ಮನೆ ಮನೆ ಮದ್ದು ಮೂಗಿನ ಸಮಸ್ಯೆಗೆ ಮನೆ ಮದ್ದು

ಮೂಗಿನ ಸಮಸ್ಯೆಗೆ ಮನೆ ಮದ್ದು

0

ಮೂಗಿನಿಂದ ರಕ್ತ ಸುರಿಯುವುದನ್ನು ತಡೆಗಟ್ಟಲು:
• ಎಮ್ಮೆ/ ಹಸುವಿನ ತಾಜಾ ಸಗಣಿಯನ್ನು ಆಗಾಗೆ ಮೂಸಿ ನೋಡುತ್ತಿದ್ದರೆ ರಕ್ತಸ್ರಾವ ನಿಲ್ಲುವುದು.
• ಜಜ್ಜಿದ ಈರುಳ್ಳಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ಮೂಸಿ ನೋಡುವುದರಿಂದ ರಕ್ತಸ್ರಾವ ನಿಲ್ಲುವುದು
• ತಣ್ಣೀರಿನಲ್ಲಿ ತೋಯಿಸಿದ ಬಟ್ಟೆಯನ್ನು ಮೂಗಿನ ಮೇಲಿಟ್ಟು ಅದರ ಮೇಲೆ ಕೊರೆಯುವ ತಣ್ಣೀರು ಐಸ್ ಕೋಲ್ಡ್ ವಾಟರ್ ಸುರಿಯುತ್ತಿರಿ
• ಮೂಗಿನ ಎರಡು ಹೊಳ್ಳೆಗಳಿಗೂ ಐದಾರು ತೊಟ್ಟು ಎದೆ ಹಾಲು ಬಿಡಿ, ಈ ಕ್ರಮವನ್ನು 2 ಅಥವಾ 3 ಬಾರಿ ಪುನರಾವರ್ತಿಸಿ
• ದಾಳಿಂಬೆ ಎಲೆಗಳ ರಸವನ್ನು ಹನಿ ಹನಿಯಾಗಿ ಮೂಗಿನ ಹೊಳ್ಳೆಗಳಿಗೆ ಬಿಡಿ
• ಒಂದು ಬಿಲ್ಲೆ ಕರ್ಪೂರವನ್ನು ಸ್ವಲ್ಪ ನೀರಿನಲ್ಲಿ ಚೆನ್ನಾಗಿ ಮಸಿಯಿರಿ 4- 5 ತೊಟ್ಟು ತಿಳಿಯಾದ ದ್ರಾವಣ ಮೂಗಿನ ಹೊಳ್ಳೆಗಳಿಗೆ ಬಿಡಿ
• ಬಲಿತ ನೆಲ್ಲಿಕಾಯಿಗಳನ್ನು ಜಜ್ಜಿ ರಸ ಹಿಂಡಿ ನಾಲ್ಕೈದು ತುಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡಿ
• ಕೆಲವು ತೊಟ್ಟು ನಿಂಬೆ ರಸವನ್ನು ಮೂಗಿನ ಪ್ರತಿ ಹೊಳ್ಳೆಗೂ ಬಿಡಿ
• ಬೇವಿನ ಎಲೆಗಳ ಅರಸವನ್ನು ಹನಿ ಹನಿಯಾಗಿ ಮೂಗಿನ ಹೊಳ್ಳೆಗಳಿಗೆ ಬಿಡಿ
• ಪ್ರತಿಯೊಂದು ಮೂಗಿನ ಹೊಳ್ಳೆಗೂ ನಾಲ್ಕೈದು ಹನಿ ಸ್ವಮೂತ್ರವನ್ನು ಆಗಲಿ ಹಸುವಿನ ಗಂಜಲವನ್ನಾಗಲಿ ಬಿಡಿ

ಅತಿಯಾಗಿ ಸೀನುತ್ತಿದ್ದರೆ:
ಆಗ ತಾನೇ ಕಿತ್ತು ತಂದ ಬೇವಿನ ಸೊಪ್ಪಿನಿಂದ ರಸ ಹಿಂಡಿ ನಾಲ್ಕೈದು ತೊಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡಿ ಅತಿಯಾದ ಸೀನುವಿಗೆ ನಿಲ್ಲುವುದು

