• ಮಾವಿನಕಾಯಿ ಸಿಪ್ಪೆ ಚೆನ್ನಾಗಿ ಆಗಿದು ಉಗುಳುತ್ತಿದ್ದರೆ ವಸಿಡಿನಿಂದಾಗುವ ರಕ್ತಸ್ರಾವ ನಿಲ್ಲುವುದು ಮತ್ತು ಬಾಯಿಯ ದುರ್ಗಂಧ ನಿವಾರಣೆಯಾಗುವುದು
• ಒಂದು ಟೀ ಚಮಚದಷ್ಟು ಕೊತ್ತಂಬರಿ ಬೀಜಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗಿದು ಉಗುಳಿ, ಪುನರಾವರ್ತನೆ ಅತ್ಯಾವಶ್ಯಕ
• ಗೋರಂಟಿ ಗಿಡದಿಂದ ಚಿಗುರೆಲೆ ಕಿತ್ತು ತನ್ನಿ ಈ ಎಲೆಗಳನ್ನು ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ ಚೆನ್ನಾಗಿ ಆಗಿದ್ದು ರಸ ಉಗುಳುತ್ತೀರಿ. ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದು ಸುಲಭವಾದ ಮಾರ್ಗ
• ಅಡುಗೆ ಉಪ್ಪು ಬೆರೆಸಿದ ನೀರಿನಿಂದ ದಿನಕ್ಕೊಂದು ಬಾರಿ ಬಾಯಿ ಮುಕ್ಕಳಿಸುತ್ತಿದ್ದರೆ ವಸಡು ಗಟ್ಟಿಯಾಗುವುದು ಮತ್ತು ಬಾಯಿಯಿಂದ ಹೊರಹೊಮ್ಮುವ ದುರ್ಗಂಧ ನಿವಾರಣೆಯಾಗುವುದು
• ಲವಂಗವನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸುತ್ತಿದ್ದರೆ ಬಾಯಿಯಿಂದ ಹೊರಹೊಮ್ಮುವ ದುರ್ಗಂಧ ನಿವಾರಣೆಯಾಗುವುದು
• (ಸೂಚನೆ: ಧೂಮಪಾನದ ಚಟ ತಪ್ಪಬೇಕಾದರೆ ಧೂಮಪಾನ ಮಾಡಬೇಕೆನಿಸಿದಾಗ ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ)
• ಒಂದು ಬಟ್ಟಲು ನಿಂಬೆರಸದೊಂದಿಗೆ ಅದರ ಎರಡರಷ್ಟು ರೋಜ್ ವಾಟರ್ ಮಿಶ್ರಣ ಮಾಡಿ ಆ ಮಿಶ್ರಣದಿಂದ ಆಗಾಗ್ಗೆ ಬಾಯಿ ಮುಕ್ಕಳಿಸುತ್ತಿರಿ
ಗಂಟಲು ನೋವು ನಿವಾರಣೆಗೆ:
• ಮಾವಿನ ತೊಗಟೆಯ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುವುದು.
• ಮೆಣಸು ಮತ್ತು ಕೊತ್ತಂಬರಿ ಬೀಜದ ಕಷಾಯ ಸೇವಿಸುವುದರಿಂದ ಗಂಟಲು ನೋವು ಶಮನವಾಗುವುದು.
• ನಾಲ್ಕೈದು ಕರಿಮೆಣಸು ಚಿಟಿಕೆ ಓಂಕಳು ಮತ್ತು ಎರಡು ಹರಳು ಉಪ್ಪು ಬಾಯಿಗೆ ಹಾಕಿಕೊಂಡು ಅಗಿದು ಚಪ್ಪರಿಸಿ.
• ಒಂದು ಬಟ್ಟಲು ಬಿಸಿನೀರಿಗೆ ಒಂದು ಹೋಳು ನಿಂಬೆಹಣ್ಣಿನ ರಸ ಹಿಂಡಿ ನಂತರ ನಾಲ್ಕು ಟೀ ಚಮಚ ಜೇನುತುಪ್ಪ ಮತ್ತು ಎರಡು ಚಿಟಿಕೆ ಉಪ್ಪಿನ ಪುಡಿ ಹಾಕಿ ಚೆನ್ನಾಗಿ ಕಲಕಿ ಈ ಪಾನಕ ಸೇವಿಸಿದಲ್ಲಿ ಗಂಟಲು ನೋವು ಬಹುಬೇಗ ಶಮನವಾಗುವುದು.
• ಬಿಸಿ ನೀರಿನಲ್ಲಿ ಉಪ್ಪು ಕರಗಿಸಿ ಈ ನೀರನ್ನು ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ ಉಗುಳಿರಿ ನಾಲ್ಕಾರು ಬಾರಿ ಈ ಉಪಚಾರ ಮಾಡಿ.
• ಒಂದು ನಿಂಬೆ ಹಣ್ಣಿನ ರಸವನ್ನು ಅದರ ಎರಡರಷ್ಟು ಭಾಗ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ ಉಗುಳಿರಿ.
• ನಿಂಬೆ ಹಣ್ಣು ಪೂಯ್ದು ರಸ ಹಿಂಡಿ, ಆ ರಸವನ್ನು ಬಿಸಿ ಮಾಡಿ ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ಈ ಮಿಶ್ರಣವನ್ನು ಬೆಳಗಿನ ಉಪಹಾರಕ್ಕಿಂತ ಮುಂಚೆ ಸ್ವಲ್ಪ ಸ್ವಲ್ಪವಾಗಿ ಚೀಪಿರಿ.
• ಕರಿ ಮೆಣಸಿನ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರೆಸಿ, ಹೀಗೆ ಸಿದ್ಧಪಡಿಸಿದ ಒಂದು ಟೀ ಚಮಚ ರಸಾಯನವನ್ನು ದಿನಕ್ಕೆ ಮುರಾವರ್ತಿ ತೆಗೆದುಕೊಂಡು ಚಪ್ಪರಿಸಿ. ಗಂಟಲು ನೋವು ನಿವಾರಣೆಯಾಗುವುದು.
• ಚೆನ್ನಾಗಿ ಮಾಡಿದ ಅನಾನಸ್ ಹಣ್ಣಿನ ತಾಜಾರ ಸಾಚಿ ಕೂತಿದ್ದರೆ ಗಂಟಲು ನೋವು ಗಂಟಲು ಊತ ಗಂಟಲೆನಲ್ಲಾಗುವ ಬೊಕ್ಕೆಗಳು ನಿವಾರಣೆಯಾಗುವುವು.
ಬಾಯಿ ಹುಣ್ಣು ನಿವಾರಣೆಗೆ:
• ಮಾವಿನ ಚಿಗುರೆಲೆಗಳನ್ನು ಆಗಿದ್ದು ಉಗುಳುತ್ತಿದ್ದರೆ ಬಾಯಿ ಹುಣ್ಣು ಗುಣವಾಗುವುದು ಹಲ್ಲು ನೋವು ನಿವಾರಣೆಯಾಗುವುದು ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು
• ಚೆನ್ನಾಗಿ ಮಾಗಿದ ಟೊಮೆಟೊ ಹಣ್ಣು ಸೇವಿಸುವುದರಿಂದ ಬಾಯಿ ಹುಣ್ಣು ಗುಣವಾಗುವುದು
• ಹತ್ತಿಯ ಚಿಗುರಲೆಗಳಿಂದ ತಂಬುಳಿ ತಯಾರಿಸಿ ಮೂರರಿಂದ ನಾಲ್ಕು ದಿನ ಊಟ ಮಾಡುವುದರಿಂದ ಬಾಯಿ ಹುಣ್ಣು ಗುಣವಾಗುವುದು