ಗಜಲಕ್ಷ್ಮಿ ಅಲಂಕಾರ : ಪದ್ಮದಲ್ಲಿ ಉಪವಿಷ್ಟಳಾಗಿ ಪಾರ್ಶ್ವಭಾಗದಲ್ಲಿ ಸೊಂಡಿಲೆನೆತ್ತಿರುವ ಆನೆಗಳಿಂದ ನಮಸ್ಕರಿಸಲ್ಪಡುತ್ತಾ ಮಂದಸ್ಮಿತ ವದನೇ ಯಾಗಿ ಪ್ರಸನ್ನಳಾಗಿರುವ ಶ್ರೀ ಗಜಲಕ್ಷ್ಮಿ ಅಲಂಕಾರವಿದು ಇದರ ಮೂಲಕ ದೇವಿ ಭಕ್ತರಿಗೆ ಧನ ಧಾನ್ಯವನ್ನು ಸುಖ ಸಂಪತ್ತನ್ನು ಕರುಣಿಸುತ್ತಾಳೆ.
ಹೀಗೆ ಮಾಡಲ್ಪಡುವ ಅಲಂಕಾರಗಳನ್ನು ದೇವಿ ಮಹಾತ್ಮೆಯಲ್ಲಿ ಹೇಳಿರುವಂತೆ ಶ್ರೀದೇವಿಯದೆ ಆಗಿರುತ್ತದೆ ಆಕೆ ವಿದ್ಯೆಯನ್ನು ಅನುಗ್ರಹಿಸುವಾಗ ಸರಸ್ವತಿ ಧನ ಧಾನ್ಯದಿ ಸಂಪತ್ತನ್ನು ಅನುಗ್ರಹಿಸುವಾಗ ಮಹಾಲಕ್ಷ್ಮಿ ಅನ್ನ ಪೂರ್ಣಿ, ದುಷ್ಟಸಂಹಾರ ಕಾಲದಲ್ಲಿ ಮಹಾಕಾಳಿ ಭಯವನ್ನು ಹೋಗಲಾಡಿಸುವಾಗ ದುರ್ಗಾಪರಮೇಶ್ವರಿ ಅವತಾರವನ್ನು ತಾಳಿ ಭಕ್ತರನ್ನು ಅನುಗ್ರಹಿಸುತ್ತಾಳೆ.ರೂಪಗಳು ಬೇರೆ ಇದ್ದರೂ ಆಕೆಯ ಚೈತನ್ಯ ಒಂದೇ ಆಗಿರುತ್ತದೆ. ಈ ಅಲಂಕಾರಗಳ ಜೊತೆಗೆ ವೇದ ಪಾರಾಯಣ, ರಾಮಾಯಣ,ಮಹಾಭಾರತ, ಶಂಕರ ದಿಗ್ವಿಜಯ ಸೂತಸಂಹಿತೆ ಲಲಿತೋಪಾಖ್ಯಾನ, ಪ್ರಸ್ಥಾನತ್ರಯ ಭಾಷ್ಯ ಪಾರಾಯಣ ಮಹಾವಿದ್ಯೆ, ಲಕ್ಷ್ಮೀನಾರಾಯಣ ಹೃದಯ, ದುರ್ಗಾ ಸಪ್ತಸತಿ ಮೊದಲಾದ ಪಾರಾಯಣಗಳು ನಡೆಯುತ್ತವೆ. ಜೊತೆಗೆ ಜಪ ತಾಪಗಳು, ಸುವಾಸಿನೀ ಪೂಜೆ,ಕುಮಾರೀ, ಪೂಜೆ, ಪ್ರಸಾದ ವಿನಿಯೋಗ ನಡೆಯುತ್ತದೆ. ಸಂಜೆ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.ಧರ್ಮಕರ್ತರ ಸುತ್ತಲಿನ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ನವರಾತ್ರಿ ಉತ್ಸವದ ಹನ್ನೊಂದನೆಯ ದಿನ ಹೊರನಾಡಿನಲ್ಲಿ ಉತ್ಸವ ನಡೆಯುತ್ತದೆ.ನಂತರ ಶ್ರೀ ಅಮ್ಮನವರ ದೇವಾಲಯದಲ್ಲಿ ಅಷ್ಟಾವಧಾನ ಸೇವೆ ನಡೆಯುತ್ತದೆ.ಕಾರ್ತಿಕ ಶುದ್ಧ ಪ್ರಥಮ ದೀಪಾವಳಿ,ಸಪ್ತಮಿ, ಅಷ್ಟಮಿ, ಉತ್ಥಾನ ದ್ವಾದಶಿ, ಚತುರ್ದಶಿ ಕಾರ್ತಿಕ ಹುಣ್ಣಿಮೆ ಲಕ್ಷದೀಪೋತ್ಸವ ಬಹುಳದ ದಿನಗಳಲ್ಲಿ ಮೇಲೆ ಮಹಾಪ್ರದೋಷ ಮಾರ್ಗಶಿರ ಶುದ್ಧ ಷಷ್ಠಿ ಹುಣ್ಣಿಮೆ ಬಹುಳ ಅಷ್ಟಮಿ ಆರ್ದೋತ್ಸವ, ಮಕರ ಸಂಕ್ರಾಂತಿ ಮಘಾ ಶುದ್ಧದಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳು ಪಾಲ್ಗುಣ ಬಹುಳ ಏಕಾದಶಿ ಹೀಗೆ ವರ್ಷವಿಡಿ ಹೊರನಾಡಿನಲ್ಲಿ ಒಂದಿನಲ್ಲೊಂದು ಕಾರ್ಯಕ್ರಮಗಳು ನಡೆತ್ತವೆ.
