ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಆರೋಗ್ಯವೂ ಕೆಡುತ್ತದೆ. ಈ ಋತುವಿನಲ್ಲಿ ಬೀಸುವ ತಣ್ಣನೆಯ ಗಾಳಿ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಹೀಗಾದಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ. ರಾತ್ರಿ ವೇಳೆ ನಿದ್ದೆಗೂ ಇದು ಅಡ್ಡಿಯುಂಟು ಮಾಡುತ್ತದೆ. ಕೆಲವೊಂದು ಮನೆಮದ್ದು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಉಸಿರುಕಟ್ಟುವುದು, ಗಂಟಲು ನೋವು, ಮೂಗು ಕಟ್ಟಿಕೊಳ್ಳುವುದು ಈ ಸಮಸ್ಯೆಗಳನ್ನು ಗುಣಪಡಿಸಲು ಮನೆಯಲ್ಲಿಯೇ ಇರುವ ಮಸಾಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು. ಇದು ಚಳಿಗಾಲದಲ್ಲಿ ತಲೆದೋರುವ ಈ ಸಮಸ್ಯೆಗಳ ವಿರುದ್ದ ಹೋರಾಡುತ್ತದೆ.
ಕಷಾಯ :
ತುಳಸಿ, ಕರಿಮೆಣಸು, ಒಣ ಶುಂಠಿ ಮತ್ತು ಚಕ್ಕೆಯನ್ನು ಒಟ್ಟಿಗೆ ಕುದಿಸಿ ಕಷಾಯ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು ನಿಂಬೆ ರಸವನ್ನು ಕೂಡಾ ಸೇರಿಸಿ. ಇದನ್ನೂ ಕುಡಿದರೆ ಮೇಲೆ ಹೇಳಿದಅ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.