ಮೂಗು ಬೆದರಿದೆ ಎಂದು ಜನ ಹೇಳುತ್ತಾರೆ ಆಗ ರೋಗಿಯನ್ನು ಮಲಗಿಸಿ, ತಲೆ ತಗ್ಗಾದ ಭಾಗದಲ್ಲಿರಿಸಿ ಮೂಗು ಎತ್ತರದಲ್ಲಿರುವಂತೆ ಮಾಡಿ ಮಂಜುಗಡ್ಡೆಯನ್ನು ಇಡಬೇಕು, ನಿಂಬೇರಸವನ್ನಾಗಲೀ, ಬೇವಿನ ಎಲೆಯ ರಸವನ್ನಾಗಲಿ ಮೂವಿಗೆ ತೊಟ್ಟು ತೊಟ್ಟಾಗಿ ಹಾಕಬೇಕು.
1. ಬಿಳಿ ಉತ್ತರಣಿ ಸೊಪ್ಪಿನ ರಸ ತೆಗೆದು ಹಾಲಿನಲ್ಲಿ ಹಾಕಿ ಕುಡಿಸಬೇಕು.
2. ಗರಿಕೆ ಶೇಖರಿಸಿ ಅದನ್ನು ಕುಟ್ಟಿ ರಸ ತೆಗೆದು ಸಕ್ಕರೆ ಬೆರೆಸಿ ಕೊಡಿಸಿ ಮಜ್ಜಿಗೆ ಅನ್ನ ಪಥ್ಯದಿಂದ ಮೂಗಿನಲ್ಲಿ ರಕ್ತ ಸೋರುವುದು ನಿಂತು ಹೋಗುವುದು.
3. ಕರಿ ಹತ್ತಿ ಸೊಪ್ಪಿನ ರಸವನ್ನು ನೆತ್ತಿಗೆ ಒತ್ತುತ್ತಿದ್ದರೆ, ಮೂಗಿನಲ್ಲಿ ರಕ್ತ ಸೋರುವುದು.
4. ಇರುಳ್ಳಿ ಸಣ್ಣ ಚೂರುಗಳಾಗಿ ಕತ್ತರಿಸಿ ಒತ್ತಡ ಹೊಟ್ಟು ಮಿಶ್ರ ಮಾಡಿ ಹಿಂಡಿದರೆ ರಸ ಬರುತ್ತದೆ.ಅದನ್ನು ಮೂಗಿಗೆ ತೊಟ್ಟು ತೊಟ್ಟಾಗಿ ಬಿಡುವುದರಿಂದ ರಕ್ತ ಸೋರುವುದು ನಿಂತು ಹೋಗುತ್ತದೆ.