ಮನೆ ಮನೆ ಮದ್ದು ಮನೆ ಮದ್ದು

ಮನೆ ಮದ್ದು

0

1. ಕೀಲುಗಳಲ್ಲಿ ನೋವು,ಉರಿ ಅಂಗೈ ಉರಿ,ಅಂಗಾಲು ಉರಿಗಳಿದ್ದಾಗ ಸೋರೆಕಾಯಿಯನ್ನು ತಂದು, ತುರಿದು, ಅದನ್ನು ಹಿಂಡಿ ರಸವನ್ನು ಶರೀರಕ್ಕೆಲ್ಲಾ ಲೇಪಿಸುತ್ತಾ ಬಂದರೆ ಮೇಲ್ಕಂಡ ದೋಷ ನಿವಾರಣೆ ಆಗುವುದು.

Join Our Whatsapp Group

2. ಹರಳೆಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಅಡಿಯಿಂದ ಮುಡಿಯವರೆಗೂ ಮಸಾಜು ಮಾಡುತ್ತಾ ಒಂದು ಗಂಟೆ ಆದಮೇಲೆ ಹೀಗೆ ಪುಡಿ ಸಿಗೇ ಪುಡಿ, ಚಿಗರೆ ಪುಡಿ  ಸೇರಿಸಿ ಸ್ನಾನ ಮಾಡುವುದರಿಂದ ನೋವು ಉರಿ, ಚರ್ಮ ಬಿರಿಯುವುದು ನಿವಾರಣೆ ಆಗುತ್ತದೆ.

3. ಮೆಂತ್ಯದ ಸೊಪ್ಪನ್ನು ಶೇಖರಿಸಿ ಅದಕ್ಕೆ ತೆಂಗಿನಕಾಯಿ ಮಿಶ್ರಣ ಮಾಡಿ, ರುಬ್ಬಿ,ಮೈ,ಕೈ,ಆದಿಯಾಗಿ ಶರೀರಾದ್ಯಂತ ಹಚ್ಚಿಕೊಂಡು ಒಂದು ವೇಳೆ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ನೋವು ಉರಿ ನಿವಾರಣೆ ಆಗುವುದು.

4. ಒಂದು ಟಬ್ ನಲ್ಲಿ ಬಿಸಿ ನೀರನ್ನು ತುಂಬಿ ಒಂದು ಗಂಟೆ ಸತತವಾಗಿ ಅದರಲ್ಲಿ ಕೂತು ಅನಂತರ ಬಿಸಿ ನೀರು ಸ್ಥಾನ ಮಾಡಿ ಹಾಸಿಗೆಯ ಮೇಲೆ ಮಲಗಿ ಎರಡು ರಗ್ಗು, ಕಂಬಳಿ ಹೊದಿಸಿದರೆ ಮೈಯಲ್ಲಿ ಬೆವರು ಉಕ್ಕಿ ಹರಿದು, ಶರೀರ ಹಗುರವಾಗಿ,ಉರಿ,ನೋವು ಕಡಿಮೆಯಾಗುವುದು.

5. ಸಂಧಿವಾತದಿಂದ ಊತ ನೋವು ಆದಾಗ ಬೆಲ್ಲಕ್ಕೆ ಸ್ವಲ್ಪ ಸುಣ್ಣ ಸೇರಿಸಿ ಪೇಸ್ಟಿನಂತೆ ನೋವಿರುವ ಚಂದುಗಳಿಗೆ ಬಳಿದು ಹಾಗೆ ಬಿಟ್ಟು ಮಾರನೇ ದಿನ ತೊಳೆಯುವುದರಿಂದ ನೋವು, ಉರಿ, ನಿವಾರಣೆ ಆಗುತ್ತದೆ

6. ಮೆಂತ್ಯವನ್ನು ನುಣ್ಣಗೆ ಅರೆದು, ಅಂಗೈ,,ಅಂಗಾಲು,  ಶರೀರಾದ್ಯಂತ ಚೆನ್ನಾಗಿ ಮಸಾಜು ಮಾಡಿ, ಒಂದು ಗಂಟೆ ಹಾಗೆ ಬಿಟ್ಟು ಸ್ನಾನ ಮಾಡಿ ಹಾಲು ಅನ್ನ ಸೇವಿಸಿದರೆ ನೋವು ಉರಿ ಗುಣವಾಗುವುದು.

7. ಹೆಸರು ಕಾಳಿನ ಪಾಯಸ ಮಾಡಿ ಸೇವಿಸಿದರೆ ನೋವು, ಉರಿ ಶಮನವಾಗುವುದು.

8. ಗಸಗಸೆಯನ್ನು ನೆನೆಹಾಕಿ, ಚೆನ್ನಾಗಿ ರುಬ್ಬಿ ತೆಂಗಿನಕಾಯಿ ಹಾಲು,ಏಲಕ್ಕಿ ಸೇರಿಸಿ ಬೆಲ್ಲ ಮಿಶ್ರಣ ಮಾಡಿ ಪಾಯಸ ಮಾಡಿ ಕುಡಿದು, ಮಲಗಿದರೆ ಏಳುವಾಗ ನೋವು ಉರಿ,ಬಿರಿಯುವುದು ನಿವಾರಣೆ ಆಗುತ್ತದೆ.

9. ಹರಳೆಲೆಗಳನ್ನು ಬಿಸಿಲು ಕಾಲದಲ್ಲಿ ತಲೆ ಉರಿ ಇದ್ದಾಗ ತಲೆಗೆ ಸುತ್ತಲೂ ಹರಳೆಲೆಗಳನ್ನು ಜೋಡಿಸಿ ಅದರ ಮೇಲೆ ಬಟ್ಟೆ ಕಟ್ಟಿಕೊಂಡು ಮಲಗಿದರೆ ಏಳುವ ಹೊತ್ತಿಗೆ ಉರಿ ಕಡಿಮೆಯಾಗುತ್ತದೆ ಅರಳ ಎಲೆಗೆ ಇಲ್ಲೇದೆಲೆ ಹರಳೆಲೆಗೆ ವೀಳ್ಯದೆಲೆಗೆ,ಹರಳೆಣ್ಣೆ   ಸವರಿ ಬೆಂಕಿಯ ಮೇಲಿಟ್ಟು, ಆ ಶಾಖವನ್ನು ಮಗೈ, ಸಂದುಗಳಿಗೆ ನೋವಿರುವ ಕಡೆ ಶಾಖ ಕೊಟ್ಟರೆ ಗುಣವಾಗುತ್ತದೆ.

10. ನಿಂಬೆ ಹಣ್ಣಿನ ರಸವನ್ನು ತಲೆಗೆ ತಿಕ್ಕಿ ಮುಖ ಕೈ,ಕಾಲುಗಳಿಗೆ ಲೇಪಿಸುತ್ತಾ ಇದ್ದು, ಆನಂತರ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ನೋವು ಇರುವುದಿಲ್ಲ.ಚರ್ಮ ಬಿರಿಯುವುದು ಗುಣವಾಗುವುದು.