ಅನುಬಂಧ—1
ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಡೆಯುವ ಪೂಜಾ ಪದ್ಧತಿ, ಧಾರ್ಮಿಕ ಆಚರಣೆಗಳು ದಿನನಿತ್ಯದ ಪೂಜಾ ವ್ಯವಸ್ಥೆ ಮತ್ತು ನವರಾತ್ರಿ ಮತ್ತು ವಿಶೇಷ ಉತ್ಸವಗಳು:
ಶ್ರೀ ಕ್ಷೇತ್ರವು ಪ್ರಾತಃಕಾಲ 5:00 ಗಂಟೆಗೆ ಬಾಗಿಲು ತೆರೆಯುವುದರೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭವಾಗುತ್ತದೆ. ಬಾಗಿಲು ತೆಗೆದ ನಂತರ ನಿರ್ಮಾಲ್ಯವನ್ನು ತೆಗೆದು ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ದೀಪಗಳನ್ನು ಹಚ್ಚುತ್ತಾರೆ. ಪ್ರತಿನಿತ್ಯ ಬೆಳಿಗ್ಗೆ ಗರ್ಭಗುಡಿಯ ಶುದ್ದೀಕರಣಕ್ಕಾಗಿ ಪಂಚಗವ್ಯವನ್ನು ಮಾಡಲಾಗುತ್ತದೆ. ಗರ್ಭಗುಡಿಯು ಒಳಗೆ ಹಾಗೂ ಹೊರಗೆ ಫೊಕ್ಷಣೆಯನ್ನು ಮಾಡಿ ಎಲ್ಲಾ ಅರ್ಚಕರು ಪ್ರಶನವನ್ನು ಮಾಡುತ್ತಾರೆ. ತದನಂತರದಲ್ಲಿ ಪೂಜಾ ಸಾಹಿತ್ಯಗಳಾದ ನೀರು, ಗಂಧ, ನೈವೇದ್ಯಕ್ಕೆ ಬೇಕಾದ ಅಕ್ಕಿಯನ್ನು ಸಿದ್ಧಪಡಿಸಲಾಗುತ್ತದೆ.ಪ್ರತಿನಿತ್ಯ ಆರು ಮೂವತ್ತರಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರೀ ಮಾತೆಯ ದರ್ಶನಕ್ಕೆ ಅವಕಾಶವಿರುತ್ತದೆ.ಬೆಳಗ್ಗಿನ ಜಾವ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 9 ಗಂಟೆಯ ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳ್ಳುತ್ತದೆ.ಮೊದಲಿಗೆ ಈ ಉದ್ಭವ ಗಣಪತಿ ಸ್ವಾಮಿಗೆ ಪುರುಷಸೂಕ್ತ ವಿಧಾನದಲ್ಲಿ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಶ್ರೀ ಸೂಕ್ತ ವಿಧಾನದಲ್ಲಿ ಪೂಜೆ, ಅಭಿಷೇಕ,ಶುದ್ಧೋದಕದ ನಂತರ ಕುಂಕುಮಾರ್ಚನೆಯನ್ನು ಮಾಡಲಾಗುತ್ತದೆ. ಗರ್ಭಗುಡಿಯ ಒಳಭಾಗದಲ್ಲಿ ಅರ್ಚಕರು ಶ್ರೀ ಸೂಕ್ತ ವಿಧಾನದ ಪೂಜೆ, ಅನ್ನಪೂರ್ಣಾ ಸಹಸ್ರನಾಮ, ಲಲಿತಾ ಸಹಸ್ರನಾಮ ಇನ್ನಿತರ ಅಷ್ಟೋತ್ತರಗಳನ್ನು ಮಾಡಲಾಗುತ್ತದೆ. ಮಧ್ಯಾಹ್ನದ ಸಪ್ತಶತಿ ಪಾರಾಯಣಪೂರ್ವಕ ಮಹಾಪೂಜೆ, ದೀಪಾರಾಧನೆ ಸಮರ್ಪಣೆಯಾಗುತ್ತದೆ. ಎರಡು ತಿಂಗಳಿಗೊಮ್ಮೆ ಅಮಾಸ್ಯೆಯಂದು ಶ್ರೀ ಮಾತೆಯ ಮೂಲ ಮಂತ್ರದಿಂದ ಕಲಶ ಸ್ಥಾಪನೆ ಮತ್ತು ಕಲಾ ಸಾನ್ನಿಧ್ಯ ಹೋಮವನ್ನು ಮಾಡಿ, ಆ ಕಳಸಗಳಿಂದ ಶ್ರೀಮಾತೆಗೆ ಅಭಿಷೇಕವನ್ನು ಮಾಡಲಾಗುತ್ತದೆ. ಅಭಿಷೇಕದ ನಂತರ ತೀರ್ಥವನ್ನು ದೇವಸ್ಥಾನದ ಒಳ ಮತ್ತು ಹೊರ ಅವರಣದಲ್ಲಿ ಪ್ರೋಕ್ಷಣೆ ಮಾಡಲಾಗುತ್ತದೆ. ಪ್ರತೀ ಶುಕ್ರವಾರದಂದು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ವಿಶೇಷವಾಗಿ ಪಂಚಾಮೃತಾಭಿಷೇಕವನ್ನು ಮಾಡಲಾಗುತ್ತದೆ.ಅಭಿಷೇಕದಲ್ಲಿ ರುದ್ರಪಠಣ ಶ್ರೀ ಸೂಕ್ತ. ಪುರುಷ ಸೂಕ್ತ.ದೇವಿಸೂಕ್ತ ನಾರಾಯಣ ಸೂಕ್ತಗಳನ್ನು ಪಡಿಸಲಾಗುತ್ತದೆ.ಪ್ರತಿನಿತ್ಯ ಬೆಳಗಿನ ಪೂಜೆಯಲ್ಲಿ ಶ್ರೀ ಚಕ್ರಕ್ಕೂ ಮೂಲಮಂತ್ರದಿಂದ ಹಾಲಿನ ಅಭಿಷೇಕ. ಶ್ರೀ ಸೂಕ್ತದಿಂದ ಶುದ್ದೋದಕ್ಕ ನಂತರದಲ್ಲಿ ಕುಂಕುಮಾರ್ಚನೆಯನ್ನು ಸಮರ್ಪಿಸಲಾಗುತ್ತದೆ. ಎಂಬ ಮಾಹಿತಿ ತಿಳಿದುಬಂದಿದೆ.
ರಾಮದೇವರ ಕೋಣೆಯಲ್ಲಿ ಶ್ರೀ ಗಣಪತಿ,ಶ್ರೀ ಸತ್ಯನಾರಾಯಣ,ಶ್ರೀ ಮಹಾಲಕ್ಷ್ಮಿ ಮುಖವಾಡ, ಶ್ರೀ ಗೋಪಾಲಕೃಷ್ಣ,ವಿಷ್ಣು ಸಾಲಿಗ್ರಾಮ, ಶಿವ ಸಾಲಿಗ್ರಾಮ, ಶ್ರೀ ಶಾರದಾಂಬೆ,ದೇವರುಗಳಿಗೆ ನಿತ್ಯ ಪೂಜೆ ನಡೆಯುತ್ತದೆ. ಶಿಲಾ ದೇವಸ್ಥಾನದ ಗರ್ಭಗುಡಿಯ ಹೊರ ಆವರಣದಲ್ಲಿ ದಕ್ಷಿಣಕ್ಕೆ ಶ್ರೀ ಗಣಪತಿ ಸ್ವಾಮಿ ಪಶ್ಚಿಮಕ್ಕೆ ಇಡಾಪಿಂಗಳ, ಉತ್ತರಕ್ಕೆ ಶ್ರೀ ಮಹಾಕಾಳಿ,ಶ್ರೀ ಮಹಾಲಕ್ಷ್ಮಿ ಶ್ರೀ ಮಹಾ ಸರಸ್ವತಿ, ಪೂರ್ವಕ್ಕೆ ಶ್ರೀ ಮಾತೆ ಅಭಿಮುಖವಾಗಿ ಸಿಂಹವಾಹಿನಿ ಮತ್ತು ತುಳಸಿಕಟ್ಟೆ ಕಂಡುಬರುತ್ತದೆ.ಈ ಎಲ್ಲಾ ಕಡೆ ಪ್ರತಿನಿತ್ಯ ಬೆಳಿಗ್ಗೆ ಪೂಜೆ, ನೈವೇದ್ಯ ನಡೆದುಕೊಂಡು ಬರುತ್ತದೆ.
