ಮನೆ ರಾಷ್ಟ್ರೀಯ ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: 10 ಮಂದಿ ಸಾವು, 16 ಮಂದಿಗೆ ಗಾಯ

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: 10 ಮಂದಿ ಸಾವು, 16 ಮಂದಿಗೆ ಗಾಯ

0

ಮಹಾರಾಷ್ಟ್ರ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್​ ಮತ್ತು ಇತರೆ ವಾಹನಗಳ ಮೇಲೆ ಹರಿದು ಪರಿಣಾಮ ಸಂಭವಿಸಿದ ಸರಣಿ ಭೀಕರ ಅಪಘಾತದಲ್ಲಿ 10 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

Join Our Whatsapp Group

ಗಡಿಭಾಗದ ಪಲಾಸ್ನೇರ್ ಗ್ರಾಮದ ಮುಂಬೈ- ಆಗ್ರಾ ಹೆದ್ದಾರಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದು, ಅವರನ್ನು ಶಿರಪುರ ಕಾಟೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ವಂಡರ್​ ಸಿಮೆಂಟ್​ ಕಂಪನಿಯ ಜಲ್ಲಿ ಕಲ್ಲು ತುಂಬಿದ್ದ ಕಂಟೈನರ್​ ನಿಯಂತ್ರಣ ಕಳೆದುಕೊಂಡು ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಇತರ ವಾಹನಗಳ ಮೇಲೂ ಹರಿದಿದೆ. ಅಷ್ಟಕ್ಕೆ ನಿಲ್ಲದ ಅದು ಹೆದ್ದಾರಿ ಬಳಿ ಇದ್ದ ಸಣ್ಣ ಹೋಟೆಲ್​ ಒಳಗೆ ನುಗ್ಗಿದೆ. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿದೆ. ಮೊದಲು ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದರು.

ಗಂಭೀರ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿದಾಗ ಮತ್ತೆ ಮೂವರು ಸಾವನ್ನಪ್ಪಿದ್ದಾರೆ.ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು ಪೊಲೀಸರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಕಂಟೈನರ್ ​ನಲ್ಲಿದ್ದ ಜಲ್ಲಿ ಕಲ್ಲು ಹೆದ್ದಾರಿ ಮೇಲೆ ಬಿದ್ದಿದ್ದು ಒಂದು ಪಥದ ಸಂಚಾರ ಸ್ಥಗಿತಗೊಂಡಿದೆ. ಬಂದ್ ಆಗಿರುವ ರಸ್ತೆಯನ್ನು ಜನರೇ ಕ್ಲಿಯರ್​ ಮಾಡುತ್ತಿದ್ದಾರೆ.

ದುರ್ಘಟನೆಯಲ್ಲಿ ಕಂಟೈನರ್ ಡಿಕ್ಕಿ ಹೊಡೆದ ಎಂಎಚ್ 18ಬಿಆರ್ 5057 ನಂಬರಿನ ಕಾರಿನಲ್ಲಿ ಪತಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಚಾಲಕ ಇದ್ದರು. ಪತಿ, ಮಕ್ಕಳು ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದರೆ, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕಂಟೈನರ್​, ಕಾರು, ಹಲವು ಬೈಕ್ ಗಳು ನುಜ್ಜುಗುಜ್ಜಾಗಿವೆ.

ಹಿಂದಿನ ಲೇಖನಗ್ಯಾರಂಟಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
ಮುಂದಿನ ಲೇಖನಕಾಂಗ್ರೆಸ್ ಕಾರ್ಯಕ್ರಮಗಳನ್ನು ಬಿಜೆಪಿಯವರೇ ಜನರಿಗೆ ತಲುಪಿಸುತ್ತಿದ್ದಾರೆ: ಡಿ.ಕೆ ಶಿವಕುಮಾರ್