ಮನೆ ಸುದ್ದಿ ಜಾಲ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

0

ಮಂಡ್ಯ: 2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು ಮಂಡ್ಯ ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳ ಅಡಿ ವಿವಿಧ ಕಾರ್ಯಕ್ರಮಗಳಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಗಾಂಶ ಬಾಳೆ, ಕಂದು ಬಾಳೆ ಮತ್ತು ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ, ತರಕಾರಿ ಬೆಳೆಗಳಿಗೆ ನೆಲಹೊದಿಕೆ (ಪ್ಲಾಸ್ಟಿಕ್ ಹೊದಿಕೆ), ನೀರು ಸಂಗ್ರಹಣೆ ಮಾಡಲು ಕೃಷಿಹೊಂಡ, ತೋಟಗಾರಿಕೆ ಬೇಸಾಯಕ್ಕಾಗಿ ಅಗತ್ಯವಿರುವ ವಿವಿಧ ಯಂತ್ರೋಪಕರಣಗಳ ಖರೀದಿ, ತೋಟಗಾರಿಕೆ ಬೆಳೆಗಳ ಕೋಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್ ಹೌಸ್ ಘಟಕ, ಈರುಳ್ಳಿ ಶೇಖರಣೆ ಘಟಕ ನಿರ್ಮಾಣ ಮಾಡಲು ಹಾಗೂ ಹನಿ ನೀರಾವರಿ ಯೋಜನೆಯಡಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಮೊದಲು 2 ಹೆಕ್ಟೆರ್ ಗೆ ಎಲ್ಲಾ ವರ್ಗದ ರೈತರಿಗೆ ಶೇ. 90 ರಷ್ಟು ಹಾಗೂ ಉಳಿದ 3 ಹೆಕ್ಟೆರ್ ಗೆ ಶೇ. 45 ರಷ್ಟು ಸಹಾಯಧನ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೇಂದ್ರ ಪುರಷ್ಕೃತ ರಾಷ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ, ನಿರ್ವಹಣೆ, ಅಂತರ ಬೆಳೆ, ಕೋಳವೆಬಾವಿ ಮತ್ತು ಡೀಸೇಲ್ ಪಂಪ್ ಸೆಟ್ ಖರೀದಿಸಲು ಸಹಾಧನವನ್ನು ಎಲ್ಲಾ ವರ್ಗದ ರೈತರಿಗೆ ನೀಡಲಾಗುವುದು.

ಅರ್ಜಿಯೊಂದಿಗೆ ಪಹಣಿ (ಆರ್.ಟಿ.ಸಿ.), ಆಧಾರ್ ಕಾರ್ಡ್ ನಕಲು ಪ್ರತಿ, ಬ್ಯಾಂಕ್ ಪಾಸ್ ಬುಕ್ ನಕಲ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೋ, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಮಾತ್ರ) ದಾಖಲೆಗಳನ್ನು ನೀಡಬೇಕಗಿದೆ. ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಮಂಡ್ಯ ಕಚೇರಿಗೆ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಶ್ರೀಧರ್ ಕೆ.ಎಸ್. ಸಹಾಯಕ ತೋಟಗಾರಿಕೆ ಅಧಿಕಾರಿ ಕಸಬಾ ಹೋಬಳಿ -9591307753, ಶ್ರೀಧರ್ ಕೆ.ಎಸ್. ಸಹಾಯಕ ತೋಟಗಾರಿಕೆ ಅಧಿಕಾರಿ ಕೊತ್ತತ್ತಿ ಹೋಬಳಿ -9591307753, ಕಿರಣ್ ಹೆಚ್.ಎಸ್. ಸಹಾಯಕ ತೋಟಗಾರಿಕೆ ಅಧಿಕಾರಿ ದುದ್ದ ಹೋಬಳಿ -9611730343, ಲಂಕೇಶ್ ಎ.ಆರ್. ಸಹಾಯಕ ತೋಟಗಾರಿಕೆ ಅಧಿಕಾರಿ ಕೆರಗೋಡು ಹೋಬಳಿ-9740152186, ನಾಗರಾಜು ಕೆ.ಪಿ. ತೋಟಗಾರಿಕೆ ಸಹಾಯಕರು (ಪ್ರಭಾರೆ) ಬಸವರಾಳು ಹೋಬಳಿ-9845193234, ಕಛೇರಿ ದೂರವಾಣಿ ಸಂಖ್ಯೆ – 08232 297098 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.