ಮನೆ ರಾಜ್ಯ ಹನಿಟ್ರ್ಯಾಪ್ ಕೇಸ್ ಅಧಿಕೃತವಾಗಿ ಸಿಐಡಿಗೆ ವಹಿಸಿ: ಸಚಿವ ಜಿ.ಪರಮೇಶ್ವರ್

ಹನಿಟ್ರ್ಯಾಪ್ ಕೇಸ್ ಅಧಿಕೃತವಾಗಿ ಸಿಐಡಿಗೆ ವಹಿಸಿ: ಸಚಿವ ಜಿ.ಪರಮೇಶ್ವರ್

0

ಬೆಂಗಳೂರು : ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ರಾಜಕಾರಣಿಗಳ ಹನಿಟ್ರ್ಯಾಪ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಈ ಒಂದು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಇನ್ನು ಇದೇ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು, ತನಿಖೆ ಮಾಡುವ ಸಂದರ್ಭದಲ್ಲಿ ಏನು ಹೇಳಕ್ಕಾಗಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದರ ಬಗ್ಗೆ ಇಲಾಖೆಯವರೇ ತನಿಖೆ ಮಾಡುತ್ತಾರೆ. ಡಿಜಿ ಕಳುಹಿಸಿದ ಮೇಲೆ ಡಿಪಾರ್ಟ್ಮೆಂಟ್ ಆದೇಶ ಮಾಡುತ್ತದೆ ಅದಕ್ಕೆ ಸರ್ಕಾರದ ಆದೇಶ ಬರಲ್ಲ.ಸಿಐಡಿ ಅವರು ತನಿಖೆ ಮಾಡುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಸಿಕ್ಕಿರುವ ಮಾಹಿತಿ ಇಲ್ಲ. ತನಿಖೆ ಮಾಡುತ್ತಿದ್ದಾರೆ. ತನಿಖೆ ಮಾಡುವಾಗ ಏನು ಹೇಳಲು ಆಗಲ್ಲ. ತನಿಖೆ ಪೂರ್ಣ ಆದ್ಮೇಲೆ ಎಲ್ಲವನ್ನು ವಿವರವಾಗಿ ಹೇಳುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಸಂಪುಟ ಪುನಾರಚನೆ ಸಂಬಂಧ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುವ ವಿಚಾರವಾಗಿ ನನಗೆ ಇದರ ಬಗ್ಗೆ ಗೊತ್ತಿಲ್ಲ ನಾನು ಎಲ್ಲಿಯೂ ಹೋಗುವುದಿಲ್ಲ. ಏಪ್ರಿಲ್ ಎರಡರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಾರೆ ಎಂದು ಅಷ್ಟೇ ನನಗೆ ಗೊತ್ತಿದೆ ಹೊರತು ಅದನ್ನು ಬಿಟ್ಟರೆ ಬೇರೆ ಏನು ನನಗೆ ಗೊತ್ತಿಲ್ಲ . ದೆಹಲಿಯಲ್ಲಿ ಕರ್ನಾಟಕ ಭವನದ ಉದ್ಘಾಟನೆ ಕಾರ್ಯಕ್ರಮ ಇದೆ ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.