ಮನೆ ದೇವಸ್ಥಾನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

0

       ಚೈತ್ರ ಮಾಸದಿಂದ ಪಾಲ್ಗುಣದವರೆಗೆ ನಿತ್ಯ ನೈಮಿತ್ತಿಕ ಪೂಜೆಗಳೊಂದಿಗೆ ಬೇರೆ ವಿಶೇಷ ಪೂಜೆಗಳು ಮಾಸಕ್ಕೆ ಹೊಂದಿಕೊಂಡಂತೆ ನಡೆಯುತ್ತವೆ. ವೈಶಾಖ ಮಾಸದಲ್ಲಿ ಅಮ್ಮನವರ ವರ್ಧಂತ್ಯುತ್ಸವ ಮತ್ತು ಪ್ರತಿ ಮೂರು ವರ್ಷಗಳಿಗೊಮ್ಮೆ ಭೂತ ಕೋಲ ನಡೆಯುತ್ತದೆ.

Join Our Whatsapp Group

ಜೇಷ್ಠ ಮಾಸದಲ್ಲಿ ದೈವಗಳ ವಾರ್ಷಿಕ ಪೂಜೆ ನಡೆಯುತ್ತದೆ ಆಷಾಢ ಮಾಸದಲ್ಲಿ ಪ್ರಥಮ ಏಕಾದಶಿ ವಿಶೇಷ ಸತ್ಯನಾರಾಯಣ ವ್ರತ,  ಕೋಟಿಕುಂಕುಮರ್ಚನೆ, ಭಾದ್ರಪದ ಮಾಸದಲ್ಲಿ ಶ್ರೀ ಸ್ವರ್ಣ ಗೌರಿ ವ್ರತ ಹಾಗೂ ಶ್ರೀ ವರಸಿದ್ಧಿ ವಿನಾಯಕ ವ್ರತ ನಡೆಯುತ್ತವೆ.ಅಶ್ವಯುಜ ಮಾಸದಲ್ಲಿ ಶ್ರೀ ಶರನ್ನವರಾತ್ರೀ ಹಾಗೂ ಭೂಮಿ ಹುಣ್ಣಿಮೆ ಪೂಜೆ ಉತ್ಸವಾದಿಗಳು ನಡೆಯುತ್ತವೆ. ಶ್ರೀ ಶರನ್ನವರಾತ್ರಿಯ ಮೂಲಾ ನಕ್ಷತ್ರದಲ್ಲಿ ಏಲಕ್ಕಿ ತಿರುಗಾಟ ಪ್ರಾರಂಭ, ವಿಜಯ ದಶಮಿಯ ದಿನ ವಿಜಯೋತ್ಸವ ಹಾಗೂ ಶ್ರೀಮಾತೆಯ ರಥೋತ್ಸವದ ಶುಭಮುಹೂರ್ತ ನಿರ್ಣಯ ಮಾಡಿ ಶ್ರೀ ಮಾತೆಗೆ ಅರ್ಪಣೆ.ಅಮಾವಾಸ್ಯೆಯಂದು ಪ್ರತಿ ಎರಡು ವರ್ಷಗಳಿಗೊಮ್ಮೆ ಅಂಟಿಗೆ ಪಿಂಟಿಗೆಯ ದೀಪ ತಿರುಗಾಟದ ಕಾರ್ಯಕ್ರಮ, ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ,ಮಾರ್ಗಶಿರ ಮಾಸ ಷಷ್ಟಿಯಂದು ಶ್ರೀ ಮಾತಾ ಪ್ರಸಾದ ವಿತರಣೆ ಭಕ್ತರ ಮನೆಗಳಿಗೆ ತಲುಪಿಸುವ ಕಾರ್ಯ ಆರಂಭ.ಧನುರ್ ಮಾಸದಲ್ಲಿ ಹೊಸಕ್ಕಿ ಪೂಜೆ,ಮಾಘ ಮಾಸದಲ್ಲಿ ಸದ್ಗುರು ಶ್ರೀ ತ್ಯಾಗರಾಜರು ಮತ್ತು ಆದಿಗುರು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ, ಪಾಲ್ಗುಣ ಮಾಸದಲ್ಲಿ ಶ್ರೀಮಾನ್ ಮಹಾರಥೋತ್ಸವ ನಡೆಯುತ್ತದೆ.

