ಉದಯರಾಗ :
ಅವರವರ ಮನಬಯಕೆ ಶೀಘ್ರದಿಂ ಸಿದ್ಧಿಸಲು |
ಜಾಗೃತಯೊಳ್ಹರಸು ತಾಯೇ |ಜಗದಂಬ |
ದಿನ ರಾತ್ರಿಯಲ್ಲಿ ನಿನ್ನ ಧ್ಯಾನ ಬಲಗೊಂಡಿರುವ |
ಜ್ಞಾನವನ್ನು ಅರುಹು ತಾಯೇ |ಜಗದಂಬ | ಜ್ಞಾನವನ್ನು ಅರುಹು ತಾಯೇ ||
ನಿನ್ನ ಪೂಜಿಸಿ ನಮಿಸಿ ಸೇವಿಸಲು ಬಂದಿರುವ |
ರೆಲ್ಲರನ್ನು ಸಲಹು ತಾಯೇ |ಜಗದಂಬ ||
ಚೆನ್ನುಡಿಯ ಕವಿಕಾವ್ಯ ಕಲ್ಪನಾಮಣಿದೇವಿ
ಹೊನ್ನಿ ನ್ಹೊಳೆ ಹರಿಸು ತಾಯೇ | ಜಗದಂಬ | ಹೊನ್ನಿನ್ಹೊಳೆ ಹರಿಸು ತಾಯೇ ||
ಶಿವ ಗೌರಿ ಸಾಮಿಪ್ಯ ಬೆರೆದು ಆನಂದಿಸುವ |
ದೃಢವ್ರತವ ತಿಳಿಸು ತಾಯೇ ಜಗದಂಬ ||
ಭವಕಡಲ ಮಧ್ಯದಲಿ ಕೈ ಬಿಡದಿರೋರ್ವರನು |
ಕಡೆಹಾಯಿಸಿ ಸಲಹು ತಾಯೇ |ಜಗದಂಬ | ಕಡೆಹಾಯಿಸಿ ಸಲಹು ತಾಯೇ ||
ಸಂಜೀವಿನಾಶಯದಿ ಊರ್ವಿಹಿತವನು ಗೈದು |
ಸಂಭ್ರಮದಿ ಸಲಹು ತಾಯೇ |ಜಗದಂಬ |
ಆಂಜನೇಯನು ಆರ್ಯ ಧರ್ಮ ಪರಿಪಾಲಿಸಿದ
ನೀತಿಯನ್ನು ಅರುಹು ತಾಯೇ |ಜಗದಂಬ |ನೀತಿಯನ್ನು ಅರಹು ತಾಯೇ
ಉದ್ಭವದ ಗಣಪತಿಯ ಪೂಜಿಸುತ ವಂದಿಸುತ |
ಆರತಿಯ ಗೈವೆ ತಾಯೇ |ಜಗದಂಬ ||
ಅದ್ಭುತದ ಮಹಿಮೆಗಳ ಅನ್ನಪೂರ್ಣೇಶ್ವರಿಯೇ |
ಮಂಗಳವ ಗೈವೆ ತಾಯೇ |ಜಗದಂಬ | ಮಂಗಳವ ಗೈವೆ ತಾಯೇ ||