ಮನೆ ಆರೋಗ್ಯ ಬಿಸಿ ಬಿಸಿ ಖರ್ಜೂರ ಹಾಲು ಆರೋಗ್ಯಕ್ಕೆ ಒಳ್ಳೆಯದು

ಬಿಸಿ ಬಿಸಿ ಖರ್ಜೂರ ಹಾಲು ಆರೋಗ್ಯಕ್ಕೆ ಒಳ್ಳೆಯದು

0

ಈಗ ಮಳೆಗಾಲ ನಂತರ ಬರುವುದೇ ಚಳಿಗಾಲ. ಆದರೂ ಕೂಡ ಈಗ ಒಮ್ಮೊಮ್ಮೆ ಚಳಿ ಹೇಗೆ ಬರುತ್ತದೆ ಎಂದು ನೆನಪಿಸುತ್ತದೆ. ಚಳಿಗಾಲದ ಸಮಯ ಬಂದಾಗ ನಾವು ನಮ್ಮ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಅನೇಕ ತಯಾರಿಗಳನ್ನು ಮಾಡಿಕೊಳ್ಳುತ್ತೇವೆ.

ಆಹಾರ ಪದ್ಧತಿಯಲ್ಲಿ ಸಹ ಕೆಲವೊಂದು ಹೊಸ ಬದಲಾವಣೆಗಳನ್ನು ತಂದುಕೊಳ್ಳುವುದರಿಂದ ಲಾಭವಿದೆ. ಅಂತಹ ಒಂದು ಬದಲಾವಣೆಯಲ್ಲಿ ಖರ್ಜೂರ ಮತ್ತು ಹಾಲಿನ ಮಿಶ್ರಣ ಕೂಡ ಸೇರಿದೆ. ವೈದ್ಯರು ಸಹ ದೇಹದ ತಾಪಮಾನವನ್ನು ಬೆಚ್ಚಗೆ ಇರಿಸುವಲ್ಲಿ ಇವುಗಳ ಪಾತ್ರ ದೊಡ್ಡದು ಎಂದು ಹೇಳುತ್ತಾರೆ.

ಇದರಲ್ಲಿ ಹಾಕಿರುವ ಉತ್ಪನ್ನಗಳು

• ಹಾಲು 2 ಕಪ್

• ಖರ್ಜೂರಗಳು 8 ರಿಂದ 10

• ಏಲಕ್ಕಿ ಪುಡಿ ಅಥವಾ ದಾಲ್ಚಿನ್ನಿ ಪುಡಿ

ತಯಾರು ಮಾಡುವ ವಿಧಾನ

• ನೀವು ಬೇಕಾದರೆ ಒಣ ಖರ್ಜೂರ ಬೇಕಾದರೂ ತೆಗೆದುಕೊಳ್ಳಬಹುದು. ಹಸಿ ಖರ್ಜೂರ ಬೇಕಾದರೂ ತೆಗೆದುಕೊಳ್ಳಬಹುದು. ಇವುಗಳನ್ನು ಇಡೀ ರಾತ್ರಿ ಹಾಲಿನಲ್ಲಿ ನೆನೆ ಹಾಕಬೇಕು.

• ಬೆಳಗಿನ ಸಮಯದಲ್ಲಿ ಹಾಲಿನ ಸಹಿತ ಖರ್ಜೂರಗಳನ್ನು ಬಿಸಿ ಮಾಡಬೇಕು. ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು.

• ಈಗ 2 ಕಪ್ ಹಾಲನ್ನು ಪಾನ್ ನಲ್ಲಿ ಸುರಿದು ಅದಕ್ಕೆ ನೀವು ರುಬ್ಬಿಟ್ಟುಕೊಂಡ ಖರ್ಜೂರದ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಏಲಕ್ಕಿ ಪುಡಿ ಅಥವಾ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಕುದಿಸಬೇಕು.

• ಬಿಸಿ ಇರುವಾಗ ಇದನ್ನು ಕುಡಿಯಬೇಕು. ರಾತ್ರಿ ಮಲಗುವ ಮುಂಚೆ ಅಥವಾ ಬೆಳಗ್ಗೆ ತಿಂಡಿ ಸಮಯದಲ್ಲಿ ಸೇವಿಸಿ.

