ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಮಹಿಳೆಯರ ಬಂಧು. ಇದು ಗರ್ಭಕೋಶದ ಟಾನಿಕ್ ಎಂದೇ ಪ್ರಸಿದ್ಧವಾಗಿದೆ. ಮಹಿಳೆಯರ ಸರ್ವಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತಸ್ರಾವವನ್ನು ನಿಲ್ಲಿಸುವ ಗುಣವಿದೆ. ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೂ ಹಿತಕರವಾಗಿದೆ. ಊತ ನಿವಾರಕ ಗುಣವಿದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಇದರಲ್ಲಿ ಸಮೃದ್ಧವಾಗಿದೆ.
ಮಂಜಿಷ್ಟ ಚೂರ್ಣ :
ಆಯುರ್ವೇದದಲ್ಲಿ ರಕ್ತಶೋಧಕವಾಗಿ ಬಳಸಲಾಗುವ ಸಸ್ಯವಿದು. ಚರ್ಮರೋಗದಂತಹ ಅನೇಕ ಸಮಸ್ಯೆಗಳಿಗೆ ರಕ್ತದ ಮಲಿನತೆಯೇ ಕಾರಣ. ಮಲಿನ ರಕ್ತವನ್ನು ಶೋಧಿಸಿ ಶುದ್ಧಗೊಳಿಸುವ ಅನೇಕ ಸಸ್ಯಗಳಿದ್ದು, ಅವನ್ನು ರಕ್ತಶೋಧಕಗಳನ್ನುತ್ತಾರೆ. ಅವುಗಳಲ್ಲಿ ಮಂಜಿಷ್ಠವು ಪ್ರಸಿದ್ಧವಾಗಿದೆ. ಮಂಜಿಷ್ಟವೂ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು. ಚರ್ಮವು ಕಾಂತಿಯುತವಾಗಿರಲು ಸಹಾಯಕ. ಊತ ನಿವಾರಕ ಗುಣವಿದೆ.
ಮೆಂತ್ಯ ಚೂರ್ಣ :
ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸುವ ಮೆಂತೆ ಒಂದು ಆರೋಗ್ಯಕರ ವಾಸ್ತುಆಗಿದೆ. ದೇಹದ ಅನೇಕ ಚಯಾಪಚಯ ಚಟುವಟಿಕೆಗಳ ಮೇಲೆ ಇದು ಪ್ರಭಾವ ಬೀರುತ್ತದೆ. ವ್ಯಾಯಾಮ ಅಥವಾ ಸಾಮಾನ್ಯ ಚಟುವಟಿಕೆಗಳಿಂದ ಕಂಡುಬರುವ ಮೈಕೈ ನೋವಿನ ನಿವಾರಣೆಗೆ ಇದು ಸಹಾಯಕ. ನಾರಿನಾ ಅಂಶಗಳಿಂದ ಸಮೃಧ್ಧವಾಗಿರುವುದರಿಂದ ಹೊರಬರಲು ನೆರವಾಗುತ್ತದೆ. ಮುಖ್ಯವಾಗಿ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಬಹಳ ಒಳ್ಳೆಯದು. ದೇಹದ ಮಾಲಿನ್ಯ ಹೊರ ಹಾಕುತ್ತದೆ. ಅತಿಯಾದ ದೇಹ ತೂಕ ಬೊಜ್ಜು ಕರಗಿಸಲು ಮೆಂತ್ಯದ ಚೂರ್ಣ ಬಹಳ ಒಳ್ಳೆಯದು.
ಕೂದಲಿನ ಆರೈಕೆ :-ಒಂದು ಹಿಡಿ ಕರಿ ಬೇವಿನ ಸೊಪ್ಪನ್ನು, ಎರಡು ಚಮಚ ಮೆಂತ್ಯದ ಚೂರ್ಣ ಎರಡು ಚಮಚ ಗೋಕುಲಚೂರಣ ಒಂದು ಬಟ್ಟಲು ಎಳ್ಳೆಣ್ಣೆಗೆ ಸೇರಿಸಿ ಬಿಸಿ ಮಾಡಿ ತಣಿಸಿ ಶೋಧಿಸಿ ಪ್ರತಿದಿನ ತಲೆಗೆ ಹಚ್ಚಿಕೊಳ್ಳಬೇಕು.
ಸಂಧಿವಾತ :-
ಶುಂಠಿ ಚೂರ್ಣ, ಕಾಳುಮೆಣಸು ಚೂರ್ಣ, ಮೆಂತೆ ಚೂರ್ಣ, ಅಶ್ವಗಂಧ ಚೂರ್ಣ, ತಲಾ 50 ಗ್ರಾಂ ನ ತೆಗೆದುಕೊಂಡು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಒಂದು ಚಮಚದಷ್ಟು ತೆಗೆದುಕೊಂಡು ಎರಡು ಲೋಟ ನೀರಿಗೆ ಸೇರಿಸಿ ಕುದಿಸಬೇಕು. ನೀರು ಅರ್ಧ ಲೋಟದಷ್ಟು ಆದಾಗ ಕಲ್ಲು ಸಕ್ಕರೆ ಪುಡಿಮಾಡಿ ಸೇರಿಸಿ ಕುಡಿಯಬೇಕು
ಇದನ್ನು ದಿನಕ್ಕೆರಡು ಸಲಮಾಡಬೇಕು. ಇದರಿಂದ ಕಾಲು ನೋವು, ಮಂಡಿ ನೋವು, ಸಂಧಿವಾದ ನಿಯಂತ್ರಣಕ್ಕೆ ಬರುತ್ತದೆ. ಈ ಸಮಸ್ಯೆಗಳೊಂದಿಗೆ ಮಧುಮೇಹ ಇರುವವರು ಕಲ್ಲುಸಕ್ಕರೆ ಸೇರಿಸದೆ ಕಷಾಯವನ್ನು ಕುಡಿಯಬೇಕು.