ಮನೆ ರಾಜಕೀಯ ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಗೃಹ ಸಚಿವರೇ ನೇರ ಹೊಣೆ: ಡಿ.ಕೆ.ಶಿವಕುಮಾರ್‌ ಆರೋಪ

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಗೃಹ ಸಚಿವರೇ ನೇರ ಹೊಣೆ: ಡಿ.ಕೆ.ಶಿವಕುಮಾರ್‌ ಆರೋಪ

0

ಚಿಕ್ಕಮಗಳೂರು (Chikkamagaluru)- ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ (PSI exam scam) ಗೃಹ ಸಚಿವರೇ (Home Minister) ನೇರ ಹೊಣೆಗಾರರು ಎಂದು ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ.ಶಿವಕಮಾರ್ (D.K.Shivakumar ) ಆರೋಪಿಸಿದ್ದಾರೆ.

ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಅಕ್ರಮವನ್ನು ಕಾಂಗ್ರೆಸ್ ಹೊರ ತಗೆದು ಜನರ ಗಮನಕ್ಕೆ ತಂದಿದೆ. ಕಾನೂನು ರೀತಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಮ್ಮ ನಾಯಕರು ಹೋರಾಟ ಮಾಡುತ್ತಿದ್ದಾರೆ. ಪಿಎಸ್‍ಐ ಅಕ್ರಮಕ್ಕೂ ಕಾಂಗ್ರೆಸ್‍ಗೂ ಏನು ಸಂಬಂಧ ? ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ. ಇದಕ್ಕೆ ನೇರ ಹೊಣೆಗಾರರು ಗೃಹ ಸಚಿವರೇ ಎಂದು ಆಪಾದಿಸಿದ್ದಾರೆ.

ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯ ಹಾಗೂ ಅವ್ಯವಹಾರಗಳು ಒಂದೊಂದಾಗಿ ಹೊರಬರುತ್ತಿವೆ. ನೇಮಕಾತಿಯಲ್ಲಿ ಈ ರೀತಿ ಅವ್ಯವಹಾರ ನಡೆಸಿರುವುದು ನಿಜಕ್ಕೂ ದುರದೃಷ್ಟ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಲ್ಲ ಕಡೆಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಕೆಲಸದಲ್ಲಿಯೂ ಇಷ್ಟು ಹಣ ಫಿಕ್ಸ್ ಎಂದು ಹಿಂದಿನ ಕಮಿಷನರ್ ಹೇಳಿದ್ದಾರೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.


ಇದೇ ವೇಳೆ ಹರಿಹರಪುರದ ಕುಂಭಾಭಿಷೇಕದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಕೆಶಿ ಅವರು ಶಾರದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಹರಿಹರಪುರ ಮಠದ ಸಚ್ಚಿದಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಹಿಂದಿನ ಲೇಖನಪ್ರಧಾನಿಯಿಂದ ಏ.27 ರಂದು ವಿಡಿಯೋ ಕಾನ್ಫರೆನ್ಸ್:‌ ಬಳಿಕ ಕೋವಿಡ್ ನಿರ್ವಹಣೆಗೆ ಮಾರ್ಗಸೂಚಿ ಪ್ರಕಟ; ಸಿಎಂ ಬೊಮ್ಮಾಯಿ
ಮುಂದಿನ ಲೇಖನಅಕ್ಷಯ ತೃತೀಯಕ್ಕೆ ಮುಸ್ಲಿಂರ ಅಂಗಡಿಯಿಂದ ಚಿನ್ನ ಖರೀದಿಸಬೇಡಿ: ಪ್ರಮೋದ್‌ ಮುತಾಲಿಕ್‌