ತಿರುವನಂತಪುರ: “ತಂದೆ-ತಾಯಿ ದೇವರು ಸಮಾನ” ಎನ್ನುವ ಮಾತು ಎಷ್ಟೋ ಶತಮಾನಗಳಿಂದಲೂ ನಮ್ಮ ಸಂಸ್ಕೃತಿಯಲ್ಲಿ ಹೆಮ್ಮೆಪಡುವ ಅಂಶವಾಗಿದೆ. ತಿರುವನಂತಪುರದಲ್ಲಿ ನಡೆದ ಘಟನೆ ಸಮುದಾಯವನ್ನು ನಿಬ್ಬೆರಗಾಗಿಸಿದೆ.
ಮದ್ಯದ ಅಮಲಿನಲ್ಲಿ ತನ್ನ ತಾಯಿಯನ್ನು ತುಳಿದು ಕೊಂದ ಮಗನ ಕ್ರೂರತೆ ತಿರುವನಂತಪುರ ಜಿಲ್ಲೆಯ ತೆಕ್ಕಡ ಎಂಬ ಸ್ಥಳದಲ್ಲಿ ನಡೆದ ಈ ಘಟನೆ, ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದಾಗಿದೆ. 85 ವರ್ಷದ ಓಮನಾ ಎಂಬ ಮಹಿಳೆಯು ತನ್ನ ಮಗ ಮಣಿಕಂದನ್ ಕೈಯಿಂದ ಜೀವವನ್ನೇ ಕಳೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ರಂದು 10.30 ರ ಸುಮಾರಿಗೆ ಮಣಿಕಂದನ್ ಮದ್ಯದ ಅಮಲಿನಲ್ಲಿದ್ದನು. ಕುಡಿದ ಮತ್ತಿನಲ್ಲಿದ್ದ ಮಣಿಕಂದನ್ ತನ್ನ ತಾಯಿಯನ್ನು ಒದ್ದಿದ್ದಾನೆ.
ಮಗನಿಂದ ಥಳಿತಕ್ಕೊಳಗಾದ ಓಮನಾಳನ್ನು ಸ್ಥಳೀಯರು ತಕ್ಷಣ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ರಾತ್ರಿ 11 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿದರು. ಮಣಿಕಂದನ್ ಹೊಡೆದ ಪರಿಣಾಮ ಓಮನ ಮೂಳೆಗಳು ಮುರಿದಿವೆ ಎಂದು ವೈದ್ಯರು ತಿಳಿಸಿದ್ದಾರೆ.ಸದ್ಯ ವಟ್ಟಪ್ಪರ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಕುರಿತಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, “ಇಂತಹ ದುಷ್ಕೃತ್ಯ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂಬ ಮನವಿಯನ್ನು ಸಲ್ಲಿಸಿದ್ದಾರೆ.