ಉದ್ಭವ ಗಣಪತಿ ಎರಡನೆಯ ಬೀಮಜೋಯಿಸರ ಕಾಲ ಮಾನದಲ್ಲಿ ಅವರಿಗೆ ಬೆಳಗಿನ ಜಾವ ಕನಸಿನಲ್ಲಿ ಕಂಡಂತೆ ಮೇರುತಿ ಗುಡ್ಡದ ಬುಡದಲ್ಲಿ ಈಗ ಇರುವ ಉದ್ಭವ ಗಣಪತಿಯ ಕಲ್ಲು ಶಿಲೆ ಕಂಡು ಅದರಲ್ಲಿ ಗಣಪತಿಯು ನನ್ನ ಸನ್ನಿಧಾನವಿದೆ. ನಾನು ನಿನ್ನ ತಾಯಿಯ ಜೊತೆಯಲ್ಲಿ ಬಂದು ನೆಲೆಸುತ್ತಿದ್ದೇನೆ ನನ್ನನ್ನು ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸು ಎಂಬುದಾಗಿ ಹೇಳಿದ ಪ್ರಕಾರ ಅವರು ಆ ಶಿಲೆಯನ್ನು ತಂದು ಅಂದಿನಿಂದ ಪೂಜಿಸುತ್ತಾ ಬಂದಿರುತ್ತಾರೆ.ಈ ಶಿಲೆಯು ಬೆಳೆಯುತ್ತಿದ್ದು ಮೊಟ್ಟಮೊದಲನೆಯದಾಗಿ ಎರಡನೆ ಭೀಮಾ ಜೋಯಿಸರ ಕಾಲದಲ್ಲಿ ಬೆಳ್ಳಿಯ ಕವಚ ಮಾಡಿಸಿದ್ದು ಎರಡನೇ ವೆಂಕಟಸುಬ್ಬಾಜೋಯಿಸರ ಕಾಲದಲ್ಲಿ ಅದು ಕಾಲಕ್ರಮೇಣ ಶಿಲೆ ಬೆಳೆದ ಕಾರಣದಿಂದಾಗಿ ಆ ಕವಚವು ಸಣ್ಣದಾಗಿ ಅವರು 1973ನೇ ಇಸವಿಯಲ್ಲಿ ಹೊಸದಾಗಿ ಅವತ್ತಿನ ಶಿಲೆಯ ಅಳತೆಗೆ ಹೊಸ ಕವಚ ಮಾಡಿಸಿದ್ದು ಅದೂ ಸಹ ಈಗಿನ ಧರ್ಮಕರಾದ ಭೀಮೇಶ್ವರ ಜೋಯಿಸರ ಕಾಲದಲ್ಲಿ ಸಣ್ಣದಾಗಿ ಶಿಲೆ ಬೆಳೆದ ಕಾರಣದಿಂದಾಗಿ ಹೊಸದಾಗಿ ಪುನಃ ಮುಖವಾಡ ಮಾಡಿಸಿರುತ್ತಾರೆ. ಈ ವರೆಗೆ 3 ಸಾರಿ ಶಿಲೆಗೆ ಮುಖವಾಡ ಮಾಡಿಸಿ ದಂತಾಗಿದ್ದು ಈಗ ಈ ಶಿಲೆಯಲ್ಲಿ ಸಂಪೂರ್ಣವಾಗಿ ಗಣಪತಿ ಆಕಾರ, ವಿಚಾರಗಳು ಮೂಡಿ ಬಂದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ.ಕ್ಷೇತ್ರದ ಯಾವುದೇ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಆಯೋಜಿಸುವ ಪೂರ್ವದಲ್ಲಿ ಗಣಪತಿಯಲ್ಲಿ ಧರ್ಮಕರ್ತರು ನಿರ್ವಿಘ್ನವಾಗಿ ನಡೆಯಲು ಅನುಗ್ರಹಿಸಬೇಕೆಂದು ಪ್ರಾರ್ಥಿಸಿ.ಫಲವನ್ನು ಸಮರ್ಪಿಸಿ ನಂತರ ಕಾರ್ಯವನ್ನು ಪ್ರಾರಂಭಿಸುವುದು ರೂಢಿಯಲ್ಲಿರುವುದು ಕಂಡು ಬರುತ್ತದೆ.