ಖರ್ಜೂರದ ಹಾಲು ಕುಡಿಯುವುದರ ಆರೋಗ್ಯ ಪ್ರಯೋಜನಗಳು

ಮೂಳೆಗಳ ಆರೋಗ್ಯಕ್ಕೆ

ಮೂಳೆಗಳನ್ನು ಗಟ್ಟಿ ಮಾಡುವಲ್ಲಿ ಖರ್ಜೂರ ಮತ್ತು ಹಾಲು ಜಂಟಿಯಾಗಿ ಕೆಲಸ ಮಾಡುತ್ತದೆ. ನಿಮಗೆ ಒಂದು ವೇಳೆ ಕೀಲು ನೋವು, ಮೂಳೆ ನೋವು ಇದ್ದರೆ, ನೀವು ಚಳಿಗಾಲದಲ್ಲಿ ಖರ್ಜೂರ ಮಿಶ್ರಿತ ಹಾಲಿನ ಸೇವನೆ ಮಾಡುವುದು ಒಳ್ಳೆಯದು. ಪ್ರತಿ ದಿನ ನಮ್ಮ ಕಾರ್ಯ ಚಟುವಟಿಕೆಗಳನ್ನು ಉತ್ತಮವಾಗಿ ಮಾಡಿಕೊಳ್ಳಲು ಇದು ನೆರವಾಗುತ್ತದೆ.

ಸೋಂಕು ನಿವಾರಕ

ಖರ್ಜೂರಗಳಲ್ಲಿ ಸಲ್ಫರ್ ಪ್ರಮಾಣ ಹೇರಳವಾಗಿದೆ. ಇದು ಸೋಂಕು ನಿವಾರಕವಾಗಿ ಕೆಲಸ ಮಾಡಿ ನಿಮ್ಮ ತ್ವಚೆಯ ಅಲರ್ಜಿ ದೂರ ಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಎದುರಾಗುವ ಅಲರ್ಜಿ ತೊಂದರೆ ಗಳನ್ನು ಇದು ಹೋಗಲಾಡಿಸುತ್ತದೆ.

ಲೈಂಗಿಕ ಸಮಸ್ಯೆ ಪರಿಹಾರವಾಗುತ್ತದೆ

• ಚಳಿಗಾಲದಲ್ಲಿ ಬಿಸಿಲು ತುಂಬಾ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೈಯಲ್ಲಿ ಆಲಸ್ಯ ತುಂಬುತ್ತದೆ ಮತ್ತು ಕೆಲವೊಮ್ಮೆ ತಲೆಸುತ್ತು ಬರುತ್ತದೆ

• ಆದರೆ ನೈಸರ್ಗಿಕವಾದ ಸಕ್ಕರೆ ಅಂಶ ಇರುವ ಖರ್ಜೂರ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಇಡೀ ದಿನ ಚಟುವಟಿಕೆಯಿಂದ ಕೂಡಿರಲು ಅನುಕೂಲವಾಗುತ್ತದೆ. ಇದರಿಂದ ಎಲ್ಲಾ ಕೆಲಸಗಳನ್ನು ಅತ್ಯಂತ ಹುರುಪಿನಿಂದ ಮಾಡಬಹುದು. ದೇಹದಲ್ಲಿ ಮತ್ತು ಮನಸ್ಸಿನಲ್ಲಿ ತಾಜಾತನ ಮನೆಮಾಡುತ್ತದೆ.

• ಚಳಿಗಾಲದಲ್ಲಿ ಸಾಮಾನ್ಯವಾಗಿ ಲೈಂಗಿಕ ಬಯಕೆ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯ ಜೊತೆ ನೀವು ಆನಂದವಾಗಿ ಕಾಲ ಕಳೆಯಲು ಖರ್ಜೂರ ಮತ್ತು ಹಾಲು ಸಹಾಯ ಮಾಡುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ

ಗ್ಯಾಸ್ಟ್ರಿಕ್ ಮತ್ತು ಜೀರ್ಣಾಂಗ ವ್ಯವಸ್ಥೆಯ ತೊಂದರೆಯಿದ್ದವರು ಖರ್ಜೂರ ಮಿಶ್ರಿತ ಹಾಲನ್ನು ಆಗಾಗ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ದೇಹಕ್ಕೆ ನಾರಿನ ಅಂಶ ಹೆಚ್ಚಾಗಿ ಸಿಗುತ್ತದೆ ಮತ್ತು ಜೀರ್ಣಶಕ್ತಿ ಅಭಿವೃದ್ಧಿಯಾಗುತ್ತದೆ. ನಿಮಗೆ ದೇಹದಲ್ಲಿ ಅತ್ಯುತ್ತಮ ಬ್ಯಾಕ್ಟೀರಿಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಇದು ನೆರವಾಗುತ್ತದೆ.

ಹಿಂದಿನ ಲೇಖನರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್
ಮುಂದಿನ ಲೇಖನಟಿಪ್ಪು ಕುರಿತು ಪ್ರತಾಪ್ ಸಿಂಹ ಅವರೊಂದಿಗೆ ವಿಚಾರ ವಿನಿಮಯಕ್ಕೆ ಸಿದ್ದ: ಪ್ರೊ.ಬಿ.ಕೆ.ಚಂದ್ರಶೇಖರ್