ್ತುಕೊಂಡನು. ಅವರ ಮೇಲೆ ಅಪಾರವಾದ ಶುಲ್ಕಗಳನ್ನು ವಿಧಿಸಿ ಅನ್ಶಾಯಾರ್ಜಿತವಾದಂತಹ ಆ ದಿನವನ್ನು ಅಧರ್ಮ ಆಚರಣೆಗಳಿಗೆ ವಿನಿಯೋಗಿಸಿದನು. ವೇದ ವೇದಾಂತಗಳನ್ನು ಸ್ವಾನುಭವದೊಳಕ್ಕೆ ತೆಗೆದುಕೊಂಡು ಧರ್ಮ ಪರರಾದ ವಿದ್ವಾಂಸರು ಎಲ್ಲೆಲ್ಲಿದ್ದಾರೋ ಅವರನ್ನೆಲ್ಲಾ ಹುಡುಕಿ ಹಿಡಿದು ಅವರನ್ನು ದೇಶದಿಂದಲೇ ಹೊರಗೆಓಡಿಸಿದರು. ಎಳೆವಯಸ್ಸಿನಲ್ಲಿಯೇ ಮಹಾಋಷಿ ಗಳಿಗೂ ಸಹ ಸಾಧ್ಯವಾಗದ, ಆಶ್ಚರ್ಯಕರವಾದ ತಪಸನ್ನು ಮಾಡಿ ಸಾಕ್ಷಾತ್ತೂ ಶ್ರೀ ಮಹಾವಿಷ್ಣುವನ್ನು ಸಾಕ್ಷಾತ್ಕರಿಸಿಕೊಂಡು ಧನ್ಯನಾದ ಮಹಾಭಕ್ತನನೂ ಆದ ಧ್ರುವನವಂಶದಲ್ಲಿ ಜನಿಸಿದ್ದೇನೆಂಬ ಇಂಗಿತ ಜ್ಞಾನವೂ ಸಹ ಇಲ್ಲದೆ ವೇನು ವಿಷ್ಣು ಭಕ್ತರನ್ನು ಹಿಂಸಿಸಿ ಪಾಷಂಡ ವೃತ್ತಿಗಳು ವ್ಯಾಪಿಸುವಂತೆ ಮಾಡಿದನು. ಚೋರರೂ,ಆಚಾರಹೀನರು, ದುಷ್ಟ ಜನರನ್ನು  ಪ್ರೋತ್ಸಾಹಿಸಿ,ಅವರ ಕಪಟ ಪ್ರಶಂಸೆಗಳಿಗೆ ಹಿಗ್ಗಿ ಅಮಾಯಕರಾದ ಪ್ರಜೆಗಳನ್ನು ಹಿಂಸಿಸತೊಡಗಿದರು.