ದುರ್ಬಲವಾದ ಜೀವನ ಶಕ್ತಿಯನ್ನು ಪ್ರಬಲಗೊಳಿಸುವ ಮೂಲಿಕೆ ಇದು ಜೀರ್ಣಾಂಗವ್ಯೂಹದಲ್ಲಿ ಇರಬಹುದಾದ ನಂಜನ್ನು ಹೊರ ಹಾಕುತ್ತದೆ ನಮ್ಮ ಆಹಾರದಲ್ಲಿರುವ ಕೊಬ್ಬು ಮತ್ತು ಸಕ್ಕರೆ ಜೀರ್ಣಕ್ರಿಯೆಗೆ ನೆರವು ನೀಡುತ್ತದೆ ಊತ ನಿವಾರಕ ಗುಣವಿದೆ.
ದಶಮೂಲ ಚೂರ್ಣ : 10 ಪ್ರಮುಖ ಔಷಧೀಯ ಸಸ್ಯಗಳ ಬೇರುಗಳ ಚೂರ್ಣವಿದು ಅನೇಕ ಆಯುರ್ವೇದದ ಮದ್ದುಗಳ ತಯಾರಿಕೆಗೆ ಈ ಚೂರ್ಣವು ಬೇಕಾಗುತ್ತದೆ ದಶಮೂಲದಲ್ಲಿ 5 ಮರಗಳ ಬೇರುಗಳು ಮತ್ತು 5 ಚಿಕ್ಕ ಪೊರೆ ಗಿಡಗಳ ಬೇರು ಸೇರಿದೆ
ಈ ಬೇರುಗಳ ಔಷಧಿ ಗುಣಗಳು ಇಂದು ಸಂಗಮಗೊಂಡು ಅತ್ಯುತ್ತಮ ಫಲಿತಾಂಶ ನೀಡುತ್ತದೆ. ಸ್ತ್ರೀದೋಷದ ಸಮಸ್ಥಿತಿಗೆ ಸಹಾಯಕ ಭೂತನಿವಾರಕ, ನೋವುನಿವಾರಕ ಗುಣವಿರುವುದರಿಂದ ಸಂದಿ ವಾತ ಮತ್ತು ಸ್ನಾಯುಗಳು ನೋವು ನಿವಾರಿಸುತ್ತದೆ. ಮಂಡಿ ನೋವಿರುವವರಿಗೆ ಒಳ್ಳೆಯದು ತೊಂದರೆ ಉಸಿರಾಟದ ತೊಂದರೆ, ನರಮಂಡಲದ ತೊಂದರೆಗಳನ್ನು ನಿವಾರಿಸುತ್ತದೆ.
ಪುನರ್ಪುಳಿ ಚೂರ್ಣ : ಬೊಜ್ಜು ನಿವಾರಣೆಗೆ ಬಹಳ ಉಪಯುಕ್ತ ನಾವು ಸೇವಿಸಿದ ಆಹಾರದಲ್ಲಿರುವ ಸಕ್ಕರೆ ಮತ್ತು ಪುಷ್ಟವೂ ಸಕ್ಕರೆಯಾಗಿ ಪರಿವರ್ತನೆ ಹೊಂದುವುದನ್ನು ತಡೆಯುತ್ತದೆ. ದೇಹದ ಕೊಬ್ಬಿನ ಸಂಗ್ರಹವಾಗುವುದನ್ನು ನಿಲ್ಲಿಸುತ್ತದೆ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಬಯಸುವವರಿಗೆ ಒಳ್ಳೆಯದು ರಕ್ತದಲ್ಲಿ ಆಮ್ಲೀಯತೆ ಮತ್ತು ಕ್ಷಾರದ ಸಮತೆಯನ್ನು ನೋಡಿಕೊಳ್ಳುತ್ತದೆ.
ಗೋಕ್ಷೂರ ಚೂರ್ಣ : ಮೂತ್ರ ಜನಕಾಂಗದ ಸಮಸ್ಯೆಗಳಿಗೆ ಉಪಯುಕ್ತವಾಗಿದೆ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ ಉಪಯುಕ್ತ ಆಹಾರದ, ಜೀರ್ಣಕ್ರಿಯೆಗೆ ಸಹಾಯಕಾರಿಯ. ಊತನಿವಾರಕ ಗುಣವಿದೆ. ಮೂತ್ರಾಂಗವ್ಯೂಹದ ಕಾರ್ಯವು ಚೆನ್ನಾಗಿ ನಡೆಯುವಂತೆ ನೆರವಾಗುತ್ತದೆ.