ಮೂಗಿನಿಂದ ದುರ್ನಾಥ ಹೊರಹೊಮ್ಮುತ್ತಿದ್ದರೆ:
ಬೇವಿನ ಹಸಿರೆಲೆಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ತಯಾರಿಸಿ. ಈ ಚೂರ್ಣವನ್ನು ಎರಡು ಪದರಗಳುಳ್ಳ ಬಟ್ಟೆಯಲ್ಲಿ ಗಾಳಿಸಿ ಒಂದು ಗಾಜಿನ ಭರಣಿಯಲ್ಲಿ ತುಂಬಿರಿ ಇದನ್ನು ನಶ್ಯದಂತೆ ಬಳಸುತ್ತಿದ್ದರೆ ಮೂಗಿನಿಂದ ದುರ್ನಾಥ ಹೊರಹೊಮ್ಮುವಿಕೆ ನಿಂತು ಹೋಗುವುದು

ಮೂಗಿನ ಹೊಳ್ಳೆಯಲ್ಲಿ ಅನ್ಯ ಪದಾರ್ಥ ಸೇರಿದಾಗ:
ಹೊಗೆ ಸೊಪ್ಪಿನ ನಶ್ಯವನ್ನು ಮೂಗಿಗೆ ಏರಿಸಿ ಪಟಪಟನೆ ಸೀನು ಬರುವುದು ಆಗ ಮೂಗಿನ ಹೊಳ್ಳೆಯಲ್ಲಿ ಸೇರಿಕೊಂಡಿರುವ ಪದಾರ್ಥ (ಉದಾಹರಣೆಗೆ ಕಡಲೆಕಾಳು ಮಣಿ ಬಳಪ ಇತ್ಯಾದಿ)
ಹೊರಕ್ಕೆ ಚಿಮ್ಮುವುದು ಈ ವಿಧಾನ ಫಲಿಸದಿದ್ದರೆ ಕೂಡಲೇ ವೈದ್ಯರ ನೆರವು ಪಡೆಯಿರಿ

ಸಿಂಬಳ ಅತಿಯಾಗಿ ಸುರಿಯುತ್ತಿದ್ದರೆ:
• ಒಂದು ಬಟ್ಟಲು ಸಿಹಿ ಮೊಸರಿಗೆ ಬೆಲ್ಲ ಸೇರಿಸಿ ದಿನವಹಿ ಒಂದು ಬಟ್ಟಲು ಸೇವಿಸುತ್ತಿದ್ದಲ್ಲಿ ನಾಲ್ಕರಿಂದ ಐದು ದಿನಗಳಲ್ಲಿ ಗುಣ ಕಂಡುಬರುವುದು
• ಒಣಶುಂಟಿಯ ಕಷಾಯ ತಯಾರಿಸಿ ಒಂದು ಟೀ ಚಮಚ ಕಷಾಯ ಸೇವಿಸಿ ಬೆಚ್ಚಗೆ ಹೊದ್ದು ವಿರಮಿಸಿ. ನೆಗಡಿ ಸಹಿತವಾದ ಕೆಮ್ಮಿನಿಂದ ನರಳುತ್ತಿದ್ದಾಗ ಈ ಚಿಕಿತ್ಸೆಯಿಂದ ಆರಾಮಾಗುವುದು ದಿನಕ್ಕೆರಡು ಬಾರಿಯಂತೆ ಎರಡು ದಿನ ಈ ಕಷಾಯ ಸೇವಿಸಿದಲ್ಲಿ ಸಿಂಬಳ ಸೋರುವಿಕೆಯಲ್ಲಿ ಗಮನಾರ್ಹ ಸುಧಾಹರಣೆ ಕಂಡುಬರುವುದು

ನೆಗಡಿಯಿಂದ ಮೂಗು ಕಟ್ಟಿಕೊಂಡಿದ್ದರೆ:
ಕೆಂಡದ ಮೇಲೆ ಸ್ವಲ್ಪ ಅರಿಶಿನದ ಪುಡಿ ಉದುರಿಸಿ ಹೊಗೆಯನ್ನು ಮೂಗಿನ ಮೂಲಕ ಎಳೆದುಕೊಳ್ಳಿ ಈ ರೀತಿಯಾಗಿ ನಾಲ್ಕೈದು ಬಾರಿ ಮಾಡಿದಲ್ಲಿ ಸರಾಗವಾಗಿ ಉಸಿರಾಡಲು ಸಾಧ್ಯವಾಗುವುದು (ಕಾದ ಇಟ್ಟಿಗೆ ಸೂರಿಗೆ ಅಮೃತಂಜನ ಹಚ್ಚಿ ವಾಸನೆ ತೆಗೆದುಕೊಂಡರು ಉಸಿರಾಟ ಸುಧಾರಿಸುವುದು)

ಹಿಂದಿನ ಲೇಖನಶ್ರೀ ಹರೀ ಶ್ರೀ ಹರೀ…. ಶ್ರೀ ಹರಿ….|
ಮುಂದಿನ ಲೇಖನನಾಗರಿಕರಿಗೆ “ದಿನಚರಿ”