ಮನೆ ಅಪರಾಧ ಒಂದು ಕಿಸ್​ಗೆ 50 ಸಾವಿರ ರೂ ಸುಲಿಗೆ: ಹನಿಟ್ರ್ಯಾಪ್ ಗ್ಯಾಂಗ್ ಬಂಧನ

ಒಂದು ಕಿಸ್​ಗೆ 50 ಸಾವಿರ ರೂ ಸುಲಿಗೆ: ಹನಿಟ್ರ್ಯಾಪ್ ಗ್ಯಾಂಗ್ ಬಂಧನ

0

ಬೆಂಗಳೂರು : ರಾಜ್ಯದಲ್ಲಿ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ನಡೆಸಿದ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಜಾಲ ಪತ್ತೆಯಾಗಿದೆ. ಪ್ರಿಸ್ಕೂಲ್‌ ನಡೆಸುತ್ತಿದ್ದ ಶಿಕ್ಷಕಿ ಒಬ್ಬಳು ಪೋಷಕರನ್ನೆ ಟಾರ್ಗೆಟ್ ಮಾಡಿ ಹನಿಟ್ಯಾಪ್ ಬಲೆಗೆ ಬೀಳಿಸಿ ಲಕ್ಷ ಲಕ್ಷ ಹಣ ಪ್ರೀತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಶಿಕ್ಷಕಿ ಸೇರಿ ಮೂವರನ್ನು ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಶಿಕ್ಷಕಿಯನ್ನು ಶ್ರೀದೇವಿ ಎಂದು ತಿಳಿದುಬಂದಿದ್ದು, ಮಹಾಲಕ್ಷ್ಮೀ ಲೇಔಟ್‌ ಬಳಿ ಪ್ರಿಸ್ಕೂಲ್‌ ನಡೆಸುತ್ತಿದ್ದಳು. ಇಲ್ಲಿಗೆ ತನ್ನ ಮಕ್ಕಳನ್ನು ಬಿಡಲು ರಾಕೇಶ್‌ ಬರುತ್ತಿದ್ದರು. 2023 ರಲ್ಲಿ ರಾಕೇಶ್ ಶ್ರೀದೇವಿ ನಡುವೆ ಆದ ಪರಿಚಯ ಕ್ರಮೇಣ ಸಲುಗೆಗೆ ತಿರುಗಿ ಡೇಟಿಂಗ್‌ ಹಂತಕ್ಕೂ ತಲುಪಿತ್ತು. ರಾಕೇಶ್‌ ಗೆ ಒಂದು ಬಾರಿ ಚುಂಬಿಸಲು 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಡುತ್ತಿದ್ದ ಶ್ರೀದೇವಿ, ಅದರ ಫೋಟೋಗಳನ್ನೂ ತೆಗೆದಿರಿಸಿಕೊಳ್ಳುತ್ತಿದ್ದಳು.

ರಾಕೇಶ್‌ ನಿಂದ 4 ಲಕ್ಷ ರೂ. ಹಣ ಸಾಲ ಎಂದು ಪಡೆದು ಬಳಿಕ ವಾಪಸ್‌ ಕೊಡದೇ ತನ್ನ ಪ್ರಿಸ್ಕೂಲ್‌ ಗೆ ಪಾರ್ಟ್ನರ್ ಆಗುವಂತೆ ಒತ್ತಾಯಿಸಿದ್ದಳು. ಬಳಿಕ ಅರುಣ್‌, ಸಾಗರ್‌ ಎಂಬುವವರ ನೆರವು ಪಡೆದ ಶ್ರೀದೇವಿ ಬ್ಲಾಕ್‌ ಮೇಲ್‌ ಮಾಡಲು ಶುರುಮಾಡಿದ್ದಳು. ಚಾಟ್‌ ಡಿಲೀಟ್‌ ಮಾಡಲು 50 ಲಕ್ಷ ರೂ. ವಿಡಿಯೋ ಡಿಲೀಟ್‌ ಮಾಡಲು 1 ಕೋಟಿ ರೂ. ಹಣ ನೀಡುವಂತೆ ಇಲ್ಲದಿದ್ದರೆ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ರಾಕೇಶ್‌ ಸಿಸಿಬಿಯಲ್ಲಿ ದೂರು ದಾಖಲಿಸಿದ್ದ. ಅದ್ಯ ಸಿಸಿಬಿ ಪೊಲೀಸರು ಶಿಕ್ಷಕಿ ಶ್ರೀದೇವಿ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.