ಕೂದಲಿನ ಆರೈಕೆ, ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಎರಡು ಚಮಚ ಮೆಂತೆದ ಚೂರ್ಣ ಎರಡು ಚಮಚಕ್ಕೆ ಗೋಕ್ಷೂರ ಚೂರ್ಣ ಒಂದು ಬಟ್ಟಲು ಎಳ್ಳೆಣ್ಣೆಗೆ ಸೇರಿಸಿ ಬಿಸಿ ಮಾಡಿ ತಣಿಸಿ ಶೋಧಿಸಿ ಪ್ರತಿದಿನ ತಲೆಗೆ ಹಚ್ಚಕೊಳ್ಳಬೇಕು.
ಅಮೃತಬಳ್ಳಿ ಚೂರ್ಣ : ದೇಹದ ಆರೋಗ್ಯ ಅಮೃತ ಸ್ವರೂಪಿಯಾದುದರಿಂದ ಈ ಗಿಡಕ್ಕೆ ಅಮೃತಬಳ್ಳಿ ಎಂದು ಹೆಸರು. ಹಲವಾರು ರೋಗಗಳ ವಿರುದ್ಧ ಹೋರಾಡಲು ನೆರವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸಾಮಾನ್ಯ ಶಕ್ತಿಯಲ್ಲಿ ಬಳಸಬಹುದು ನೋವು ನಿವಾರಕ ಗುಣವಿದೆ… ಪಿತ್ತಕೋಶದ ಸಮಸ್ಯೆಗಳು ಅಮೃತಬಳ್ಳಿ ಮತ್ತು ಚೂರ್ಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಜೇನುತುಪ್ಪದಲ್ಲಿ ಬೆರೆಸಿ ದಿನದಲ್ಲಿ ಮೂರು ಸಲದಂತೆ ಸೇವಿಸುತ್ತಾ ಬಂದರೆ ಪಿತ್ತಕೋಶದ ಊಟ ಮತ್ತು ಇತರ ಕಾಯಿಲೆಗಳು ಗುಣವಾಗುತ್ತದೆ.
ತಲೆ ಕೂದಲಿನ ಸಮಸ್ಯೆಗಳು… ಬೃಂಗರಾಜ ಚೂರ್ಣ ಅಮೃತಬಳ್ಳಿ ಚೂರ್ಣ ಮತ್ತು ಬೆಟ್ಟದ ನೆಲ್ಲಿ ಚೂರ್ಣ ಈ ಮೂರನ್ನು ಸಮ ಪ್ರಮಾಣದಲ್ಲಿ ತಲಿಕೊಂಡು ಬೇರೆ ಬೇರೆಯಾಗಿ ಜಜ್ಜಿ ರಸವನ್ನು ತೆಗಿಬೇಕು ಇದರ ಕಾಲು ಪ್ರಮಾಣದ ತೆಂಗಿನ ಎಣ್ಣೆಯನ್ನು ಈ ರಸಗಳ ಜೊತೆ ಸೇರಿಸಿ ಸಂಗ್ರಹಿಸಬೇಕು ಇದು ಒಳ್ಳೆಯ ಕೇಶವ ವರ್ಗ ತೈಲವಾಗಿದ್ದು ಇದರ ಬಳಕೆಯಿಂದ ತಲೆ ಕೂದಲು ಉದುರುವುದಿಲ್ಲ
ಒಂದೆಲಗ(ಬ್ರಾಹ್ಮಿ ಚೂರ್ಣ) : ಒಂದೊಂದು ನರಮಂಡಲದ ಟಾನಿಕ್. ಮಾನಸಿಕ ಬೌದ್ಧಿಕ ಆರೋಗ್ಯದ ದೇಶಕ್ಕಾಗಿ ಬಹಳ ಹಿಂದಿನಿಂದಲೂ ಆಯುರ್ವೇದದಲ್ಲಿ ಮತ್ತು ಪಾರಂಪರಿಕ ವೈದ್ಯದಲ್ಲಿ ಇದನ್ನು ಬಳಸುತ್ತಬಂದಿದ್ದಾರೆ. ಮಕ್ಕಳಲ್ಲಿ ಉದ್ದಿಜ್ಞತೆಯನ್ನು ಶಮನಗೊಳಿಸುತ್ತದೆ. ಇದರಲ್ಲಿ ಘಟಕಗಳು ಕೂದಲು ಚರ್ಮದ ಅಂಗಾಂಶಗಳ ಆರೋಗ್ಯಕ್ಕೆ ಒಳ್ಳೆಯದು ಮಾಡುತ್ತದೆ.