ರಾತ್ರಿಯ ಪೂಜಾ ಕೈಂಕರ್ಯವು ಸಂಜೆ ಆರು ಮೂವತ್ತರಿಂದ ಪ್ರಾರಂಭವಾಗಿ 9 ಗಂಟೆಗೆ ಮಧ್ಯಾಹ್ನದ ಪೂಜೆ ವಿಧಾನಗಳಂತೆಯೇ ಸಂಪನ್ನಗೊಳ್ಳುತ್ತದೆ ಎಂದು ತಿಳಿದು ಬಂದಿದೆ.
ಶ್ರೀ ದೇವಸ್ಥಾನದ ಆವರಣದಲ್ಲಿ ಇರುವ ದೇವರುಗಳಿಗೆ ಬೆಳಿಗ್ಗೆ ಪೂಜೆ ನಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 6:30 ಗಂಟೆಗೆ ಈ ಉದ್ಭವ ಗಣಪತಿ ಸ್ವಾಮಿ ನವಗ್ರಹ ದೇವತೆಗಳು ಮತ್ತು ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ನಡೆಯುತ್ತಿರುವುದು ಕಂಡುಬರುತ್ತದೆ.
ಬೆಳಿಗ್ಗೆ 11:30 ರಿಂದ 1 ಗಂಟೆಯವರೆಗೆ ಸತ್ಯನಾರಾಯಣ ವತ್ರ ಮತ್ತು ಸತ್ಯ ಗಣೇಶ ವ್ರತ ನೆರವೇರುತ್ತದೆ.
ಬೆಳಿಗ್ಗೆ 9:00 ಗಂಟೆಯ ಮಹಾ ಮಂಗಳಾರತಿ ನಂತರ ತುಲಾಭಾರ ಸೇವೆಗೆ ಅವಕಾಶ ಕಲ್ಪಿಸಿದ್ದಾರೆ.
ಬೆಳಿಗ್ಗೆ 7:30ರಿಂದ ಮಧ್ಯಾಹ್ನ 12:30 ರವರೆಗೆ ಅನ್ನಪ್ಯಾಶನ ನಾಮಕರಣ. ಅಕ್ಷರಾಭ್ಯಾಸ ಸಂಸ್ಕಾರ ಸೇವೆಗಳು ನಡೆಯುತ್ತವೆ
ಭಕ್ತಾದಿಗಳು ತಾವು ಸಂಕಲ್ಪಿಸಿದ ಹರಕೆಯು ಪೂರ್ಣಗೊಂಡ ನಂತರ ಈ ಕ್ಷೇತ್ರದಲ್ಲಿ ಹನ್ನೆರಡು ತೆಂಗಿನಕಾಯಿ ಮಹಾ ಗಣಪತಿ ಹೋಮ ನವಗ್ರಹ ಸಹಿತ ಅನ್ನಪೂರ್ಣಾ ಮೂಲ ಮಂತ್ರ ಶ್ರೀಮಾನ್ ಚಂಡಿಕಾ ಹೋಮ ನಡೆಯುತ್ತದೆ.
ಕೃಷಿಕರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ದವಸ ಧಾನ್ಯಗಳನ್ನು ಶ್ರೀ ಮಾತೆಗೆ ಸಮರ್ಪಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿ ಕಂಡುಬರುತ್ತದೆ.
ಭಕ್ತಾದಿಗಳು ಶ್ರೀಮಾತೆಗೆ ಮಡಿಲು ತುಂಬುವ ಹಾರಕೆಯನ್ನು ಸಮರ್ಪಿಸುವ ಪದ್ಧತಿ ಇರುತ್ತದೆ.