ಮನೆ ದೇವಸ್ಥಾನ ಹೊರನಾಡ ಶ್ರೀ ಅನ್ನಪೂರ್ಣೇಶ್ವರಿ: ಪ್ರತಿಷ್ಠಾ ಮಾಹಿತಿ

ಹೊರನಾಡ ಶ್ರೀ ಅನ್ನಪೂರ್ಣೇಶ್ವರಿ: ಪ್ರತಿಷ್ಠಾ ಮಾಹಿತಿ

0

        ದಿ|| ಶ್ರೀ ಡಿ. ವಿ. ಭೀಮಾ ಜೋಯಿಸ್ ರವರ ಆಡಳಿತದಲ್ಲಿ ಮುಳಿಹುಲ್ಲಿನ ದೇವಸ್ಥಾನವನ್ನು ಕೈ ಹಂಚಿನ  ದೇವಾಲಯವನ್ನಾಗಿ ಪರಿವರ್ತಿಸಿ,ಶ್ರೀ ಜಗನ್ಮಾತೆಯ ಪ್ರೇರಣೆಯಂತೆ ಮೇರುತಿ ಪರ್ವತದ ತಪ್ಪಲಿನ ಶಿಲೆಯಲ್ಲಿ ಉದ್ಭವವಾದ ಶ್ರೀ ಮಹಾಗಣಪತಿ ಸ್ವಾಮಿ ವಿಗ್ರಹವನ್ನು ತೆಗೆದುಕೊಂಡು ಬಂದು ಈ ದೇವಾಲಯದಲ್ಲಿ ತಮ್ಮ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಿದರು.

Join Our Whatsapp Group

ತದನಂತರ ಶ್ರೀಮಂತ್ ಶುಕ್ಲ ನಾಮ ಸಂವತ್ಸರ ಪಾಲ್ಗುಣ ಬಹುಳ ಬಿದಿಗೆ 16 -3 -1930 ಭಾನುವಾರದಂದು ನೂತನ ಶಿಖರ ಪ್ರತಿಷ್ಠೆ ಹಾಗೂ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಆ ನಂತರ ದಿ || ಶ್ರೀ ಡಿ.ಬಿ ವೆಂಕಟಸುಬ್ಬಾ ಜೋಯಿಸ್ ರವರು ಅವರ ಆಡಳಿತ ಕಾಲದಲ್ಲಿ ಅವರಿಗೆ ಶ್ರೀ ಮಾತೆಯು ಅನುಗ್ರಹಿಸಿದ ವಿಶೇಷ ಜ್ಞಾನದಿಂದ ಮತ್ತು ಜಗನ್ಮಾತೆಯ ಪ್ರೇರಣಾನುಸಾರವಾಗಿ ಈಶಿಥಿಲಾ ವ್ಯವಸ್ಥೆಗೆ  ಬಂದಿದ್ದ ದೇವಾಲಯದ ಜೀರ್ಣೋದ್ಧಾರ  ಕಾರ್ಯವನ್ನು 1962 ರಲ್ಲಿ ಪ್ರಾರಂಭಿಸಿದರು. ಅವರು ದೇವತಾ ಪ್ರೇರಣಾ ಅನುಸಾರ ಶ್ರೀಚಕ್ರಾತ್ಮಕ ಶಿಲಾಮಯ ದೇವಾಲಯವನ್ನು ನಿರ್ಮಾಣ ಮಾಡಲು ಸಂಕಲ್ಪಿಸಿದರು. ಯಾವುದೇ ರೀತಿಯ ರಸ್ತೆ ಸಂಪರ್ಕ ಇಲ್ಲದ ಆ ಕಾಲದಲ್ಲಿ ಅದಕ್ಕೆ ಅಗತ್ಯವಾದ ಶ್ರೇಷ್ಠ ಗುಣಮಟ್ಟದ ಶಿಲೆಗಳನ್ನು ತೀರ್ಥಹಳ್ಳಿ.ಕಡೂರಿನಲ್ಲಿ ಸಂಗ್ರಹಿಸಿ ಸುಮಾರು 11 ವರ್ಷಗಳ ಕಾಲ ನಿರಂತರವಾಗಿ ವೈವಿಧ್ಯಮಯವಾದ ಕೆತ್ತನೆಗಳೊಂದಿಗೆ ಶಿಲಾಮಯ ಗರ್ಭಗುಡಿಯನ್ನು ನಿರ್ಮಾಣ ಮಾಡಿಸಿದರು. ಶ್ರೀ ಜಗನ್ಮಾತೆಯರನ್ನು ಅನುಜ್ಞೆಯಂತೆ ಏಕಶಿಲೆಯಲ್ಲಿ ಪ್ರಭಾವಳಿ ಸಹಿತ ಆದಿಶಕ್ತಿದೇವಿಯ ವಿಗ್ರಹವನ್ನು ತಮಿಳುನಾಡಿನ ಶಂಕಕೋಟೆ ಎಂಬ ಗ್ರಾಮದಲ್ಲಿ ಶಾಸ್ತ್ರಬದ್ಧವಾಗಿ ಆಕರ್ಷವಾಗಿ ನಿರ್ಮಾಣ ಮಾಡಿಸಿ ಸ್ವಸ್ತಿ ಶ್ರೀಮನ್ನೃ ಶಾಲಿವಾಹನ ಶಕ ವರ್ಷ 1896 ನೇ ಶ್ರೀಮತ್  ಪ್ರಮಾದಿ ನಾಮ ಸಂವತ್ಸರದ ವೈಶಾಖ ಶುದ್ದ ತದಿಗೆ 5 -5 -1973 ಶನಿವಾರದಂದು ಬ್ರಾಹ್ಮೀ ಮೂಹೂರ್ತದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ.ಶ್ರೀ ಚಕ್ರಯಂತ್ರ ಪ್ರತಿಷ್ಠೆ ಶ್ರೀ ಉದ್ಭವಗಣಪತಿ ಸ್ವಾಮಿಯ ಮತ್ತು ಶ್ರೀ ಅನ್ನಪೂರ್ಣೇಶ್ವರೀ ದೇವಿಯ ಮತ್ತು ಶಿಖರ ಪುನಃ ಪ್ರತಿಷ್ಠಾ ಮಹೋತ್ಸವವನ್ನು ದಿ|| ಶ್ರೀ ಡಿ.ಬಿ. ವೆಂಕಟಸುಬ್ಬ ಜೋಯಿಶ್ ಮತ್ತು ಶ್ರೀಮತಿ ನರಸಮ್ಮ ದಂಪತಿಗಳು ಧರ್ಮಶಾಸ್ತ್ರಕ್ಕೆ ಅನುಗುಣವಾಗಿ ಶ್ರೀ ಕ್ಷೇತ್ರದ ವೇದಬ್ರಹ್ಮಶ್ರೀ ತಂತ್ರಿಗಳ, ವಿದ್ವಜ್ವನರ, ಪಂಡಿತರ, ಮಾರ್ಗದರ್ಶನದಂತೆ ತಮ್ಮ ಅಮೃತಹಸ್ತದಿಂದ ನೆರವೇರಿಸಿರುತ್ತಾರೆ.

        ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಪೂಜ್ಯಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ದಿವ್ಯ ಹಸ್ತದಿಂದ ಶ್ರೀ ಜಗನ್ಮಾತೆಗೆ ಸಾಮ್ರಾಜ್ಯ ಪಟ್ಟಾಭಿಷೇಕೋ ತ್ಸವವನ್ನೂ ಕುಲಗುರುಗಳಾದ ಶ್ರೀಮದ್ ರಾಮಚಂದ್ರಾಪುರ ಮಠಾಧೀಶರಾದ ಪೂಜ್ಯಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳವರ ದಿವ್ಯ ಹಸ್ತದಿಂದ ನೂತನ ರಥದ ಲೋಕಾರ್ಪಣೆಯ ಮಹಾ ಕಾರ್ಯವನ್ನೂ ನಡೆಸಿದರು.ಶ್ರೀ ವೆಂಕಟಸುಬ್ಬಾ ಜೋಯಿಸ್ ದಂಪತಿಗಳು ಅಗ್ರಹಾರ ನಿರ್ಮಾಣ, ಚಂದ್ರಸಾಲೆ, ನಿರ್ಮಾಣ, ಪಾಕಶಾಲೆ, ಉಗ್ರಾಣ,ರಥಬೀದಿ, ಶೌಚಾಲಯ, ಭಕ್ತರಿಗಾಗಿ ವಸತಿಗೃಹ, ಆಡಳಿತ ಕಚೇರಿಯ ನಿರ್ಮಾಣ ಮತ್ತಿತರ ಕಾರ್ಯಗಳ ಮೂಲಕ ಇಡೀ ಜೀವಮಾನವನ್ನು ಶ್ರೀ ಮಾತೆಯ ಕೈಂಕರ್ಯಕ್ಕೆ ಸಮರ್ಪಿಸಿಕೊಂಡಿದ್ದಾರೆ.ಅಂತಯೇ 21-2 20054ನೇ ಇಸವಿಯಿಂದ ಹೊರನಾಡು ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರದ ವತಿಯಿಂದ ಬಿಸಿಊಟದ ವ್ಯವಸ್ಥೆ ಪ್ರಾರಂಭವಾಯಿತು. ಅಲ್ಲದೆ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿರುತ್ತಾರೆ.

    ಇಂತಹ ಮಹತ್ತರವಾದ ಕಾರ್ಯ ಸಾಧನೆಯನ್ನು ಮಾಡಿದ ಡಿ.ಬಿ. ವೆಂಕಟಸುಬ್ಬಾ ಜೋಯಿಸರನ್ನು ಈ ಕೆಳಗಿನ ಮಹನೀಯರುಗಳು ವಿಶೇಷವಾಗಿ ಅಭಿನಂದಿಸಿದ್ದಾರೆ.