೭) ತುಲಾ ರಾಶಿ ಫಲ ವಿಚಾರವು : ಈ ರಾಶಿಗೆ ಶುಕ್ರನು ಸ್ವಾಮಿಯು, ಚರ ಸಂಜ್ಞೆ,
ಪಶ್ಚಿಮ ದಿಕ್ಕು, ಶೂದ್ರ ವರ್ಣ ಹಗಲು ಬಲವುಳ್ಳದು. ಈ ರಾಶಿಯಲ್ಲಿ ಹುಟ್ಟಿದವನು ಶೀಘ್ರ ಕೋಪಿಯು, ಸುಳ್ಳು ಹೇಳಿ ಹಠ ಸಾಧಿಸುವವನು. ಆದ್ದರಿಂದ ಆದಷ್ಟು ದೂರವಾಗಿಯೇ ಇದ್ದು ತನ್ನ ಕಾರ್ಯದಲ್ಲಿ ತಲ್ಲೀನನಾಗುವನು. ಮೇಲಿಂದ ಮೇಲೆ ರೋಗಿಯು ಗಳಿಸಿದ ಹಣವು ಬಹು ದಿನ ಉಳಿಯಲಾರದು. ಆದರೂ ಸಮಸ್ತ ಜನರ ಪ್ರೇಮ ಸಂಪಾದಿಸುವನು, ಮನೆಯಲ್ಲಿ ಮಾತ್ರ ಎಲ್ಲರನ್ನೂ ಅಂಜಿಸಿಕೊಳ್ಳುವವನು, ಅನೇಕ ವ್ಯಾಪಾರಗಳನ್ನು ಚತುರತನದಿಂದ ಮಾಡುವವನು, ಬಂಧು ಮಿತ್ರರಿಗೆ ಕಷ್ಟಕಾಲದಲ್ಲಿ ಸಹಾಯ ಮಾಡುವನು. ದೇವತಾದಿ ಮಂಗಳ ಕಾರ್ಯದಲ್ಲಿ ವಿಶೇಷ ಆಸಕ್ತನು, ಬುದ್ಧಿಶಾಲಿಯಾದ ಈತನು ಕೈಕೆಲಸಗಳಲ್ಲಿಯೂ ಚತುರನು, ದೊಡ್ಡ ನೌಕರಿಗಾಗಿ ಪ್ರಯತ್ನಿಸುವವನೂ ಆಗುತ್ತಾನೆ. ಭಾವಿ ಕಟ್ಟಿಸಿ, ಭೂಮಿ ಸಂಪಾದಿಸಿ ತೋಟಗಾರಿಕೆ ವ್ಯವಸಾಯವನ್ನು ಮಾಡುವವನು. ಮಾತಾ-ಪಿತರನು ಭಯ ಭಕ್ತಿಯಿಂದ ಆರಾಧಿಸತಕ್ಕವನು, ಇಬ್ಬರು ಸ್ತ್ರೀಯರನ್ನು (ಹೆಂಡರು) * ಹೊಂದಿರತಕ್ಕವನು, ಬಂಧು ಬಳಗ ಕಡಿಮೆಯಿದ್ದುವನು, ಸ್ತ್ರೀಯರನ್ನು ಹೆಚ್ಚು ಆಕರ್ಷಿಸುವವನು. ಉದ್ದ ಮೂಗಿನವನಾಗಿರುವ ಈತನು ಒಳ್ಳೇ ಪ್ರಜ್ಞೆಯುಳ್ಳವನೂ ಆಗುತ್ತಾನೆ. ಈತನು ಪಶ್ಚಿಮ ದಿಕ್ಕಿನ ವ್ಯಾಪಾರದಿಂದ ಸಾಕಷ್ಟು ಯಶಸ್ಸನ್ನು ಗಳಿಸುವನು. ಶುಕ್ರವಾರ ಯಾವ ಕಾರ್ಯ ಮಾಡಿದರೂ ಈತನಿಗೆ ಜಯವು.
