ತುಳಸಿ ರಸವನ್ನು ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿ ಒಂದೆರಡು ದಿನಗಳ ಉಪಚಾರದ ನಂತರ ಗುಣ ಕಂಡುಬರುವುದು.
ಕಿವಿ ನೋವು ನಿವಾರಣೆಗೆ:
• ಕಿವಿಗೆ ಈರುಳ್ಳಿ ರಸ ಹಿಂಡುವುದರಿಂದ ನೋವು ಪರಿಹಾರವಾಗುವುದು.
• ಬೆಳ್ಳುಳ್ಳಿಯ ರಸದೊಂದಿಗೆ ಸ್ವಲ್ಪ ಸೈಂಧವ ಲವಣ ಮಿಶ್ರಮ ಮಾಡಿ ಐದಾರು ತೊಟ್ಟು ರಸವನ್ನು ಹನಿ ಹನಿಯಾಗಿ ಕಿವಿಗೆ ಬಿಡಿ ನೋವು ನಿವಾರಣೆಯಾಗುವುದು.
• ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಹಬೆ ಹೊರಡುತ್ತಿರುವಾಗ ಆ ಹಬೆಯನ್ನು ಆಲಿಕೆಯ ಸಹಾಯದಿಂದ ಕಿವಿಗೆ ಹಾಯಿಸಿ ನೋವು ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು.
• ಬೆಳ್ಳುಳ್ಳಿಯ ಬೀಜಗಳನ್ನು ಜಜ್ಜಿ ಒಂದು ಚಮಚ ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ನಾಲ್ಕೈದು ತುತ್ತು ಎಣ್ಣೆಯನ್ನು ಬಿಸಿಯ ಹದವರಿತು ಕಿವಿಗೆ ಬಿಡಿ ದಿನಕ್ಕೆ ಎರಡು ದಿನಗಳ ಕಾಲ ಚಿಕಿತ್ಸೆ ಮಾಡಿದಲ್ಲಿ ಶೀತದ ದೆಸೆಯಿಂದ ತಲೆದೋರುವ ಕಿವಿ ನೋವು ನಿವಾರಣೆಯಾಗುವುದು. ಯಾವುದೇ ಕೀಟ ಕಿವಿಯನ್ನು ಹೊಕ್ಕಾಗಲು ಈ ಚಿಕಿತ್ಸೆ ಮಾಡಬಹುದು.
• ಒಂದು ಟೀ ಚಮಚ ಕೊಬ್ಬರಿ ಎಣ್ಣೆಯಲ್ಲಿ ಎರಡು ಲವಂಗ ಬೇಯಿಸಿ ನಂತರ ಎಣ್ಣೆಯನ್ನು ತಣಿಸಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿ.
• ಅಪ್ಪಟ ಕೊಬ್ಬರಿ ಎಣ್ಣೆಯಲ್ಲಿ ಓಂ ಕಾಳನ್ನು ಬೇಯಿಸಿ ನಂತರ ಎಣ್ಣೆ ಬಸಿರಿ ಈ ಎಣ್ಣೆಯನ್ನು ಬಿಸಿಯಾದವರಿತು ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿ.
• ತಾಜಾ ಬೇವಿನ ಸೊಪ್ಪನ್ನು ಕುಟ್ಟಿ ಹಿಂದಿ ರಸಾ ತೆಗಿಯಿರಿ ಸ್ವಲ್ಪ ರಸವನ್ನು ಕಿರಿದಾದ ಬಾಯಿಯುಳ್ಳ ಪ್ಲಾಸ್ಕಿನಲ್ಲಿ ನಲ್ಲಿ ತೆಗೆದುಕೊಂಡು ಕುದಿಸಿ ಮುಗಿಯು ಕಿವಿಯೊಳಗೆ ಹೋಗುವಂತೆ ವ್ಯವಸ್ಥೆ ಮಾಡಿ ಈ ಪೋಟು ಮತ್ತು ನೋವು ನಿವಾರಣೆಗೆ ಇದು ಅತ್ಯುತ್ತಮ ಚಿಕಿತ್ಸೆ.
• ಎರಡು ಅಥವಾ ಮೂರು ಬೆಳ್ಳುಳ್ಳಿಯ ಬೀಜಗಳನ್ನು ಒಂದು ಚಮಚ ಎಳ್ಳೆಣ್ಣೆಯಲ್ಲಿ ಕೆಂಪಗೆ ಹುರಿಯಿರಿ ನಂತರ ಎಣ್ಣೆಯನ್ನು ತಣಿಸಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿ
• ಒಂದು ಹಿಡಿ ಬೇವಿನಸೊಪ್ಪನ್ನು ಕೆಂಡದ ಮೇಲೆ ಹಾಕಿ ಎಲೆಗಳು ಸುಟ್ಟು ಹೊಗೆ ಹೊರಡುವುದು ಅದೇ ಸಮಯಕ್ಕೆ ದೊಡ್ಡದೊಂದು ತಗಡಿನ ಆಲಿಕೆಯನ್ನು ಕೆಂಡದ ಮೇಲೆ ಬೋರಲಾಗಿತ್ತು ಹೊಗೆಯನ್ನು ಕಿರುನಾಳದ ಮೂಲಕ ಕಿವಿಗೆ ಹಾಯಿಸಿ ನೋವು ಶಾಂತ ವಾಗುವುದು ಮತ್ತು ಕಿವಿ ಪೋಟು ನಿಲ್ಲುವುದು.
