• ಗರಿಕೆ ಹುಲಿನ ರಸವನ್ನು ಅಷ್ಟೇ ಪ್ರಮಾಣ ಅಪ್ಪಟ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿ, ಈ ಕ್ರಮ ಅನುಸರಿಸುವುದರಿಂದ ಕೂದಲು ಉದುರುವಿಕೆ, ತಲೆಯಲ್ಲಿ ಹೊಟ್ಟು ಏಳುವುದು ಹಾಗೂ ಕಣ್ಣುರಿ ನಿಲ್ಲುವುದು.
• ಕೆಸವಿನ ಗೆಡ್ಡೆಯನ್ನು ನುಣ್ಣಗೆ ಅರೆದು ಕೂದಲು ಬಿಡಕ್ಕೆ ಹಚ್ಚಿದಲ್ಲಿ ಕೂದಲು ಉದುರುವುದು ನಿಲ್ಲುವುದು.
• ಮೆಂತ್ಯವನ್ನು ತೆಂಗಿನ ಹಾಲಿನೊಂದಿಗೆ ಅರೆಯಿರಿ. ಈ ಸರಿಯನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ ಅರ್ಧ ಗಂಟೆಯ ನಂತರ ತಲೆ ತೊಳೆಯಿರಿ.
• ಬೇವಿನ ಸೊಪ್ಪಿನ ಕಷಾಯದಿಂದ ತಲೆತೊಳೆಯಿರಿ ಆಗಾಗ್ಗೆ ಈ ಕ್ರಮ ಅನುಸರಿಸುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು ಮತ್ತು ದೀರ್ಘಕಾಲದವರೆಗೆ ಕೂದಲು ನೆರೆಯುವುದಿಲ್ಲ.
• ಕೂದಲಿನ ಬುಡಕ್ಕೆ ನಿಂಬೆರಸ ಹಚ್ಚಿ ಚೆನ್ನಾಗಿ ತಿಕ್ಕಿ ಅರ್ಧ ಗಂಟೆ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
ತಲೆಯಲ್ಲಿ ಹೊಟ್ಟು ಹೇಳುವುದು ತಡೆಗಟ್ಟಲು:
• ರಾತ್ರಿ ಮಲಗುವುದಕ್ಕೆ ಮುಂಚೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ತಲೆ ಬುರುಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ. ಮರುದಿನ ಬೆಳಿಗ್ಗೆ ಸೀಗೆಪುಡಿ ಉಪಯೋಗಿಸಿ ತಲೆಗೆ ಸ್ನಾನ ಮಾಡಿ ವಾರಕ್ಕೆ ಎರಡು ಬಾರಿ ಕ್ರಮ ಅನುಸರಿಸುತ್ತಿದ್ದರೆ ಹೊಟ್ಟು ಏಳುವುದು ನಿಲ್ಲುವುದು ಮತ್ತು ಕೂದಲು ತಲೆ ಕೂದಲು ಉದುರುವುದಿಲ್ಲ.
• ಕೆನೆ ತೆಗೆಯದ ಹಾಲಿನಿಂದ ಮೊಸರು ತಯಾರಿಸಿ, ಈ ಮೊಸರನ್ನು ಮೂರು ದಿನಗಳ ಕಾಲ ಗಾಳಿಗೆ ತೆರೆದಿಡಿ. ನಂತರ ಹುಳಿ ಹಿಡಿದ ಮೊಸರನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಕಾಲ ಚೆನ್ನಾಗಿ ತಿಕ್ಕಿ ಆ ಬಳಿಕ ಸ್ನಾನ ಮಾಡಿ ಶೈತ್ಯೋಪಚಾರದಿಂದ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು ಮತ್ತು ತಲೆಯಲ್ಲಿ ಹೊಟ್ಟು ಏಳುವುದಿಲ್ಲ.
• ಗೋರಂಟಿ ಸೊಪ್ಪಿನ ಪುಡಿಯನ್ನು ಕೋಳಿ ಮೊಟ್ಟೆಯ ಹಳದಿ ಭಾಗದೊಂದಿಗೆ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ರಾತ್ರಿ ಕಾಲದಲ್ಲಿ ತಲೆ ಬುರುಡೆಗೆ ಹಚ್ಚಿ ಮೃದುವಾಗಿ ತಿಕ್ಕಿ. ಮಾರನೆಯ ದಿನ ಬೆಳಿಗ್ಗೆ ಬಿಸಿ ನೀರಿನಿಂದ ತಲೆ ತೊಳೆಯಿರಿ. ತಲೆಯಲ್ಲಿ ಹೊಟ್ಟು ಏಳುವುದನ್ನು ತಡೆಗಟ್ಟಲು ಇದು ಸಹಕಾರಿ.
• ಪ್ರತಿದಿನವೂ ತಲೆಗೆ ತಣ್ಣೀರಿನ ತುಂತುರು ಸ್ನಾನ ಮಾಡಿ.
• ಒಂದು ಬಕೆಟ್ ನೀರಿಗೆ ಒಂದು ಹಿಡಿ ಅಡುಗೆ ಉಪ್ಪು ಹಾಕಿ ಕರಗಿಸಿ ಆ ನೀರಿನಿಂದ ತಲೆ ಮತ್ತು ಕೂದಲು ತೊಳೆಯಿರಿ.