ಕಂಟಕಾವಾದಿಗಳು : ಜನನವಾದ 16ನೆಯ ದಿನ ಎರಡು ಮೂರು ತಿಂಗಳು ಇಲ್ಲವೇ 16ನೆಯ ತಿಂಗಳುಗಳಲ್ಲಿ ಆಗಾಗ್ಗೆ ಬಾಲಗ್ರಹ ದೋಷದಿಂದ ದೇಹಕ್ಕೆ ಪೀಡೆಯು, ೪ ನೇ ವರ್ಷದಲ್ಲಿ ರೋಗ ಭಯ ಏಳನೇ ವರ್ಷದಲ್ಲಿ ಅಗ್ನಿ ಭಯವೂ 8ನೇ ವರ್ಷದಲ್ಲಿ ಜ್ವರ ಪೀಡೆಯು 12 -16ನೇ ವರ್ಷದಲ್ಲಿ ನೀರಿನ ಕಂಟಕ, ೨೦ ನೇ ವರ್ಷದಲ್ಲಿ ವಾಹನ ಅಪಘಾತ ಭಯ ಇಲ್ಲನೆ ಸರ್ಪಾದಿ ವಿಷ ಜಂತುಗಳ ಭಯ 21- 23ನೇ ವರ್ಷದಲ್ಲಿ ದೇಹ ಪೀಡೆ 51ನೇ ವರ್ಷದಲ್ಲಿ , ಗುರು-ಹಿರಿಯನ ಇಲ್ಲವೆ ಮನೆದೇವರ ಕಾಡಾಟ, 61ರಲ್ಲಿ ಅಪಮೃತ್ಯು ಭಯವು ಇವೆಲ್ಲವುಗಳಿಂದ ಪಾರಾದರೆ ಈ ಜಾತಕನಿಗೆ ರ೫ ವರ್ಷ ಆಯುಷ್ಯ
೮) ವೃಶ್ಚಿಕ ರಾಶಿ ಫಲ ವಿಚಾರವು: ಈ ಲಾರಿಗೆ ಮಂಗಳನು ಅಧಿಪತಿಯು
ಸ್ಥಿರಸಂಜ್ಞೆ, ಉತ್ತರದಿಕ್ಕು, ಕಫಪ್ರಕೃತಿ, ಬ್ರಾಹ್ಮಣ ವರ್ಣ, ರಾತ್ರಿ ಬಲವು ಈ ರಾಶಿಯಲ್ಲಿ ಜನಿಸಿದವನು ಶಾಂತ ಸ್ವಭಾವದವನು ನಿಷ್ಕಪಟೆಯು, ಪ್ರಯಾಣದಲ್ಲಿ ಸುಖ ಅನುಭೋಗಿಸುವನು, ನಡೆ ನುಡಿಯಲ್ಲಿ ಗಂಭೀರ ಸ್ವಭಾವದವನಾದ ಈತನು ಇಬ್ಬರು ಸ್ತ್ರೀಯರನ್ನು ಹೊಂದಿ, ಅನೇಕ ಸೇವಕರನ್ನು ಹೊಂದಿದವನಾಗಿರುತ್ತಾನೆ. ಪರಸ್ಥಿ ಲೋಲಗೂ, ಮಿತ್ರರಲ್ಲಿ ಸುಳ್ಳು ಹೇಳತಕ್ಕವನೂ ಆಗಿರುವನು, ಧೂರ್ತನಾದ ಈತನು ದುಷ್ಟ ಬುದ್ದಿಯವನೂ ಆಗುತ್ತಾನೆ. ಕಳ್ಳರಿಗೆ ಸಹಾಯಕನೂ ಆಗುತ್ತಾನೆ, ಗುಪ್ತ ರೀತಿಯಲ್ಲಿ ಪಾಪ ಕಾರ್ಯ ಮಾಡುವವನು, ವಿಶ್ವಾಸಘಾತಕತನ ಮಾಡಲೂ ಹೇಸದವನು. ಈತನಿಗೆ ಚರ್ಮ ರೋಗದ ಪೀಡೆ ಆಗಾಗ್ಗೆ ತಲೆದೋರುವದು. ಈತನಿಗೆ ಜಾಣ, ಸುಸ್ವಭಾವದವರಾದ ಆಪ್ತರೂ ಸ್ನೇಹಿತರೂ ಇದ್ದರೂ, ಈತನು ತಂದೆ-ತಾಯಿ ಗುರು-ಹಿರಿಯರಿಂದ ದೂರವಾಗಿ ಇರುವನು. ಅಲ್ಪ ಭೋಜನ ಪ್ರೀಯನು. ಆದರೆ ರಾಜಕಾರಣಿಗಳನ್ನು ತನ್ನ ಕೈಗೊಂಬೆಗಳಂತೆ ಕುಣಿಸಬಲ್ಲನು. ಈತನಿಗೆ ಉತ್ತರ ದಿಕ್ಕಿನ ವ್ಯಾಪಾರದಿಂದ ಅಧಿಕ ದ್ರವ್ಯ ಪ್ರಾಪ್ತಿಯು. ಹೊಂಬಣ್ಣದ ಅಗಲವಾದ ಕಣ್ಣುಗಳುಳ್ಳ ಈತನು ಅಗಲವಾದ ಹರವಾದ ಎದೆಯುಳ್ಳವನು. ದುಂಡಾದ ನಡ ತೊಡೆಯುಳ್ಳವನು. ಅಂಗೈಯಲ್ಲಿ ಮತ್ಯ, ವಜ್ರ, ಗರುಡರೇಖೆಯುಳ್ಳವನು. ಮಂಗಳವಾರ ದಿನ ಈ ಜಾತಕನು ಯಾವ ಕೆಲಸ ಕಾರ್ಯಗಳನ್ನು ಮಾಡಿದರೂ ಜಯಪ್ರದವು.
