ಮನೆ ದೇವಸ್ಥಾನ ಜನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

ಜನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

0

ಉದಯರಾಗ

ಪಶುವೃದ್ದಿ ಸಂಪತ್ತು ಆಶನ ವಸನವಿತ್ತು |
ಶಾಶ್ವತೆಯ ಗೊಳಿಸು ತಾಯೇ | ಜಗದಂಬ ||
ವಸತಿಗೃಹ ಗೆಲುವಿತ್ತು ಅಸುವಿಂಗ ಮೃತವಿತ್ತು |
ಕುಶಾಲಧಿಂ ಸಲಹು ತಾಯೇ |ಜಗದಂಬ ಕುಶಲದಿಂ ಸಲಹು ತಾಯೇ ||

ಮರಣ ಹೊಂದುವ ಮುನ್ನ ಚರಣ ದರ್ಶನವಿತ್ತು |
ಕರಣದಿಂ ಸಲಹು ತಾಯೇ |ಜಗದಂಬ |
ಭಕ್ತ ರಕ್ಷಿಕಿ ದೇವಿ ಶ್ರೀಚಕ್ರ ಪುರವಾಸಿ ||
ಜ್ಞಾನ ಭಾಗ್ಯವನಿತ್ತು ಸಂತೈಸು ತಾಯೇ | ಜಗದಂಬ | ಜ್ಞಾನ ಭಾಗ್ಯ ವಿನಿತ್ತು ಜಗದಂಬ ||

ಮಾತೆ ನಿನ್ನಯ ಪುತ್ರರೊಂದಾಗಿ ಸುಖಿ ಸಲ್ಕೆ|
ಎದುರು ನಿಂತ್ಹರಸು ತಾಯೇ |ಜಗದಂಬ ||
ವರದಹಸ್ತವ ನೀಡಿ ಸದ್ಗುಣ ಸುಶೀಲತೆಯ ||
ಶಾಂತಿಯನ್ನು ಕಲಿಸು ತಾಯೇ |ಜಗದಂಬ || ಶಾಂತಿಯನ್ನು ಕಲಿಸು ತಾಯೇ ||

ಯಜ್ಞ ಯಾಗಾವ ಗೈಯ್ವ ಹೋಮ ವ್ರತ ಧರ್ಮವನು |
ಉದ್ದರಿಸಿ ಹರಸು ತಾಯೇ |ಜಗದಂಬ ||
ಸುಜ್ಞಾನ ಸಿದ್ಧಿಸುವ ಜನಪದ ಸಾಧನೆಯ |
ವೃದ್ಧಿಪಸ್ಹೇಳು ತಾಯೇ | ಜಗದಂಬ | ವೃದ್ಧಿಪಡಿಸ್ಹೇಳು ತಾಯೇ ||

ಏನಿದ್ದರೇನಮ್ಮ ನಿನ್ನ ಕೃಪೆ ಇರದಿರಲು |
ಜಗವೆಲ್ಲಾ ಶೂನ್ಯಮಾಯೇ |ಜಗದಂಬ |
ಏನಾದರೇನಮ್ಮ ನಿನ್ನದಯೆವೂಂದಿರಲು |
ದಿಗಿಲುಭಯವಿಲ್ಲ ತಾಯೇ |ಜಗದಂಬ | ದಿಗಿಲುಭಯವಿಲ್ಲ. ||

ತೀರ್ಥ ಪ್ರಸಾದವನ್ನು ಭಕ್ತರಿಗೆ ಸಲ್ಲಿಸುತ್ತ|
ಸ್ಪೂರ್ತಿಯೋಳು ಹರಸು ತಾಯೇ |ಜಗದಂಬ ||
ಮೂರ್ತಿಮಯ ರೂಪವನ್ನು ಯಾತ್ರೆ ಫಲ ಪ್ರಾಪ್ತಿಯನು |
ಸತ್ವಬಲ ಗೊಳಿಸು ತಾಯೇ | ಜಗದಂಬ | ಸತ್ವಬಲ ಗೊಳಿಸು. ತಾಯೇ ||

ಹಂಬಲಿಸಿ ನಿನ್ನಡಿಯ ನಂಬಿಕೊಂಡಿರುವ ಜನರ |
ಬೆಂಬಿಡದೆ ಸಲ. ಹುಗುತಾ |ಜಗದಾಂಬ |
ಅಂಬಲಿಯ ಬೆಡುವರಿಗಮೃತ್ತಾನ್ನ ಮೊದಲಿತ್ತು |
ಇಂಬು ಕೊಟ್ಹರಸು ತಾಯೇ |ಜಗದಂಬ | ಇಂಬು ಗೊಟ್ಹರಸು ತಾಯೇ ||