ಮನೆ ಮನೆ ಮದ್ದು ಮನೆಮದ್ದು: ಸರ್ಪಗಂಧ ಚೂರ್ಣ

ಮನೆಮದ್ದು: ಸರ್ಪಗಂಧ ಚೂರ್ಣ

0

ರಕ್ತದ ಅಧಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಉಪಯೋಗಿಸುತ್ತಿದ್ದ ಮೂಲಿಕೆ ಇದು ಹಸಿವನ್ನು ಹೆಚ್ಚಿಸುತ್ತದೆ. ಜೀರ್ಣಶಕ್ತಿ ಸರಿ ಮಾಡುತ್ತದೆ. ನರಗಳನ್ನು ಪ್ರಶಾಂತವಾಗಿರುತ್ತದೆ. ಮಾನಸಿಕ ಉದ್ವಗ್ತತೆಯನ್ನು ನಿವಾರಣೆಯಾಗಲು ನೆರವಾಗುತ್ತದೆ.

ಶತಾವರಿ ಚೂರ್ಣ :

ಪ್ರಜನನಕ್ಕೆ ನೆರವಾಗುವ ಅಪೂರ್ವ ಮೂಲಿಕೆ ಶತಾವರಿ. ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆಗೆ ಪ್ರಯೋಜನಕಾರಿ ಕಾಲೇಜಿಗೆ ಹೋಗುವ ತರುಣಿಯರು ಇರಬಹುದು. ಗೃಹಣೀಯರಿರಬಹುದು ಪ್ರತಿನಿತ್ಯ ಶತಾವರಿಚೂರ್ಣವನ್ನು ಬಳಸುವುದರಿಂದ ದಿನವಿಡಿ ಚೂಟಿ ಆಗಿರುತ್ತಾರೆ.

ನುಗ್ಗೆ ಚೂರ್ಣ :

ಒಂದು ಜನಪ್ರಿಯ ತರಕಾರಿಯಾಗಿ ನುಗ್ಗೆ ಮನೆ ಮಾತಾಗಿದೆ. ಆದರೆ ನುಗ್ಗೆಕಾಯಿಯ ಹಾಗೆ (ಅಥವ ಅದಕ್ಕಿಂತ ಹೆಚ್ಚು) ಅದರ ಸೊಪ್ಪು ಔಷಧೀಯ ಗುಣಗಳಿಂದ ಪೋಷಕಾಂಶ ತತ್ವಗಳಿಂದ ಕೂಡಿದೆ ಹೃದಯ ಜೀರ್ಣಾಂಗ ವ್ಯೂಹ ಮತ್ತು ರಕ್ತ ಪರಿಚಲನೆಯ ಅಂಗಾಂಗಗಳ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ.

ಮಕ್ಕಳ ಆಹಾರದಲ್ಲಿ ಪ್ರತಿದಿನ ಎರಡು ಕೇವಲ ಎರಡು ನುಗ್ಗೆ ಎಲೆಗಳನ್ನು ಸೇರಿಸಿದರೆ ಅಥವಾ ಒಣಗಿಸಿದ ನುಗ್ಗೆ ಎಲೆಯ ಪುಡಿಯನ್ನು ಸೇರಿಸಿಕೊಟ್ಟರೆ ಪ್ರತಿದಿನ ಅವರಿಗೆ ಅಗತ್ಯ ಇರೋ ಪೋಷಕಾಂಶಗಳು ಪೂರೈಸುತ್ತದೆ.

ಸೊಪ್ಪು ತರಕಾರಿ ಪೈಕಿ ನುಗ್ಗೆ ಶ್ರೇಷ್ಠವಾಗಿದೆ. ಸೊಪ್ಪಿನಲ್ಲಿ ʼಎʼ ಜೀವ ಸತ್ವ ಸಮೃದ್ಧವಾಗಿದೆ. ಹಸಿ ಸೊಪ್ಪಿನಲ್ಲಿ ʼಸಿʼ ಜೀವಸತ್ವ ಹೆಚ್ಚಾಗಿದೆ. ಖನಿಜಗಳ ಸರಬರಾಜು ದೃಷ್ಟಿಯಿಂದ ನುಗ್ಗೆ ಅತ್ಯುತ್ತಮ ಗಿಡಗಳ ಪೈಕಿ ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ನುಗ್ಗೆಕಾಯಿ ಪ್ರಮಾಣವು ಕಡಿಮೆ ಇರುವುದರಿಂದ ದೇಹದ ಮತ್ತಷ್ಟು ಒಳ್ಳೆಯದು. ಕಬ್ಬಿಣಾಂಶ ಹೆಚ್ಚಿಗಿರುವುದರಿಂದ ಫಿಲಿಪೈನ್ಸ್ ನಲ್ಲಿ ಅನೀಮಿಯ ರೋಗಿಗಳಿಗೆ ಔಷದ ಹಾಗೆ ಬಳಸುತ್ತಾರೆ. ಆದರೆ ಇದರಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿದೆ ಇವೆಲ್ಲವೂ ನೋಡಿದಾಗ ನಮಗೆ ಸಿಗುವ ಅತ್ಯುತ್ತಮ ಸಸ್ಯಜನ್ಯ ಆಹಾರ ಪೈಕಿ ನುಗ್ಗೆ ಸೊಪ್ಪು ಸಹ ಒಂದು ಎನ್ನಬಹುದು.