ಕಂಟಕಾದಿಗಳು : ಹುಟ್ಟಿದ ೧ ನೇ ವರ್ಷದಲ್ಲಿ ಜ್ವರಪೀಡೆ, ೩. ನೇ ವರ್ಷದಲ್ಲಿ ಬೆಂಕಿ ಭಯವು, ೫-೭-೮ ರಲ್ಲಿ ಶೀತಜ್ವರ ಭಯ ಇಲ್ಲವೆ ಸಂದುರೋಗ, ೧೩ ನೇ ವರ್ಷದಲ್ಲಿ ಜಲಗಂಡಾಂತರ, ೧೫-೨೫ ನೇ ವರ್ಷದಲ್ಲಿ ಜ್ವರಭಾದೆಯು, ೩೨-೩೫ ನೇ ವರ್ಷದಲ್ಲಿ ಅಂಗ ಪೀಡೆಯು, ೪೫ ನೇ ವರ್ಷದಲ್ಲಿ ಶಸ್ತ್ರ ಭಯವು, ಟಿ. ನೇ ವರ್ಷದಲ್ಲಿ ಅಪಮೃತ್ಯು ಭಯವು. ಇವೆಲ್ಲ ಕಂಟಕಗಳು ಕಳೆದುಳಿದರೆ ಈ ಜಾತಕನಿಗೆ ೭೬ ವರ್ಷ ಆಯುಷ್ಯವು.
೯) ಧನಸ್ಸು ರಾಶಿ ಫಲ ವಿಚಾರವು : ಈ ರಾಶಿಗೆ ಗುರುರಾಯನು ಅಧಿಪತಿ. ಈ
ರಾಶಿಯು ದ್ವಿ-ಸ್ವಭಾವ ಸಂಜ್ಞೆಯುಳ್ಳದ್ದು. ಈ ರಾಶಿಯ ಸ್ಥಾನ ಪೂರ್ವ ದಿಕ್ಕು. ಹಗಲು ಬಲವುಳ್ಳದ್ದಿದ್ದು, ಇದು ಕ್ಷತ್ರಿಯ ವರ್ಣ (ಜಾತಿ) ದ್ದಾಗಿದೆ. ಈ ರಾಶಿಯಲ್ಲಿ ಹುಟ್ಟಿದವನು
ಪಿತ್ತ ಪ್ರಕೃತಿಯವನಾಗಿದ್ದು, ಶೀಘ್ರ ಕೋಪಿಯಾಗುವನು. ಆದರೆ ಸತ್ಯ ಮಾತಾಡುವವನೆಂದು ಪ್ರಸಿದ್ಧನಾಗುವನಲ್ಲದೆ, ಶಿಲ್ಪ ಶಾಸ್ತ್ರದಲ್ಲಿ ಬಲ್ಲಿದನೂ, ಶೂರನೂ, ಧೀರನೂ, ಬುದ್ಧಿಶಾಲಿಯೂ, ಸಾಹಿತ್ಯದಲ್ಲಿ ಪ್ರಸಿದ್ದ ವ್ಯಕ್ತಿಯಾಗುವನು. ಮರ್ಯಾದೆ ಮತ್ತು ಪ್ರತಿಷ್ಠೆ ಹೊಂದಿದ ಈತನು ಶ್ರೀಮಂತನೂ, ತೇಜಸ್ವಿಯೂ, ಪ್ರತಿಷ್ಠಿತ ಜನರಿಂದ ಮನ್ನಣೆ ಪಡೆಯತಕ್ಕವನೂ, ಒಳ್ಳೇ ಗುಣ ರೂಪ ಸಂಪನ್ನರಾದ ಗಂಡು-ಹೆಣ್ಣು ಸಂತಾನಗಳುಳ್ಳವನೂ, ಮಹತ್ವದ ಬೆಲೆಯುಳ್ಳ ವಸ್ತುಗಳನ್ನು ಸಂಗ್ರಹಿಸುವವನೂ, ಸಭೆ-ಸಮಾರಂಭಗಳಲ್ಲಿ ಅಸ್ಟಲಿತವಾಗಿ ಮಾತನಾಡುವ ಕಲೆಯನ್ನು ಸಾಧಿಸಿಕೊಂಡಿರುವವನೂ, ಗುರುದೇವತಾ ಕಾರ್ಯದಲ್ಲಿ ಭಕ್ತಿಯುಳ್ಳವನೂ, ದಾನ ಧರ್ಮ ಕಾರ್ಯದಲ್ಲಿ ಸದಾ ಮೊದಲಿಗನಾಗಿಯೂ ಪ್ರಸಿದ್ಧನಾಗುವನು. ಈತನು ಮೂವರು ಸ್ತ್ರೀಯರನ್ನು ಮದುವೆಯಾಗುವನು. ಈತನಿಗೆ ನೌಕರಿಯಿಂದ ಸುಖವಾಗುವದು. ಸ್ವಂತ ವ್ಯಾಪಾರದಿಂದಲೂ ಅಧಿಕ ಧನ ಲಾಭ ಸಂಗ್ರಹಿಸಬಲ್ಲನು. ಈತನಿಗೆ ಪಿತ್ರಾರ್ಜಿತ ಆಸ್ತಿ ಧನಲಾಭವಿದೆ. ಉದ್ದ ಮುಖವುಳ್ಳವನು, ಕೋಮಲನು. ಆದರೆ ಅಧಿಕಾರಯುತ ಕಂಠವುಳ್ಳವನು, ದಪ್ಪವಾದ ಹಲ್ಲು, ಉದ್ದನ್ನು ಮೂಗುವುಳ್ಳವನು. ದೊಡ್ಡ ಕಿವಿಗಳುಳ್ಳ ಈತನು ಸ್ಕೂಲದೇಹಿಯಾಗಿರುವನು. ಪೂರ್ವ ದಿಕ್ಕಿನ ವ್ಯಾಪಾರದಿಂದ ಈತನಿಗೆ ಯಥೇಚ್ಚ ಲಾಭವಿದೆ. ಆಪ್ತೇಷ್ಠರಿಂದ ದೂರ ಇರತಕ್ಕವನು. ಈ ಜಾತಕನು ಗುರುವಾರ ಯಾವದೇ ಕಾರ್ಯ ಮಾಡಿದರೂ ಜಯ ಹಾಗೂ ಉತ್ತಮ ಲಾಭ, ಯಶಸ್ಸು ಲಭಿಸುತ್ತದೆ. ಈತನ ಮರಣ, ಭಾವಿ-ತೋಟ ಇಲ್ಲವೆ ದೇವಸ್ಥಾನ ಮೊದಲಾದ ಪವಿತ್ರ ಸ್ಥಾನಗಳಲ್ಲಾದೀತು.
ಕಂಟಕಾದಿಗಳು : ಈ ಜಾತಕನಿಗೆ ೧ ನೇ ವರ್ಷದಲ್ಲಿ ನಾನಾ ರೀತಿಯಲ್ಲಿ ದೇಹಪೀಡೆ.
೩-೯-೧೧-೧೬ ನೇ ವರ್ಷದಲ್ಲಿ ಜ್ವರತಾಪ, ನೇತ್ರಪೀಡೆ, ೨೪ ನೇ ವರ್ಷದಲ್ಲಿ ನೀರಿನ ಗಂಡಾತಂತರ ಯೋಗ, ೩೬ ನೇ ವರ್ಷದಲ್ಲಿ ಅಂಟುರೋಗ, ೪೭-೫೭-೬೭ ನೇ ವರ್ಷದಲ್ಲಿ ಸರ್ಪಾದಿ ವಿಷ ಜಂತುಗಳ ಭಯ ಇಲ್ಲವೆ ನೀರಿನ ಕಂಟಕ ಯೋಗವಿದೆ. ಇವೆಲ್ಲ ಕಂಟಕಾದಿಗಳನ್ನು ದಾಟಿದರೆ ೮೬ ವರ್ಷ ಆಯುಷ್ಯವು.














