ಮನೆ ರಾಜಕೀಯ ರಾಜ್ಯಾದ್ಯಂತ ಎಲ್ಲ ಬಾಡಿಗೆದಾರರಿಗೂ ಗೃಹ ಬಳಕೆ ವಿದ್ಯುತ್​ ಉಚಿತ : ಸಿಎಂ ಸಿದ್ದರಾಮಯ್ಯ

ರಾಜ್ಯಾದ್ಯಂತ ಎಲ್ಲ ಬಾಡಿಗೆದಾರರಿಗೂ ಗೃಹ ಬಳಕೆ ವಿದ್ಯುತ್​ ಉಚಿತ : ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯಾದ್ಯಂತ ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್​ ನೀಡ್ತೇವೆ. 200 ಯೂನಿಟ್​ ಒಳಗೆ ವಿದ್ಯುತ್​​ ಉಪಯೋಗಿಸುವ ಎಲ್ಲರಿಗೂ ಉಚಿತವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Join Our Whatsapp Group

ನಿರ್ದಿಷ್ಟವಾಗಿ 200 ಯುನಿಟ್​​ ಉಚಿತ ವಿದ್ಯುತ್ ಎಂಬ ಗ್ಯಾರಂಟಿ ವಾಗ್ದಾನದ ಬಗ್ಗೆ ಅಪಸ್ವರ ಎದ್ದಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿಗಳು ಒಕ್ಕೊರಲಿಂದ ‘ಎಲ್ಲರಿಗೂ ಉಚಿತ ವಿದ್ಯುತ್​ ನೀಡ್ತೇವೆ’ ಎಂದು ಹೇಳುತ್ತಿದ್ದಾರೆ.

ಆದರೆ ಪ್ರಕ್ರಿಯೆ ಬಗ್ಗೆ ಗೊಂದಲಗಳು ಎದ್ದಿರುವುದು ಜನಕ್ಕೆ ಸಮಾಧಾನ ತಂದಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸೌಧದಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದು, ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್​ ಬಳಸುವವರಿಗೆ ಮಾತ್ರ ಈ ನಿಯಮ ಅನ್ವಯ ಆಗಲ್ಲ ಎಂದು ಪುನರುಚ್ಚರಿಸಿದ್ದಾರೆ.

ಹಿಂದಿನ ಲೇಖನಸಿಂಧೂರಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಜಾ ಕೋರಿ ಹೈಕೋರ್ಟ್ ಕದತಟ್ಟಿದ ರೂಪಾ
ಮುಂದಿನ ಲೇಖನಲಖನೌ: ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದು ತಾಯಿ-ಮಗಳು ಸಾವು