ಮನೆ ದೇವಸ್ಥಾನ ಜನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

ಜನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

0

ಈಶ್ವರ ವರಸುತನಂಘ್ರಿಗೆ ಎರಗಿ

ಹನ್ನೊಂದನೆಯ ಸಂವತ್ಸರದಲ್ಲಿ |
ಶಿವನ ಮುಖ ಬ್ರಹ್ಮಸ್ವತಿ ಬರುವ ಸಮಯದಲಿ
ಉನ್ನತವಾದ ಕುಂಭಕೋಣೆ ತೀರದಿ |
ಘನಚಿಂತೆಗೊಳಲು ಮನ್ನಿಸಿ ಸಕಲರ ಪಾವನ
ಮಾಡಿ ಉತ್ಪನ್ನವಾದ ಕುಂಭೇಶನ |
ನೋಡುತ ತನ್ನಲ್ಲಿಗೆ ಬಹದೀಶ್ವರ
ಹೇಳಲು ಸನ್ಮಾನದಿ ಗಂಗಾ ||
|| ಜೈ ಜೈ ಮಂಗಳ ||

Join Our Whatsapp Group

ಗಂಗೆ ಬರುತ್ತಾಳೆ ಜೊತೆಗೆ ಮಹಾಭದ್ರಾ
ದೇವಿ ಎಂದುಪಚಾರವ ಮಾಡಿದ ರಾಕೆಗೆ |
ಹಂಬಲಿಸುತ್ತಾ ತನ್ನಕ್ಕನ ಪಾದಕೆ ಘನಬೇಗದಿ
ನಮಿಸಿ ಮಂದಾಕಿನಿ ಗುಡ್ಡವ ಸಂಹರಿಸುತ
ಬಂದಳು ಕಸದ ಪುರದೆಡೆಯಲ್ಲಿ ನಿಂದಳು
ವರ ಮಾರ್ಕಂಡ ಕ್ಷೇತ್ರದಲ್ಲಿ
ಕಾಳೇಶ್ವರನ ಸನ್ನಿಧಿಯಲ್ಲಿ ||
|| ಜೈ ಜೈ ಮಂಗಳಾ ||

ಭಗೀರಥ ಬರುತಾಳಂತೆಂದು ನೋಡಿದಿರಾ |
ಎಡಬಲದ ನದಿಗಳ ಪಾದಕೆ ಎರಗುತ ಮಣಿದಳು ನಿಮ್ಮನ್ನು |
ಕೊಡುವೆನೆಂದೆನತಾ ಸಂಗಡ ಸಕಲಾ ನದಿಗಳ ಒಳಗೊಂಡು |
ಬಂದಳು ಹೊರನಾಡು ಶೃಂಗೇರಿ, ಕುಲ ಕ್ಷೇತ್ರಕ್ಕೆ ನಿಂದಳು
ಚಂದ್ರಗುತ್ತಿ ತೀರ್ಥಹಳ್ಳಿ ರಾಮೇಶ್ವರದಲ್ಲಿ ||
|| ಜೈ ಜೈ ಮಂಗಳಾ ||

ತುಂಗಭದ್ರೆಯರಿಬ್ಬರೂ ಸ್ನೇಹದಲ್ಲಿ ಬಂದರು
ಸಂಪೆಕಟ್ಟೆ ಸಾರಿ ರಂಬೆಯರಿಬ್ಬರ ಮಧ್ಯದಲಾ
ಶಿವ ಸಂಗಮೇಶ್ವರನಾದ ನಿಂದ ಕ್ಷೇತ್ರವ
ಅಜ ಕಣ್ಣಿನಲ್ಲಿ ನೋಡಿ ಲಿಂಗ ಪ್ರತಿಷ್ಠೆಯ ಹರುಷದಿ ಮಾಡಿ
ರಂಭೆಯರಿಬ್ಬರು ಸಂಗಡದಲ್ಲಿ ಕಾಶಿ
ಗಂಗೆ ಎಂದು ನೆಲೆಸಿದಳಲೀ |
|| ಜೈ ಜೈ ಮಂಗಳಾ ||

ಕಳಸದ ಕಾಳಸೇಶ್ವರ |
ಹೊರನಾಡ ಅನ್ನಪೂರ್ಣೇಯ ಪೂಜಿಪ
ಜನಕೂ ಅಂತೊಪ್ಪದು ತಮ ಕಾಶಿಲಿ ವಾಸವ ಮಾಡಿದ ಫಲ |
ಸೇತ್ವೆಲಿ ಸ್ನಾವ ಮಾಡಿದ ಫಲ |
ಕೋಟಿ ಕನ್ಯಾ ದಾನದ ಫಲವೂ
ಕೋಟಿ ಯಜ್ಞದ ಫಲವೂ ಕೋಟಿ ಅನ್ನದಾನದ ಫಲವು |
ಈ ಮಹಿಮೆಯ ಕೇಳಿಕೇಳಿ ದವರಿಗೆ |
ಈ ಕ್ಷಣದಲ್ಲಿ ಶಿವಸಾಯುಜ್ಯಗಳು |
ಕಾಶಿ ವಿಶ್ವೇಶ್ವರನು ಕಳೆಸೇಶ್ವರನಾಗಿ
ಒಲಿವನು ಅನುಮಾನವೂ ಬೇಡಾ||
|| ಜೈ ಜೈ ಮಂಗಳಾ||

ನಿತ್ಯ ನಿರ್ಮಲ ವೆಂಬ ಹಿರವಾಣದಲೀ
ಮತ್ತಾಮನ ವಂತೆಂಬ ಮಣಿಯ ತುಂಬಿಸುತ್ತ
ಪ್ರಕಾಶಕ್ಕೆ ಬೆಳಗುವ ಜ್ಯೋತಿಯ
ತಂದೆತ್ತಿದರಾರತಿಕಿಯಾ || ಜೈ ಜೈ ಮಂಗಳಾ ||

ಮಂಗಳ ಗಂಗಾಧರನರ್ದಾಂಗಿಗೆ |
ಮಂಗಳ ಸರ್ವರಿಗೂಲಿವ ಕೃಪಾಂಗಿಗೆ.|
ಮಂಗಳ ಗಂಗಾದಡದಲಿ ನೆಲೆಸಿದ ಅಂಬಿಕೆ
ಪರ್ವಗಿಗೇ ದಕ್ಷಿಣಧಿ ಭದ್ರೆಯ ದಡದಲ್ಲಿ
ನೆನಸಿಹ ಅನ್ನಪೂರ್ಣೆಗೆ ||ಜೈ ಜೈ ಮಂಗಳಾ ||