ಮನೆ ರಾಜ್ಯ ನೀರಿನ ಟ್ಯಾಂಕ್ ವಿಚಾರಕ್ಕೆ ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಹೊಳಲ್ಕೆರೆ ಪುರಸಭೆ ಸದಸ್ಯರು, ಬೆಂಬಲಿಗರು

ನೀರಿನ ಟ್ಯಾಂಕ್ ವಿಚಾರಕ್ಕೆ ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಹೊಳಲ್ಕೆರೆ ಪುರಸಭೆ ಸದಸ್ಯರು, ಬೆಂಬಲಿಗರು

0

ಚಿತ್ರದುರ್ಗ : ನೀರಿನ ಟ್ಯಾಂಕ್ ವಿಚಾರವಾಗಿ ಹೊಳಲ್ಕೆರೆ ಪುರಸಭೆ ಸದಸ್ಯರಾದ ಕೆ.ಸಿ ರಮೇಶ್ ಹಾಗೂ ಸುಧಾ ಬಸವರಾಜ್ ಬೆಂಬಲಿಗರು ಪರಪಸ್ಪರ ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.

ಹೊಳಲ್ಕೆರೆ ಪಟ್ಟಣದಲ್ಲಿ ಎರಡು ಗುಂಪುಗಳ ಮಧ್ಯೆ ಕೆಲ ದಿನಗಳ ಹಿಂದೆ ಘರ್ಷಣೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೃಹಮಂಡಳಿ ಲೇಔಟ್ ​ನಲ್ಲಿರುವ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ.

ಕೆ.ಸಿ.ರಮೇಶ ಅವರು ಹೊಳಲ್ಕೆರೆ ಮಾಜಿ ಶಾಸಕ ಹೆಚ್.ಆಂಜನೇಯ ಬೆಂಬಲಿಗರಾಗಿದ್ದು, ಬಿಜೆಪಿಯಿಂದ ಗೆದ್ದು ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಸಿದ್ದರು. ಸುಧಾ ಬಸವರಾಜ್ ಅವರು ಬಿಜೆಪಿ ಶಾಸಕ‌ ಎಂ.ಚಂದ್ರಪ್ಪ ಬೆಂಬಲಿತರಾಗಿದ್ದಾರೆ. ಸದ್ಯ ಹಾಲಿ, ಮಾಜಿ ಶಾಸಕರ‌ ಬೆಂಬಲಿಗರ ಮುಸುಕಿನ ಗುದ್ದಾಟ ತಾರಕಕ್ಕೇರಿದೆ.

ಹೊಳಲ್ಕೆರೆ ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಎದುರಲ್ಲೇ ಎರಡು ಗುಂಪಿನ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ‌ ದೂರು, ಪ್ರತಿದೂರು ದಾಖಲಾಗಿದೆ.

ಹಿಂದಿನ ಲೇಖನಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 30 ಪ್ಯೂನ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನCovid Update: 201 ಮಂದಿಗೆ ಸೋಂಕು, ಒಂದು ಸಾವು