ಮನೆ ಮನೆ ಮದ್ದು ಮನೆಮದ್ದು: ಶುಂಠಿ ಚೂರ್ಣ

ಮನೆಮದ್ದು: ಶುಂಠಿ ಚೂರ್ಣ

0

ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ಒಳ್ಳೆಯದು ಜೀರ್ಣಶಕ್ತಿ ಹೆಚ್ಚಿಸುತ್ತದೆ ಅಗ್ನಿ ಮಾಂದ್ಯವನ್ನು (ಜೀರ್ಣಶಕ್ತಿ ದುರ್ಬಲವಾಗಿರುವುದು) ಕೊನೆಗೊಳಿಸುತ್ತದೆ. ನೋವು ನಿವಾರಕವಾಗಿದೆ. ಮಂಡಿ ಕೈಕಾಲುಗಳ ದೌರ್ಬಲ್ಯಕ್ಕೆ ಒಳ್ಳೆಯ ಮದ್ದು.

ಸಂಧಿವಾತ :̲ ಶುಂಟಿ ಚೂ̧ರ್ಣ, ಕಾಳು ಮೆಣಸು ಚೂರ್ಣ, ಮೆಂತ್ಯ ಚೂರ್ಣ, ಅಶ್ವಗಂಧ ಚೂರ್ಣ ,ತಲೆ ತೆಗೆದುಕೊಂಡು ಮಿಶ್ರ ಮಾಡಬೇಕು. ಈ ಮಿಶ್ರಣವನ್ನು ಒಂದು ಚಮಚದಷ್ಟು ತೆಗೆದುಕೊಂಡು ಎರಡು ಲೋಟ ನೀರಿಗೆ ಸೇರಿಸಿ ಕುದಿಸಬೇಕು. ನೀರು ಅರ್ಧ ಲೋಟದಷ್ಟು ಆದಾಗ ಕಲ್ಲು ಸಕ್ಕರೆ ಪುಡಿ ಮಾಡಿ ಸೇರಿಸಿ ಕುಡಿಯಬೇಕು. ಇದನ್ನು ದಿನಕ್ಕೆರಡು ಸಲ ಮಾಡಬೇಕು ಇದರಿಂದ ಕಾಲು ನೋವು ಮಂಡಿ ನೋವು ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ. ಈ ಸಮಸ್ಯೆಗಳೊಂದಿಗೆ ಮಧುಮೇಹ ಇರುವವರು ಕಲ್ಲು ಸಕ್ಕರೆ ಸೇರಿಸದೆ ಕಷಾಯವನ್ನು ಕುಡಿಯಬಹುದು.

ನೆಗಡಿ, ಶೀತ, ಕೆಮ್ಮು, ಅಸ್ತಮ : ಒಣಶುಂಠಿ ಚೂರ್ಣ, ಕಾಳುಮೆಣಸು, ಚೂಡಾ ಹಿಪ್ಪಲಿ ಹುಳಿ, ಜೀರಿಗೆ ಹಾಕಿ ಕುದಿಸಿ ಅದು ಒಂದು ಲೋಟದಷ್ಟು ಆದಾಗ ಶೋಧಿಸಿ ಇಡಬೇಕು. ಈ ಕಷಾಯವನ್ನು ದಿನಕ್ಕೆ ಮೂರು ಸಲ ಒಂದೊಂದು ಚಮಚಯಂತೆ ಜೇನುತುಪ್ಪದೊಡನೆ ಸೇವಿಸಿದರೆ ಅಸ್ತಮಾ ಅಲರ್ಜಿ ಮೊದಲಾದ ಹಳೆಯ ಕಾಯಿಲೆಗಳು ಉಪಶಮನಗೊಳ್ಳ ಗೊಳ್ಳುತ್ತದೆ.

ತ್ರಿಕಟು ಚೂರ್ಣ :-

ಹಿಪ್ಪಲಿ ಕಾಳಮೆಣಸು ಮತ್ತು ಶುಂಠಿಗಳ ಮಿಶ್ರಣವಿದು. ಈ ಮೂರು ವಸ್ತುಗಳು ಪ್ರತ್ಯೇಕವಾಗಿ ಹಲವಾರು ಔಷಧಿ ಗುಣಗಳನ್ನು ಹೊಂದಿದೆ ಇವು ಮೂರು ಒಂದಾದಾಗ ಒಂದು ಅದ್ಭುತ ರೀತಿಯಲ್ಲಿ ನಮಗೆ ಪ್ರಯೋಜನ ನೀಡುತ್ತದೆ.

ಪ್ರತಿಯೊಂದು ಮನೆಯಲ್ಲಿ ತ್ರಿಪಲಚೂರ್ಣ ಮತ್ತು ತ್ರಿಕಟಚೂರ್ಣವನ್ನು ಬಳಸಿದರೆ, ಮನೆಯಲ್ಲಿ ಎಲ್ಲಾ ಸದಸ್ಯರ ಆರೋಗ್ಯ ಚೆನ್ನಾಗಿರುತ್ತೆ….

ತ್ರಿಕಟು ಚೂರ್ಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಎಲ್ಲಾ ಪ್ರಮುಖ ಅಂಗಾಂಗಗಳನ್ನು ಬಲಗೊಳಿಸುತ್ತದೆ. ಅಜೀರ್ಣ ವಾಯು ಪ್ರಕೋಪ ಕಾಲು ಗಂಟೆಗಳ ನೋವು ಯಾವಾಗಲೂ ಕಾಡುವ ಅನಾರೋಗ್ಯ ಅಸ್ತಮಾ ಶೀತ, ಕೆಮ್ಮು, ವಿವಿಧ ಬಗೆ ಜ್ವರ ಇಂತಹ ಸಮಸ್ಯೆಗಳಲ್ಲಿ ತ್ರಿಕಟಚೂರ್ಣ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ.

 ಪ್ರತಿನಿತ್ಯ 5 ಗ್ರಾಂ ನಷ್ಟು ತ್ರಿಕಟಚೂರ್ಣವನ್ನು ಯಾವುದೇ ರೂಪದಲ್ಲಿ ಸೇವಿಸಿದರು ಅಮಿತ ಲಾಭವಿದೆ. ಕಾಫಿ, ಟೀ, ಹಾಲಿನಲ್ಲಿ ಇದನ್ನು ಬೆರೆಸುವುದು ಹಣ್ಣಿನ ರಸ, ಬಿಸಿ ಹಾಲು ಯಾವುದೇ ಉಪಾರದ ಜೊತೆಗೂ ಸೇವಿಸಬಹುದು.

ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಸ್ತಮಾ, ಉಸಿರಾಟದ ಬಾಧೆಗಳು, ಶೀತ, ಜ್ವರ, ಕೆಮ್ಮು ಕಾಡುವುದು ಕಡಿಮೆಯಾಗುತ್ತದೆ.

ಕಾರವನ್ನು ಬಳಸುವಲ್ಲೆಲ್ಲ ಮೆಣ ಮೆಣಸಿನಕಾಯಿ ಬದಲು ತ್ರಿಕಟು ಬಳಸಬಹುದು ಅರೆ ಚಮಚ ತ್ರಿಕೋಟು ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬಹುದು.