ಇತಿಹಾಸ ಹಿನ್ನೆಲೆಯಲ್ಲಿ ಶೃಂಗೇರಿ ಕಳಸ ಹೊರನಾಡು ಪ್ರದೇಶ
ಜೈನ ಧಾರ್ಮಿಕ ರಾಗಿದ್ದ ಈ ರಾಜಮನೆತನದವರ ಕುಲದೇವರು ಕಳಸಾದ ಕಾಳಸೇಶ್ವರ. ವಿಜಯನಗರದ ಸಮಾಂತರಾಗಿ ಆಳ್ವಿಕೆ ನಡೆಸುತ್ತಿದ್ದ ಇವರು ಕಾರ್ಕಳ ಪ್ರದೇಶದಲ್ಲಿ ಬಹುಮಟ್ಟಿಗೆ ಸ್ವತಂತ್ರ ಅತ್ವವನ್ನು ಹೊಂದಿದ್ದರು ಕಳಸ ಪ್ರದೇಶದಲ್ಲಿ ಇವರ ಮೇಲೆ ವಿಜಯನಗರದ ಹೆಚ್ಚಿನ ಹತೋಟಿ ಇದ್ದಂತೆ ತೋರುತ್ತದೆ.
ಕಾರ್ಕಳ ಪ್ರದೇಶದ ಇವರ ಯಾವುದೇ ಶಾಸನಗಳಲ್ಲೂ ವಿಜಯನಗರದ ಅರಸರ ಹೆಸರುಗಳು ಕಂಡುಬರುವುದಿಲ್ಲ.ಆದರೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಲಭ್ಯವಿರುವ ವಿವರ ಹೆಚ್ಚಿನ ಶಾಸನಗಳಲ್ಲೂ ವಿಜಯನಗರದ ಅರಸರ ಹೆಸರುಗಳು ಕಂಡುಬರುವುದಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಭ್ಯವಿರುವ ವಿವರ ಹೆಚ್ಚಿನ ಶಾಸನಗಳಲ್ಲೂ ವಿಜಯನಗರದ ಅರಸರ ಹೆಸರು ಕಂಡುಬರುತ್ತದೆ. ಕ್ರಿಸ್ತಶಕ 1505 ರಿಂದ 1540 ರವರೆಗೆ ಆಡಳಿತ ನಡೆಸಿದ ಇಮ್ಮಡಿ ಭೈರರಸನ ಕಾಲದ ಕಾಲದ ಶಾಸನಗಳು ಕಾರ್ಕಳ ಮತ್ತು ಕಳಸ ಪರಿಸರದಲ್ಲಿ ಬೆಳಕಿಗೆ ಬಂದಿವೆ. ಪ್ರಸ್ತುತ 1516 ಕಳಸದ ಶಾಸನದಲ್ಲಿ ಕಳಸದ ಕಾಳಸಘಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯ ಮತ್ತು ಆ ಸಂದರ್ಭ ದೇವಾಲಯಕ್ಕೆ ನೀಡಲಾದ ದಾನದ ವಿವರಗಳನ್ನು ತಿಳಿಸಲಾಗಿದೆ. ಇಮ್ಮಡಿ ಬೈರರಸ ಒಡೆಯನು ಕಾಳಸೇಶ್ವರ ದೇವಾಲಯದ ಜೀರ್ಣೋದ್ಧಾರ ಮಾಡಿದ ಹಿನ್ನೆಲೆಯಲ್ಲಿ ಇವರು ಶಾಸನದಲ್ಲಿ ವಿಜಯನಗರ ಅರಸ ಕೃಷ್ಣದೇವರಾಯ ತುಳುನಾಡಿನ ಮೇಲೆ ದಾಳಿ ಮಾಡಿದಾಗ ಬೈರರಸ ಒಡೆಯನು ತನ್ನ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ಅನಂತರ ತನ್ನ ಸೇನೆಯೊಂದಿಗೆ ಮುನ್ನಡೆದ ಕೃಷ್ಣದೇವರಾಯನು ಮಂಗಳೂರಿಗೆ ಚಿತ್ತೈಸಿ ಅಲ್ಲಿನ ಭುವನ ಶಾಲೆಯಲ್ಲಿ ಬಿಡು ಬಿಟ್ಟುತ್ತಾನೆ. ಈ ಸಂದರ್ಭದಲ್ಲಿ ತಾನು ಕಳೆದುಕೊಂಡ ರಾಜ್ಯವು ಪುನಃ ತನಗೆ ಪ್ರಾಪ್ತಿಯಾದರೆ ತಾನು ಕಳೇಶ್ವರನಿಗೆ ದೇವಾಲಯ ಜೀರ್ಣೋದ್ಧಾರವನ್ನು ಮಾಡುತ್ತೇನೆಂದು ಹರಕೆ ಹೊತ್ತುಕೊಂಡದ್ದನು ಶಾಸನ ಹೇಳುತ್ತದೆ ಇದೇ ವೇಳೆಯಲ್ಲಿ ನಾಡ ದೇವಿ ಅನ್ನಪೂರ್ಣೆಗೂ ಸಹ ವಿಶೇಷ ಕುಂಕುಮ ಸೇವೆ ಸಲ್ಲಿಸುವುದಾಗಿ ಭೈರರಸ ಹರಕೆ ಹೊತ್ತುಕೊಂಡದ್ದನೆಂದು. ತುಳು ಐತಿಹ್ಯ ಪ್ರಚಲಿತದಲ್ಲಿದೆ. ಕೃಷ್ಣದೇವರಾಯನ ಸೈನ್ಯ ಹಿಂದಿರುಗಿತು. ಇವನಿಗೆ ರಾಜ್ಯ ಪುನಃ ಪಡೆದುದನ್ನು ಶಾಸನವೂಂದು ತಿಳಿಸುತ್ತದೆ. ಈ ಸಂದರ್ಭದಲ್ಲಿ ಸೂರಪ್ಪ ಸೇನಭೋವ ಎಂಬವನು ಕಳಸ ಸೀಮೆ ಪಾರುಪತ್ಯವನ್ನು ನೋಡಿಕೊಳ್ಳುತ್ತಿದ್ದುದು ಕಂಡುಬರುತ್ತದೆ. ಇದೇ ಸೂರಪ್ಪಯ್ಯನ ವಂಶಿಕರನ್ನು ಮುಂದೆ ಕೆಳದಿ ಶಿವಪ್ಪನಾಯಕನು ದಕ್ಷಿಣ ಕನ್ನಡದ ಬೇಕಲ ಮತ್ತು ತಲಕೇರಿ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಆಡಳಿತಕಾರಿಯಾಗಿ ನೇಮಕ ಮಾಡಿಕೊಂಡಿದ್ದನೆಂದು ಇತಿಹಾಸ ಹೇಳುತ್ತದೆ ಈ ಸೂರಪ್ಪಯ್ಯನ್ನು ಅನ್ನಪೂರ್ಣೇಯ ಪರಮ ಭಕ್ತನಾಗಿದ್ದನೆಂದೂ, ತನ್ನ ಕುಟುಂಬದಲ್ಲಿ ಇದ್ದ ಸಮಸ್ಯೆಯನ್ನು ಪರಿಹರಿಸಿಕೊಟ್ಟಲ್ಲಿ ಮೂಗುತಿಯನ್ನು ಮಾಡಿಸಿಕೊಡಬಹುದಾ ಗಾಗಿ ಹರಕೆ ಹೊತ್ತುಕೊಂಡಿದೆನೆಂದು ಐತಿಹ್ಯವೊಂದ ಹೇಳುತ್ತದೆ. ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕೆಳದಿ ಕಾಲದ ಒಟ್ಟು 24 ಶಾಸನಗಳು ದೊರೆತಿವೆ. ಇದಕ್ಕಿಂತ ಹೆಚ್ಚು ಶೃಂಗೇರಿ ಮಠದಲ್ಲಿರುವ ಕಡತಗಳಲ್ಲಿ ನಿರೂಪಗಳು ಲಭ್ಯವಿದೆ ದೊರೆತಿರುವ ಶಾಸನಗಳು ಕ್ರಿಸ್ತಶಕ 1618 ರಲ್ಲಿ ಆಡಳಿತ ನಡೆಸಿದ ಕೆಳದಿ ಹಿರಿಯ ವೆಂಕಟಪ್ಪ ನಾಯಕನ ಕಾಲದಿಂದ ಇಮ್ಮಡಿ ಕ್ರಿ. ಶ. 1738 ರಲ್ಲಿ ಆಡಳಿತ ನಡೆಸಿದ ಇಮ್ಮಡಿ ಸೋಮಶೇಖರ ನಾಯಕನ ಕಾಲದವರೆಗಿನದ್ದಾಗಿವೆ. ಮುಂದುವರಿದು. ಈಚೆಗೆ ಸಂಶೋಧಕ ಶ್ರೀ ಪಾಂಡುರಂಗ ರವರು ಇನ್ನೂ ಹಲವು ಹೊಸ ಶಾಸನಗಳನ್ನು ಬೆಳಕಿಗೆ ತರುವ ಮೂಲಕ ಇತಿಹಾಸಕ್ಕೆ ಸಹಕಾರಿಯಾಗಿದ್ದಾರೆ.