      ಹಾಗೆಯೇ ಮಾಸಗಳಿಗೆ ಹೊಂದಿಕೊಂಡಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ವೈಶಾಖ ಮಾಸದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಮಹಿಳಾಭಿವೃದ್ಧಿ ಯೋಜನೆಯಲ್ಲಿ ಹೊಲಿಗೆ ಯಂತ್ರಗಳ ವಿತರಣೆ ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುಚ್ಛಕ್ತಿ ಫಲಕ  ಪತ್ರ ವಿತರಣೆ,ಗೃಹಲಕ್ಷ್ಮಿ ಯೋಜನೆಯಲ್ಲಿ ಉಚಿತ ಹೆಂಚು ವಿತರಣೆ ಹಾಗೂ ಉಚಿತ ಸಾಮೂಹಿಕ ವಿವಾಹ, ಕೃಷಿಕರಿಗೆ ಕೃಷಿ ಉಪಕರಣಗಳು, ಸಮ್ಮೇಳನಗಳು ವೈದ್ಯಕೀಯ ಶಿಬಿರಿಗಳು, ಸಾಮೂಹಿಕ ಬ್ರಹ್ಮೋಪದೇಶ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳು,ಆಷಾಡ ಮಾಸದಲ್ಲಿ ಶ್ರೀ ಪರ್ಜನ್ಯ ಹೋಮ ಮತ್ತು ಜಪ ಆಗಸ್ಟ್ ನಲ್ಲಿ ಶಾಲಾ ಮಕ್ಕಳಿಗೆ ತಟ್ಟೆ ನೋಟಗಳ ವಿತರಣೆ.ಅನ್ನದಾಸೋಹ ಕಾರ್ಯಕ್ರಮ, ಕೃಷಿ ಸಮೃದ್ಧಿ ಯೋಜನೆಯಲ್ಲಿ ಕೃಷಿ ಉಪಕರಣಗಳು ಹಾಗೂ ಕಲ್ಪವೃಕ್ಷ ಸಸಿಗಳ ವಿತರಣೆ.ಅಶ್ವಯುಜ ಮಾಸದಲ್ಲಿ ಧರ್ಮ ಕರ್ತಕರ ಪಟ್ಟಾ ಭಿಷೇಕೋತ್ಸವದ ಅಂಗವಾಗಿ ಶ್ರೀ ಮಾತಾ ಪ್ರಶಸ್ತಿ ಪ್ರಧಾನ, ಕಾರ್ತಿಕ ಮಾಸದಲ್ಲಿ ರಕ್ತದಾನ ಶಿಬರ, ನೇತ್ರ ತಪಾಸಣಾ  ಶಿಬಿರ ಹಾಗೂ ದಂತ  ತಪಾಸಣಾ ಶಿಬಿರಿಗಳು  ಆಯೋಜಿಸಲ್ಪಡುತ್ತದೆ.ಸಾಂಸ್ಕೃತಿಕ ಉತ್ಸವ,ಆರೋಗ್ಯ ತಪಾಸಣಾ ಶಿಬರಿ ಮುಂತಾದ ಹತ್ತು ಹಲವು ಕಾರ್ಯಗಳು ನಿರಂತರವಾಗಿ ನಡೆಯುತ್ತದೆ. ರಥೋತ್ಸವ,ದೀಪೋತ್ಸವ ಮುಂತಾದ ವಿಶೇಷ ಉತ್ಸವಗಳಲ್ಲಿ ಗ್ರಾಮದ ಬಿಟ್ಟ ಸೇವಾ ಕುಟುಂಬದವರಿಂದ, ಆಚಾರ್ಯರಿಂದ,ಬೆತ್ತ ಸಂಗ್ರಹಿಸಿ ತಂದು ಕೊಡುವ ಕುಟುಂಬದವರಿಂದ. ನಾಪಿಕರಿಂದ ಹಿಂದುಳಿದ ಕುಟುಂಬದವರಿಂದ ದೀಪೋತ್ಸವದ ದಳಿ ಹೂಡಿ ತೋರಣ ಕಟ್ಟುವ ಕೆಲಸ,ದೈವಗಳ ಕೋಲದ ಉತ್ಸವದಲ್ಲಿ ಭಾಗಿಗಳಾಗಿ ತಮ್ಮ ಸೇವೆಯನ್ನು ಶ್ರೀಮಾತೆಗೆ ಸಮರ್ಪಿಸಿ ಧನ್ಯರಾಗುತ್ತಾರೆ ಎಂದು ತಿಳಿದು ಬರುತ್ತದೆ.