ಬೆಂಗಳೂರು: ನಗರದಲ್ಲಿ ಹಿಟ್ ಅಂಡ್ ರನ್ ಸರಣಿ ಅಪಘಾತ ಪ್ರಕರಣಗಳು ಮುಂದುವರೆದಿವೆ. ಜ್ಞಾನ ಭಾರತಿ, ಪೀಣ್ಯಾದಲ್ಲಿ ನಡೆದ ಭೀಕರ ಅಪಘಾತಗಳು ಮಾಸುವ ಮುನ್ನವೇ, ಇಂತದ್ದೇ ಮತ್ತೊಂದು ಘಟನೆ ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫೆ.11 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೆ.ಆರ್.ಪುರಂ ಬಳಿಯ ಟಿಸಿ ಪಾಳ್ಯದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಸುಮಾ ಹಾಗೂ ಚೇತನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಸುಮಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
Saval TV on YouTube