ಮನೆ ರಾಜಕೀಯ ಪಕ್ಷಕ್ಕೆ ಬರುವವರ ಜಾತಕ, ಕುಂಡಲಿ ನೋಡಕ್ಕಾಗಲ್ಲ: ಸಂಸದ ಪ್ರತಾಪ್ ಸಿಂಹ

ಪಕ್ಷಕ್ಕೆ ಬರುವವರ ಜಾತಕ, ಕುಂಡಲಿ ನೋಡಕ್ಕಾಗಲ್ಲ: ಸಂಸದ ಪ್ರತಾಪ್ ಸಿಂಹ

0

ಮೈಸೂರು(Mysuru): ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಬಂದವರನ್ನು ಶಾಲು ಹಾಕಿ ಸ್ವಾಗತ ಮಾಡಿದೆ. ಅವರ ಕುಂಡಲಿ, ಜಾತಕ ನೋಡಿ ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಲ್ಲಿ ಮಾತನಾಡಿದ ಅವರು, ರೌಡಿಗಳನ್ನ ಇಟ್ಟುಕೊಂಡು ರಾಜಕಾರಣ ಮಾಡುವ ಕಾಲ ಹೋಯ್ತು. ಕೊತ್ವಾಲ್, ಜಯರಾಜ್, ಆಯಿಲ್ ಕುಮಾರ್’ನನ್ನು ಇಟ್ಟುಕೊಂಡು ರಾಜಕಾರಣ ಮಾಡಿದ್ದು ಯಾರು? ಎನ್ನುವ ವಿಚಾರ ಇಡೀ ರಾಜ್ಯಕ್ಕೆ ಗೊತ್ತಿದೆ. ರೌಡಿಗಳನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ಸಾಕಷ್ಟು ಸಶಕ್ತವಾಗಿದೆ ಎಂದು ಹೇಳಿದರು.

2014ರಿಂದ ಇಲ್ಲಿ ರಾಜಕಾರಣ ಮಾಡ್ತಿದ್ದೇನೆ. ತಮ್ಮದೇನಿದ್ದರೂ ಅಭಿವೃದ್ಧಿ ರಾಜಕಾರಣ. ಮೋದಿ ಸರ್ಕಾರದಲ್ಲಿ ಭಯೋತ್ಪಾದಕರನ್ನು ಬಿಟ್ಟಿಲ್ಲ. ಇನ್ನೂ ರೌಡಿಗಳನ್ನು ಬಿಡುತ್ತಾರಾ ಎಂಬ ಭಯದಿಂದ ಎಲ್ಲಾ ರೌಡಿಗಳು ಮನಃ ಪರಿವರ್ತನೆಯಾಗಿ ಸಮಾಜ ಸೇವೆಗೆ ಬರ್ತಿದ್ದಾರೆ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಬಾಯಿ ಮುಚ್ಚಿಸಿದ್ದೇವೆ. ನಮಗೆ ರೌಡಿಗಳ ಅವಶ್ಯಕತೆ ಇಲ್ಲ, ಎಚ್’ಡಿ ಕೋಟೆ ನನ್ನ ಕ್ಷೇತ್ರಕ್ಕೆ ಬರಲ್ಲ. ಪಾರ್ಟಿ ಹೇಳಿದ ಮೇಲೆ ಬಿಜೆಪಿ ಶಾಲು ಹಾಕಿ ಹೊಸ ಕಾರ್ಯಕರ್ತರನ್ನು ಕರೆದುಕೊಂಡಿದ್ದೇನೆ. ನನಗೆ ರೌಡಿಗಳ ಅವಶ್ಯಕತೆ ಇಲ್ಲ, ನನ್ನದು ಅಭಿವೃದ್ಧಿ ರಾಜಕಾರಣ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯೇ ನಾನು ಗೆದ್ದು ಬಂದಿದ್ದೇನೆ. ನಮಗೆ ರೌಡಿಗಳು ಬೇಕಿಲ್ಲ. ಇದನ್ನೇ ದೊಡ್ಡ ವಿಚಾರ ಮಾಡೋದು ಬೇಡ. ಕಾಂಗ್ರೆಸ್’ನದ್ದು ರೌಡಿ ಸಂಸ್ಕೃತಿ ಎಂದು ಕಿಡಿಕಾರಿದರು.

ಹಿಂದಿನ ಲೇಖನಹುಡುಗಿಯರೇ, ಡೇಟಿಂಗ್ ಮಾಡುವಾಗ ಅಕ್ಕ-ತಂಗಿ ಇರುವ ಹುಡುಗರನ್ನೇ ಆಯ್ಕೆ ಮಾಡಬೇಕಂತೆ
ಮುಂದಿನ ಲೇಖನವಿಕಲಚೇತನರಿಗೆ 5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ:  ಸಿಎಂ ಬೊಮ್ಮಾಯಿ