ಮನೆ ರಾಜ್ಯ ಮಂಡ್ಯದಲ್ಲಿ ಭೀಕರ ಅಪಘಾತ: ಐದು ಮಂದಿ ದಾರುಣ ಸಾವು

ಮಂಡ್ಯದಲ್ಲಿ ಭೀಕರ ಅಪಘಾತ: ಐದು ಮಂದಿ ದಾರುಣ ಸಾವು

0

ಮಂಡ್ಯ(Mandya): ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಸ್ಥಳದಲ್ಲಿ ಐದು ಮಂದಿ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲ್ಲೂಕಿನ ಬೆಂಗಳೂರು-ಮಂಗಳೂರು ಹೆದ್ದಾರಿಯ ಎ.ನಾಗತಿಹಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.

ಇನ್ನೊವಾ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ತಮಿಳುನಾಡು ಮೂಲದ ಇನ್ನೊವಾ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರ್ ಮೇಲೆ ಬಿದ್ದಿದೆ. ಸ್ವಿಫ್ಟ್ ಕಾರ್’ನಲ್ಲಿದ್ದ ಹಾಸನ ಮೂಲದ ಮೂವರು ಹಾಗೂ ಇನ್ನೊವಾ ಕಾರ್’ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎರಡು ಕಾರಿನಲ್ಲಿದ್ದವರ ಪೈಕಿ ನಾಲ್ಕು ಪುರುಷರು ಹಾಗು ಓರ್ವ ಮಹಿಳೆ ಸಾವನ್ನಪ್ಪಿದ್ದು, ಎರಡು ಕಾರಿನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರ ಹಾಗೂ ಗಾಯಾಳುಗಳ ವಿವರ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತರ ಮಾಹಿತಿ ಕಲೆ ಹಾಕುತ್ತಿದ್ದು, ಬಿಂಡಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಪಕ್ಷ ಸೂಚಿಸಿದರೆ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಯಲು ಸಿದ್ದ: ಬಿ.ವೈ.ವಿಜಯೇಂದ್ರ
ಮುಂದಿನ ಲೇಖನಅತ್ಯಾಚಾರ ಎಂಬುದು ಕಾನೂನು ಪದ; ವೈದ್ಯಾಧಿಕಾರಿ ಮಾಡುವ ರೋಗ ನಿರ್ಣಯವಲ್ಲ: ಬಾಂಬೆ ಹೈಕೋರ್ಟ್