ಕಿವಿಯಲ್ಲಿ ಕುರು ಎದ್ದಾಗ:
ಎರಡು ಅಥವಾ ಮೂರು ಲವಂಗಗಳನ್ನು ಒಂದು ಚಮಚ ಎಳ್ಳೆಣ್ಣೆಯಲ್ಲಿ ಗೋಳಿಸಿ, ಈ ಎಳ್ಳೆಣ್ಣೆಯನ್ನು ಉಗುರು ಬೆಚ್ಚಗಿರುವಾಗ ತುತ್ತು ತೊಟ್ಟಾಗಿ ಕಿವಿಗೆ ಬಿಡಿ. ದಿನಕ್ಕೆ ಎರಡಾವರ್ತಿಯಂತೆ ಎರಡು ದಿನಗಳ ಕಾಲ ಈ ಚಿಕಿತ್ಸೆ ಮಾಡಿ.
• ಒಂದು ಚಮಚ ಬೇವಿನ ಎಲೆಗಳ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಬಿಸಿಯ ಹದವರಿತು ಹಲವು ತೊಟ್ಟು ಮಿಶ್ರಣವನ್ನು ಕಿವಿಗೆ ಬಿಡಿ ಎರಡು ದಿನಗಳ ಕಾಲ ಈ ಚಿಕಿತ್ಸೆ ಮಾಡಿದಲ್ಲಿ ಗುಣ ಕಂಡು ಬರುವುದು
• ಸ್ವಲ್ಪ ಓಂ ಕಾಳನ್ನು ಒಂದು ಊಟದ ಚಮಚ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಬಿಸಿ ಆರಿದ ನಂತರ ಎಣ್ಣೆ ಬಸಿಯಿರಿ ಉಗುರು ಬೆಚ್ಚಗಿರುವ ಎಣ್ಣೆಯನ್ನು ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿ.
ಯಾವುದೇ ಕೀಟ ಕಿವಿಯ ಒಳಗೆ ಹೊಕ್ಕಾಗ:
• ಬೇವಿನ ಸೊಪ್ಪು ಕುಟ್ಟಿ ರಸ ತೆಗೆಯಿರಿ ಒಂದು ಟೀ ಚಮಚ ಅರಸಕ್ಕೆ ಒಂದು ಚಿಟಿಕೆ ಅಡಿಗೆ ಉಪ್ಪಿನ ಪುಡಿ ಸೇರಿಸಿ ಈ ರಸವನ್ನು ಬಿಸಿ ಮಾಡಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿಸುವುದು
• ಅಡಿಕೆ ಉಪ್ಪನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಉಗುರು ಬೆಚ್ಚಗೆ ಮಾಡಿ ಈ ದ್ರಾವಣವನ್ನು ಹನಿಹನಿಯಾಗಿ ಕಿವಿಗೆ ಬಿಡಿ
• ಸಾಸಿವೆ ಎಣ್ಣೆ ಏನಾಗಲಿ ಕೊಬ್ಬರಿ ಎಣ್ಣೆಯನ್ನಾಗಿ ಬಿಸಿ ಮಾಡಿ ತೊಟ್ಟು ತೊಟ್ಟಾಗಿ ಕಿವಿಗೆ ಬಿಡಿ
• ಮಸಿಪೂರಕದ (ಇಂಕ್ ಫಿಲ್ಲರ್) ಸಾಯದಿಂದ ಸ್ವಮೂತ್ರವನ್ನು ಹನಿಹನಿಯಾಗಿ ಕಿವಿಕೆ ಬಿಡಿ
ಕಿವುಡುತನಕ್ಕೆ ತಾತ್ಕಾಲಿಕ ಚಿಕಿತ್ಸೆ:
ಸುಮಾರು 25 ಗ್ರಾಂ ಅಪ್ಪಟ ಬಾದಾಮಿ ಎಣ್ಣೆಯಲ್ಲಿ ನಾಲ್ಕೈದು ಬೆಳ್ಳುಳ್ಳಿ ಬೀಜಗಳನ್ನು ಚೆನ್ನಾಗಿ ಗೋಳಿಸಿ ಕಾದ ಎಣ್ಣೆಯಲ್ಲಿ ಬೆಳ್ಳುಳ್ಳಿ ಸುಟ್ಟುಹೋದ ಬಳಿಕ ಎಣ್ಣೆಯನ್ನು ತಣಿಸಿ ಶೋಧಿಸಿ ಗಾಜಿನ ಬಾಟಲಿಗೆ ತುಂಬಿ ಇಡಿ ಈ ಎಣ್ಣೆಯನ್ನು ಪ್ರತಿದಿನ ಪರಿಸ್ಥಿತಿ ಸುಧಾರಿಸುವುದು ಚಿಕಿತ್ಸೆಯನ್ನು ದೀರ್ಘ ಕಾಲದವರೆಗೆ ಮುಂದುವರಿಸುವುದರಿಂದ ಹೆಚ್ಚು ಪ್ರಯೋಜನ ಉಂಟು.