ಆರ್ದ್ರಾ ನಕ್ಷತ್ರದ ಕನ್ಯೆಗೆ :
ಭರಣಿ ಕೃತಿಕಾ ಎರಡು ಮೂರು ನಾಲ್ಕನೇ ಚರಣ,ರೋಹಿಣಿ, ಮೃಗಶಿರಾ, ಆರ್ದ್ರಾ,ಮಘಾ, ಉತ್ತರಾ, ಪಾಲ್ಗುಣಿ, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ,ವಿಶಾಖಾ, ಅನುರಾಧಾ, ಉತ್ತರಾಷಾಡಾ, ಎರಡು ಮೂರು ನಾಲ್ಕನೇ ಚರಣ, ಪೂರ್ವಾಷಾಡಾ, ಒಂದು ಎರಡು ಮೂರು ನೇ ಚರಣ, ಧನಿಷ್ಠಾ, ರೇವತಿ.
ಆರ್ದ್ರಾ ನಕ್ಷತ್ರದ ವರನಿಗೆ :
ಕೃತಿಕಾ ಎರಡು ಮೂರು ನಾಲ್ಕು ನೇ ಚರಣ, ರೋಹಿಣಿ, ಆರ್ದ್ರಾ, ಪುನರ್ವಸು ಒಂದು, ಎರಡು,ಮೂರು ನೇ ಪಾದ ಪುಷ್ಯ,ಆಶ್ಲೇಷಾ, ಮಘಾ, ಪೂರ್ವಾ ಪಾಲ್ಗುಣಿ, ಉತ್ತರಾ, ಹಸ್ತಾ, ಚಿತ್ತಾ,ಸ್ವಾತಿ, ವಿಶಾಖಾ ಒಂದು, ಎರಡು, ಮೂರು, ನೇ ಚರಣ ಅನುರಾಧ ಉತ್ತರಾಷಾಢಾ, ಧನಿಷ್ಠಾ, ಉತ್ತರಾಭಾದ್ರಪದಾ.
ಆರ್ದ್ರಾ ನಕ್ಷತ್ರದವರ ಜನನಕ್ಕೆ ಶಾಂತಿ :
ನಮಸ್ತೇ ರುದ್ರ ಮನ್ಯವ್ಯ *ಉತೋತ್ಯ ಇಷವೇನಮಃ |
*ಬಾಹುಬ್ಯಾ ಮುತತೇ ನಮಃ ||
ಈ ನಕ್ಷತ್ರದಲ್ಲಿ ಶಿಶುವಿನ ಜನನ ವಾದಾಗ ಈ ಮಂತ್ರವನ್ನು ತಾಯ್ತಂದೆರು ಒಂದು ಮಾಲೆಯ ಜಪಿಸಿ,ಹಕ್ಕಿ, ಬೆಲ್ಲ ಮತ್ತು ಹೆಸರುಕಾಳನ್ನು ಯಥಾ ಶಕ್ತಿ ದಾನ ನೀಡಬೇಕು. ಇದರಿಂದ ನಕ್ಷತ್ರ ದೋಷ ಶಾಂತವಾಗುತ್ತದೆ.
ಯಂತ್ರ : ಸರ್ವ ಪ್ರಥಮ ಯಂತ್ರವನ್ನು ಸರ್ವ ಪತ್ರದ ಮೇಲೆ ಉತ್ಕೀರ್ಣಗೊಳಿಸಬೇಕು.
ನಮಃ ಶಂಕರಾಯ ಚ ಮಯಸ್ಕರಾಯ ಚ |
ನಮಃ ಶಿವಾಯ ಚ ಶಿವತರಾಯ ಚ ||
ಯಂತ್ರಕ್ಕೆ ಗಂಧ ಪುಷ್ವಾದಿಗಳಿಂದ ಪೂಜೆ ಸಲ್ಲಿಸಿ, ದಶಾಂಗ ಧೂಪ ಅರ್ಪಿಸಬೇಕು. ಈ ಮಂತ್ರವನ್ನು ಒಂದು ಸಹಸ್ರ ಸಲ ಜಪ ಮಾಡಬೇಕು. ಬಿಲ್ವಪತ್ರೆ, ನಿಂಬುಪತ್ರೆ, ಅರಳಿ ಕಾಷ್ಟದಿಂದ ಹೋಮ ಮಾಡಿ, ಪಾಯಸ ಅನ್ನದ ನೈವೇದ್ಯ ಅರ್ಪಿಸಿ, ಮೊಸರನ್ನದ ಬಲಿ ನೀಡಬೇಕು. ನಂತರ ಯಂತ್ರ ಧಾರಣ ಮಾಡಬೇಕು. ಇದರಿಂದ ನಕ್ಷತ್ರದ ಸರ್ವದೋಷಗಳು ಶಮನವಾಗಿ ಸುಖ ಶಾಂತಿ ಲಭಿಸುವುದು.