ಮನೆ ಮನರಂಜನೆ ‘ಸಲಾರ್’ ಸಿನಿಮಾದ ರಿಲೀಸ್ ಡೇಟ್ ಮುಂದೂಡಿದ ಹೊಂಬಾಳೆ ಫಿಲ್ಮ್ಸ್

‘ಸಲಾರ್’ ಸಿನಿಮಾದ ರಿಲೀಸ್ ಡೇಟ್ ಮುಂದೂಡಿದ ಹೊಂಬಾಳೆ ಫಿಲ್ಮ್ಸ್

0

ಪ್ರಶಾಂತ್ ನೀಲ್ ಮುಂದಿನ ಸಿನಿಮಾ ‘ಸಲಾರ್’ ಬಗ್ಗೆ ಇನ್ನಿಲ್ಲದ ಕುತೂಹಲವಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

‘ಸಲಾರ್’ ಸಿನಿಮಾ ಸೆಪ್ಟೆಂಬರ್ 28ರಂದು ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿತ್ತು.  ಕೊನೆಗೂ ಇಂದು (ಸೆಪ್ಟೆಂಬರ್ 13) ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ‘ಸಲಾರ್’ ಸಿನಿಮಾದ ಬಿಡುಗಡೆಯನ್ನು ಮುಂದೂಡುತ್ತಿರುವುದಾಗಿ ಅನೌನ್ಸ್ ಮಾಡಿದೆ. ‘ಸಲಾರ್’ ಬಿಡುಗಡೆಯನ್ನು ಮುಂದೂಡಿರುವುದನ್ನು ತಿಳಿಸಿರುವ ಹೊಂಬಾಳೆ ಹೊಸ ಡೇಟ್ ಬಗ್ಗೆ ಸುಳಿವನ್ನೂ ನೀಡಿಲ್ಲ.

ಈ ವರ್ಷನಾದರೂ ‘ಸಲಾರ್’ ಸಿನಿಮಾ ರಿಲೀಸ್ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅನೌನ್ಸ್ ಮಾಡಿದ ದಿನದಂದೇ ಸಿನಿಮಾ ರಿಲೀಸ್ ಕೂಡ ಆಗಬಹುದು ಎಂದೇ ನಿರೀಕ್ಷೆಯಿತ್ತು. ಸೆಪ್ಟೆಂಬರ್ 28 ಹತ್ತಿರವಿದ್ದಾಗಲೂ ‘ಸಲಾರ್’ ಟೀಮ್ ಪ್ರಚಾರ ಮಾಡುವುದಕ್ಕೆ ಮುಂದಾಗಿರಲಿಲ್ಲ.

ಈಗ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ‘ಸಲಾರ್’ ರಿಲೀಸ್ ಮುಂದೂಡಿರುವ ಬಗ್ಗೆ ಅನೌನ್ಸ್ ಮಾಡಲಾಗಿದೆ. ಅಲ್ಲದೆ, “ನಿರಂತರವಾಗಿ ಸಲಾರ್ ಸಿನಿಮಾ ಬಗ್ಗೆ ನೀವು ನೀಡುತ್ತಿರುವ ಬೆಂಬಲಕ್ಕೆ ನಾವು ಚಿರಋಣಿಯಾಗಿದ್ದೇವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 28ರಂದು ರಿಲೀಸ್ ಡೇಟ್ ಅನ್ನು ಮುಂದೂಡಿದ್ದೇವೆ.” ಎಂದು ಹೇಳುವ ಮೂಲಕ ಸಿನಿಮಾ ಪ್ರೇಮಿಗಳಿಗೆ ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.

ಹಿಂದಿನ ಲೇಖನಜ್ಯೂವೆಲರಿ ಶಾಪ್‌ ದರೋಡೆ ಮಾಡಿದ್ದ ಆರೋಪಿಗಳ ಬಂಧನ: 35.86 ಲಕ್ಷ ಮೌಲ್ಯದ ವಸ್ತುಗಳು ವಶ
ಮುಂದಿನ ಲೇಖನಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಚುನಾವಣೆ ಪೂರ್ವದಲ್ಲಿಯೇ ಹೇಳಿದ್ದೆವು, ಈಗ ಅದು ಸಾಬೀತಾಗಿದೆ: ತನ್ವೀರ್ ಸೇಠ್