ಚರ್ಮದ ಸಮಸ್ಯೆಗಳು : ನುಗ್ಗೆ ಸೊಪ್ಪಿನ ಚೂರ್ಣಕ್ಕೆ ಸ್ವಲ್ಪ ನಿಂಬೆರಸ ಅರಿಶಿಣ ಮತ್ತು ಶ್ರೀಗಂಧವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ತೆಗೆದುಕೊಳ್ಳುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚುವಾಗುತ್ತದೆ.

ಮಕ್ಕಳ ಸಮಸ್ಯೆಗಳು ನುಗ್ಗೆ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳ ಜೊತೆಗೆ ʼಎʼ ಜೀವ ಸತ್ವ ಸಮೃದ್ಧವಾಗಿದೆ. ಆದ್ದರಿಂದ ಬೆಳೆಯುತ್ತಿರುವ ಮಕ್ಕಳಿಗೆ ಪ್ರತಿದಿನ ಅರ್ಧ ಚಮಚದಷ್ಟು ನುಗ್ಗೆ ಸೊಪ್ಪಿನ ಚರಣವನ್ನು ಹಾಲಿನೊಂದಿಗೆ ಅಥವಾ ಜೇನುತುಪ್ಪದೊಂದಿಗೆ ಕೊಡಬೇಕು ಇದರಿಂದ ಮಕ್ಕಳ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ ಮತ್ತು ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಕೆಮ್ಮು, ದಮ್ಮು, ಅಸ್ತಮಾ :- ನುಗ್ಗೆ ಸೊಪ್ಪಿನ ಚೂರಣಕ್ಕೆ ಜೇನುತುಪ್ಪ ಬೆಳೆಸಿ ಸೇವಿಸಿದರೆ ಕೆಮ್ಮು ದಮ್ಮು ಉಪಶಮಾನವಾಗುತ್ತದೆ.

ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ನೀರಿಗೆ ಅರ್ಧಚಮಚ ನುಗ್ಗೆಸೊಪ್ಪಿನ ಚೂರ್ಣ ಮತ್ತೆ ಎರಡುಚಮಚ ನಿಂಬೆರಸ ಬೆರೆಸಿ ಕುಡಿಸುತ್ತಿದ್ದಾರೆ ಅಸ್ತಮ ರೋಗಿಗಳಿಗೆ ಪ್ರಯೋಜನವಾಗುತ್ತದೆ.

ಮೂಗು ಮತ್ತು ಹಣೆಯ ನಡುವಿನ ಭಾಗದಲ್ಲಿ ಇರುವ ಮೂಳೆಯ ಒಳಗೆ ಟೊಳ್ಳು ಜಾಗಗಳಿರುತ್ತದೆ. ಈ ಜಾಗದ ಒಳಪದರ ಊದಿದಾಗ ಸೈನಸೈಟಿಸ್ ಸಮಸ್ಯೆ ಆಗುತ್ತದೆ. ತಲೆಭಾರ, ನೆಗಡಿ, ಮೂಗಿನಿಂದ ಕೆಟ್ಟವಾಸನೆ, ದ್ರವಸ್ರಾವವಾಗುತ್ತದೆ. ಅತಿಯಾದ ಸೀನು, ಮೂಗು ಕಟ್ಟಿಕೊಳ್ಳುವುದು ಕಣ್ಣು ಮತ್ತು ಹಣೆ ಪ್ರದೇಶದೊಳಗೆ ನೋವು ಸೈಟಿಸ್ ನ ಲಕ್ಷಣಗಳು.

ಸೈನೆಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ, ಏಲಕ್ಕಿ, ತುಳಸಿ ಮತ್ತು ಕರಿಮೆಣಸು ಇದನ್ನು ಒಂದೊಂದು ಚಮಚದಷ್ಟು ತೆಗೆದುಕೊಂಡು ಕುಟ್ಟಿ ಎರಡು ಬಟ್ಟಲು ನೀರಿಗೆ ಹಾಕಬೇಕು, ಇದನ್ನು ಅರ್ಧ ಚಮಚ ನುಗ್ಗೆ ಸೊಪ್ಪಿನ ಚೂರ್ಣವನ್ನು ಸೇರಿಸಿ ಕುದಿಸಬೇಕು. ಇದು ಅರ್ಧದಷ್ಟು ಆದಾಗ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬೇಕು ಇದನ್ನ ಎರಡು ಬಾರಿಯಂತೆ ಮಾಡುವುದು ಒಳ್ಳೆಯದು.

ಹಿಂದಿನ ಲೇಖನಹಾಲಲ್ಲಾದರೂ ಹಾಕು
ಮುಂದಿನ ಲೇಖನಪ್ರಾಣಾಯಾಮಗಳ ವಿಧಾನಗಳು