• ಕೂದಲಿನ ಬುಡಕ್ಕೆ ನುಣ್ಣಗೆ ಅರೆದ ಮೆಂತ್ಯದ ಸರಿಯನ್ನು ಲೇಪಿಸಿ ಚೆನ್ನಾಗಿ ಉಜ್ಜಿ ತಲೆ
ಬೋಳಗುವುದನ್ನು ತಡೆಗಟ್ಟಲು:
• ಒಂದು ಹಿಡಿ ತಾಜಾ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಕುಟ್ಟಿ ರಸ ತೆಗೆಯಿರಿ. ಈ ರಸವನ್ನು ಬೋಳು ತಲೆಗೆ ಹಚ್ಚಿ ಮೃದುವಾಗಿ ತಿಕ್ಕಿ. ಪ್ರತಿದಿನವೂ ತಾಜಾ ರಸವನ್ನೇ ತಲೆಗೆ ತಿಕ್ಕುತ್ತಿದ್ದರೆ ಕೂದಲು ಬೆಳೆಯುವ ಸಾಧ್ಯತೆ ಹೆಚ್ಚು ಉತ್ತಮ ಫಲಿತಾಂಶಕ್ಕೆ ದೀರ್ಘಕಾಲದ ಚಿಕಿತ್ಸೆ ಅಗತ್ಯ.
ಕೂದಲಿನ ಬೆಳವಣಿಗೆಗೆ:
• ನಿಂಬೆಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ರಾತ್ರಿ ಮಲಗುವಾಗ ಈ ಮಿಶ್ರತೈಲವನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ, ದಿನ ಕ್ರಮೇಣ ಕೂದಲು ಕಪ್ಪಾಗಿಯೂ ಕಾಂತಿಯುತವಾಗಿಯೂ ಬಳಿಯ ತೊಡಗುವುದು.
• ಎಳ್ಳಣ್ಣೆಯನ್ನು ತಲೆಗೆ ತಿಕ್ಕಿ ಅರ್ಧ ಗಂಟೆಯಾ ತರುವಾಯ ಸ್ನಾನ ಮಾಡಿ. ಪ್ರತಿದಿನವೂ ಈ ಕ್ರಮ ಅನುಸರಿಸಿದಲ್ಲಿ ಕೂದಲು ಕಪ್ಪಾಗಿಯೂ ನೀಳವಾಗಿಯೂ ಬೆಳೆಯ ತೊಡಗುವುದು.
ಬಾಲನರೆ ನಿವಾರಣೆಗೆ:
• ಬಾಳೆದಿಂಡನ್ನು ಸಣ್ಣಗೆ ಹೆಚ್ಚಿ ಕೊಬ್ಬರಿ ಎಣ್ಣೆಯಲ್ಲಿ ನೆನೆ ಹಾಕಿ. ಎರಡು ದಿನಗಳ ನಂತರ ಎಣ್ಣೆಯನ್ನು ಬಸಿದು ಒಂದು
ಸಿಹಿಯಲ್ಲಿ ತುಂಬಿಡಿ ಪ್ರತಿದಿನವೂ ಕೂದಲಿನ ಬುಡಕ್ಕೆ ಈ ಎಣ್ಣೆ ಹಚ್ಚಿ ಚೆನ್ನಾಗಿ ತಿಕ್ಕಿ ತಲೆ ಬಾಚಿಕೊಳ್ಳಿ.
ತಲೆಗೆ ಬೀಳುವ ಹೇನುಗಳ ನಿವಾರಣೆಗೆ:
• ಸೀಬೆ ಮರದ ಎಲೆಗಳನ್ನು ಅರಿಶಿಣದ ಪುಡಿಯೊಂದಿಗೆ ನುಣ್ಣಗೆ ಅರಿಯರಿ. ಈ ಸರಿಯನ್ನು ರಾತ್ರಿ ತಲೆಗೆ ಹಚ್ಚಿ ಮಲಗಿ ನಿದ್ರಿಸಿ ಮರುದಿನ ಬೆಳಿಗ್ಗೆ ಡೆಟಾಲ್ ಬೆರೆಸಿದ ನೀರಿನಿಂದ ತಲೆಕೂದಲು ತೊಳೀರಿ.
• ಬೇವಿನ ಬೀಜಗಳನ್ನು ನೀರಿನಲ್ಲಿ ನುಣ್ಣಗೆ ಅರೇಯಿರಿ. ಈ ಸರಿಯನ್ನು ಕೂದಲಿಗೆ ಹಚ್ಚಿ ಆರೇಳು ಗಂಟೆಗಳ ತರುವಾಯ ಬೇವಿನ ಸೊಪ್ಪಿನ ಕಷಾಯದಿಂದ ತಲೆತೊಳೆಯಿರಿ. ಈ ಚಿಕಿತ್ಸೆಯನ್ನು ಒಂದು ವಾರದ ನಂತರ ಪುನರಾವರ್ತಿಸಿ.
• ಬೆಳ್ಳುಳ್ಳಿಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆಯಿರಿ ಈ ಸರಿಯನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ತಿಕ್ಕಿ.
• ಬೇವಿನ ಸೊಪ್ಪಿನ ಕಷಾಯದಿಂದ ದಿನಕ್ಕೆರಡು ಬಾರಿ ತಲೆ ಕೂದಲನ್ನು ತೊಳೆಯಿರಿ. ಮೂರು ದಿನಗಳ ಕಾಲ ತಪ್ಪದೆ ಈ ಕ್ರಮ ಅನುಸರಿಸಿ ಆನಂತರ ಒಂದು ವಾರದ ಬಳಿಕ ಚಿಕಿತ್ಸೆಯನ್ನು ಪುನರಾವರ್ತಿಸಿ.